ದುಬೈ(www.vknews.in): ಪ್ರಪಂಚದಾದ್ಯಂತ ಮುಸ್ಲಿಮರ ವಿರುದ್ಧ ಹೆಚ್ಚುತ್ತಿರುವ ದ್ವೇಷದ ಮಾತು ಮತ್ತು ಇಸ್ಲಾಮೋಫೋಬಿಯಾ ಬಗ್ಗೆ ಸೌದಿ ಅರೇಬಿಯಾ “ಗಂಭೀರ ಕಳವಳ” ವ್ಯಕ್ತಪಡಿಸಿದೆ.
ಜಿನೀವಾದಲ್ಲಿನ ಮಾನವ ಹಕ್ಕುಗಳ ಮಂಡಳಿಯನ್ನು ಉದ್ದೇಶಿಸಿ, ವಿಶ್ವಸಂಸ್ಥೆಯ ಸೌದಿ ಖಾಯಂ ಪ್ರತಿನಿಧಿ ಅಬ್ದುಲ್ ಅಝೀಝ್ ಅಲ್-ವಾಸಿಲ್ ‘ಇಸ್ಲಾಮೋಫೋಬಿಯಾ ಹಾಗೂ ಮುಸ್ಲಿಮರನ್ನು ಗುರಿಯಾಗಿಸಿಕೊಂಡಿರುವ ಧ್ವೇಷವು ಸ್ಥಿರ ಸಮಾಜಗಳ ಸುರಕ್ಷತೆಗೆ ಸ್ಪಷ್ಟ ಬೆದರಿಕೆಯಾಗಿದೆ’ ಎಂದು ಹೇಳಿದರು.
“ಸೌದಿ ಅರೇಬಿಯಾವು ಕೆಲವು ನಿರ್ಧಿಷ್ಟ ರಾಷ್ಟ್ರಗಳಲ್ಲಿ ರಾಜಕೀಯ ವೈಷಮ್ಯಗಳ ನಡುವಿನ ದ್ವೇಷದ ಮಧ್ಯೆ ಧಾರ್ಮಿಕ ಅಲ್ಪಸಂಖ್ಯಾತರನ್ನು ಹೆಚ್ಚು ಗುರಿಯಾಗಿಸಲಾಗುತ್ತಿರುವ ಕುರಿತು ಕಳವಳವನ್ನು ವ್ಯಕ್ತಪಡಿಸುತ್ತಿದೆ .ವಿಶ್ವಸಂಸ್ಥೆಯು ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕಾದ ಅಗತ್ಯತೆಯನ್ನು ವಿಶ್ವಸಂಸ್ಥೆಯ ಸೌದಿ ರಾಜತಾಂತ್ರಿಕರು ಒತ್ತಿ ಹೇಳಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.