(www.vknews.com) : ಪ್ರವಾಜಗರು ನಡೆದು ಬಂದ ದಾರಿ, ಇಸ್ಲಾಮ್ ದೀನ್ ನೆಲೆಯೂರಲು ಅವರುಗಳು ಆ ಕಾಲಗಳಲ್ಲಿ ಪಟ್ಟ ಕಷ್ಟಗಳು , ತ್ಯಾಗಗಳು ನಾವೀಗ ಊಹಿಸಿಕೊಳ್ಳಲು ಅಸಾಧ್ಯ.ಸಾವಿರಾರು ವರುಷಗಳ ಅಂತರಗಳು ಒಂದೊಂದು ನಬಿವರ್ಯರ ಕಾಲಗಳ ಮದ್ಯೆ ಇರುವುದನ್ನು ಹದೀಸ್ ಗಳ ವಿಶ್ಲೇಷಣೆಗಳಲ್ಲಿ ಕಾಣಬಹುದು. ಅಲ್ಲಿಂದ ಇಲ್ಲಿಯವರೆಗು ಇಸ್ಲಾಮ್ ಅನ್ನುವ ಸತ್ಯವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರವಾಜಗರು ನಡೆಸಿದ ತ್ಯಾಗ , ಪಟ್ಟಿರುವ ಕಷ್ಟ, ಸಹಿಸಿಕೊಂಡ ಹಿಂಸೆ …ಅದೆಲ್ಲವೂ ನಮ್ಮಯ ಊಹೆಗೆ ನಿಲುಕುವಂತದ್ದಲ್ಲ. ಇಸ್ಲಾಮ್ ಪರಿಪೂರ್ಣತೆ ಯೊಂದಿಗೆ ನಮ್ಮಯ ಕೈ ಸೇರಿದೆ.ಇದೆಲ್ಲವ ಅರಿತ ನಂತರವೂ ,ಯಾವುದೇ ತ್ಯಾಗಕ್ಕೂ ಕಷ್ಟಕ್ಕೂ ಗುರಿಯಾಗದ ನಾವುಗಳು ಇನ್ನೂಇಸ್ಲಾಮ್ ನ ಬಗ್ಗೆ ಸಂಪೂರ್ಣ ಅರಿತುಕೊಂಡು ಕೂಡ ಇಸ್ಲಾಮ್ ತೋರಿದ ದಾರಿಯಲ್ಲಿನಡೆದಿಲ್ಲವೆಂದಾದರೆ, ಪರಲೋಕ ದಲ್ಲಿ ನಮ್ಮಯ ಸ್ಥಿತಿ ಹೇ ಗಿರಬಹುದು ಎಂಬುವುದು ಊಹೆಗೂ ನಿಲುಕದ್ದು.ಪ್ರತೀ ಒಬ್ಬ ನಬಿಯರ ಕಾಲಗಳು ವಿಭಿನ್ನವಾಗಿದ್ದು,ಆ ಕಾಲಗಳು ಜನ ಜೀವನ ಹೇಗಿತ್ತು,ಇಸ್ಲಾಮ್ ನ ಸತ್ಯತೆ ಜನರು ಮನಗೊಂಡಿರುವ ಸಂದರ್ಭಗಳು ಹೇಗಿತ್ತು ಎಂಬುವರನ್ನು ತಿಳಿದುಕೊಳ್ಳ ಬೇಕಿದೆ. ಇದಿರೀಸ್ ಸ್ವಲಾತು ವಸ್ಸಲಾಮ್ ರ ಜೀವನ ಹಾಗೂ ಮರಣ ಮತ್ತೂ ದೀನ್ ನ್ನು ನಡೆಸಿದ ರೀತಿ ವಿಭಿನ್ನತೆಯಿಂದ ಕೂಡಿದೆ .
ಆದಂ ನಬಿ ಅಲೈಹಿ ಸಲಾತು ವಸ್ಸಲಾಂ ರು ನಬಿವರ್ಯರಲ್ಲೇ ಪ್ರಥಮರು.ಅಲ್ಲಿಂದಲೇ ಮಾನವ ಕುಲದ ಉಗಮ. ಒಂದೊಂದು ನಬಿಯರ ಕಾಲವು ಸುದೀರ್ಘ ವರುಷಗಳಷ್ಟು ಇತ್ತೆಂದು ನಾವೂ ವಿಶ್ಲೇಷಣೆ ಗಳಲ್ಲಿ ಕಾಣಬಹುದು.
ಮುತ್ತು ನಬಿ ಮುಹಮ್ಮದ್ ಮುಸ್ತಫಾ ಸಲ್ಲಲ್ಲಹು ಆಲೈಹಿ ವಸಲ್ಲಮರು ನಮಗೆ ತೋರಿದ ದಾರಿ ಪರಿಪೂರ್ಣ ಇಸ್ಲಾಮ್. ಕುರಾನ್ ಅಲ್ಲಾಹ್ ನ ವಾಕ್ಯಗಳಾಗಿವೆ .ಆ ಕುರಾನ್ ನ್ನು ನಮ್ಮಯ ಕೈಗೆ ನೀಡಿದವರು ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಹುವ ಆಲೈಃಹಿ ವಸಲ್ಲಮರು ಆಗಿರುವರು. ಇಸ್ಲಾಮ್ ನ ಬಗ್ಗೆ ರಸೂಲರು ಪೂರ್ಣತೆಯೊಂದಿಗೆ ನಮಗೆ ಮನವರಿಕೆ ನೀಡಿದ್ದಾಗಿದೆ.ರಸೂಲ್ ನೀಡಿದ ಪರಿಶುದ್ಧಕುರಾನ್ ,ಹದೀಸ್ ವಾಕ್ಯಗಳು, ಮೂಡಿಸಿದ ಅರಿವುಗಳೊಂದಿಗೆ ದೀನ್ ಸಂಪೂರ್ಣ ಗೊಂಡಿದೆ ಹಾಗೂ ಇಲ್ಲಿಗೆ ದೀನ್ ವಚನಗಳು ಕೊನೆಗೊಂಡಿದೆ, ಇನ್ನೊಬ್ಬರು ನಬಿ ಬರಲಿಕ್ಕು ಇಲ್ಲ ಇಸ್ಲಾಮ್ ಲ್ಲಿ ಇನ್ನು ಬದಲಾವಣೆ ಆಗಲಿಕ್ಕು ಇಲ್ಲ. ಹಾಗೊಂದು ವೇಳೆ ರಸೂಲ್ ತೋರಿದ ದಾರಿ ಅಲ್ಲದೆ ಮತ್ತೊಂದು ಆಚರಣೆ , ಆಚಾರವ ಜೀವನದೊಂದಿಗೆ ನಡೆಸಿರುವಿರಾದರೆ ಅದು “ಬಿಧ್ಹತ್ “ಆಗಿರುವುದು. ಬಿದ್ಧ್ಹತ್ ಅಂದರೆ ಇಸ್ಲಾಮ್ ನಲ್ಲಿ ರಸೂಲ್ ತೋರಿದ ಮಾರ್ಗ ವಿಚಾರಗಳಲ್ಲದೆ ಇನ್ನೊಂದು ಆಚರಣೆ ,ವಿಚಾರ ,ಸಂಪ್ರದಾಯಗಳನ್ನು ದೀನ್ ನ ಜೊತೆ ನಡೆಸುವುದಾಗಿದೆ . ಇದನ್ನೇ ಶಿರ್ಕ್ ಎನ್ನಲಾಗಿದೆ, ಹಾಗೂ ಶಿರ್ಕ್ ಹರಾಮ್ ಕೂಡ ಆಗಿದೆ.ಹರಾಮ್ ಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲೇ ಬೇಕಿದೆ.
ಮುಂದುವರೆಯುವುದು….
– ಸಾರ ಅಲಿ, ಪರ್ಲಡ್ಕ, ಪುತ್ತೂರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.