ಜೆದ್ದಾ(www.Vknews.in): ಕರೋನವೈರಸ್ ಹರಡುವಿಕೆಯ ನಿಯಂತ್ರಣದ ಭಾಗವಾಗಿ ಕಳೆದ ಒಂದು ತಿಂಗಳಿನಿಂದ ಸೌದಿ ಅರೇಬಿಯಾದಲ್ಲಿ ರೆಸ್ಟೊರೆಂಟ್, ಜಿಮ್ ಹಾಗೂ ಚಿತ್ರಮಂದಿರಗಳ ಮೇಲಿನ ಎಲ್ಲಾ ನಿರ್ಬಂಧಗಳನ್ನು ತೆಗೆದು ಹಾಕಲಾಗುವುದೆಂದು ಸೌದಿ ಆಂತರಿಕ ಸತಿವಾಲಯವು ತಿಳಿಸಿದೆ. ಆದರೆ ಸಭೆ ಸಮಾರಂಭಗಳಂತಹ ಸಾಮಾಜಿಕ ಕೂಟಗಳ ಮೇಲಿನ ನಿಯಂತ್ರಣ ಮುಂದುವರಿಸಲು ನಿರ್ಧರಿಸಲಾಗಿದ್ದು, ಸಮಾರಂಭಗಳಲ್ಲಿ 20ಕ್ಕಿಂತ ಹೆಚ್ಚು ಜನ ಸೇರುವುದನ್ನು ನಿಷೇಧಿಸಲಾಗಿದೆ.
ಮಾರ್ಚ್ 7ರಿಂದ ಜಿಮ್ ಹಾಗೂ ಚಿತ್ರಮಂದಿರಗಳು ಎಂದಿನಂತೆ ಕಾರ್ಯ ನಿರ್ವಹಿಸಲಿದ್ದು, ಪಾರ್ಸೆಲ್ ಗಳಿಗೆ(ಟೇಕ್ ಎವೇ) ಸೀಮಿತವಾಗಿದ್ದ ರೆಸ್ಟೊರೆಂಟ್ ಗಳಲ್ಲಿ ಡೈನ್ ಇನ್ ಸೇವೆಯು ಪುನಃ ಪ್ರಾರಂಭವಾಗಲಿದೆ. ಸಾದಾರಣ ಚಟುವಟಿಕೆಗಳ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸದರೂ ರಾಷ್ಟ್ರದಾದ್ಯಂತ ಕಟ್ಟಿನಿಟ್ಟಿವ ತಪಾಸಣೆ ಮುಂದುವರಿಯುತ್ತದೆ. ಆರೋಗ್ಯ ಸಚಿವಾಲಯದ ಮುಂಜಾಗ್ರತಾ ಕ್ರಮಗಳು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವಾಲಯವು ಎಚ್ಚರಿಕೆ ನೀಡಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.