ಜೆದ್ದಾ(www.vknews.in): ಸೌದಿಯಾದ್ಯಂತ ಎರಡನೇ ಹಂತದ ಕೊವಿಡ್ ಸಾಂಕ್ರಾಮಿಕ ವ್ಯಾಪಕವಾಗಿ ಹರಡುತ್ತಿದ್ದು, ಎರಡು ತಿಂಗಳ ಹಿಂದೆ ಕೇವಲ ಎರಡಂಕೆಗೆ ಸೀಮಿತವಾಗಿದ್ದ ದೈನಂದಿನ ಕೊವಿಡ್ ಪ್ರಕರಣಗಳ ಸಂಖ್ಯೆ ಇದೀಗ 900ಕ್ಕೆ ತಲುಪಿದೆ. ವೈರಸ್ ಹರಡದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿರುವ ಸೌದಿ ಸರಕಾರವು ಮುಂಬರುವ ರಂಜಾನ್ ಮಾಸದಲ್ಲಿ ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಹೊಸ ಮಾರ್ಗಸೂಚಿಯಂತೆ ರಂಜಾನ್ ಮಾಸದಲ್ಲಿ ಎಲ್ಲಾ ಮಸೀದಿಗಳಲ್ಲಿಯೂ ಇಫ್ತಾರ್, ಸುಹೂರ್ ಹಾಗೂ ಇಹ್ತಿಕಾಫ್ ಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಲ್ಲದೆ ಈದ್ ಉಲ್ ಫಿತರ್ ನಮಾಝ್ ನಿರ್ವಹಿಸಲು ಆಯ್ದ ಕೆಲವೇ ಮಸೀದಿಗಳಿಗೆ ಮಾತ್ರ ಅನುಮತಿ ನೀಡಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.