(www.vknews.com) : ಮುಸ್ಲಿಮರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು ಸಾಲದಲ್ಲಿರುವ ಸಮುದಾಯ. ಕೈ ಸಾಲದಿಂದ ಬ್ಯಾಂಕ್ ವರೆಗೆ, ರೇಶನ್ ಅಂಗಡಿಯಿಂದ ಚಿನ್ನದ ಅಂಗಡಿಯವರೆಗೆ. ಆಸ್ತಿ ಸಾಲದಿಂದ, ಮೆಡಿಕಲ್ ಕಾಲೇಜ್ ವರೆಗೆ ಸಾಲದಲ್ಲಿ ಮುಸ್ಲಿಮರದು ಮೇಲುಗೈ. ಒಬ್ಬ ವ್ಯಕ್ತಿ, ಸಮುದಾಯ, ದೇಶ ಸಾಲದಲ್ಲಿ ಇದೆ ಎಂದರೆ, ಅದು ಆರ್ಥಿಕವಾಗಿ ನಷ್ಟದಲ್ಲಿದೆ ಎಂದೇ ಲೆಕ್ಕ. 1990 ರ ನಂತರ ಸ್ಥಿರ ಆಸ್ತಿಯು ಕ್ಷೀಣಿಸುತ್ತಿರುವ ಸಮುದಾಯಗಳ ಪೈಕಿಯು ಮುಸ್ಲಿಮರೇ ಪ್ರಥಮ ಸ್ಥಾನದಲ್ಲಿದ್ದಾರೆ. ಸಂಪಾದನೆಗಿಂತ ಹೆಚ್ಚು ಖರ್ಚು ಮಾಡುವ ಸಮುದಾಯದ ಪೈಕಿಯು ಮುಸ್ಲಿಮರು ನಂ-1 ಸ್ಥಾನವನ್ನು ನಿರಂತರ ಕಾಯ್ದುಕೊಂಡು ಬಂದಿದ್ದಾರೆ. 1990 ರ ನಂತರ ಜನಿಸಿದ ತಲೆಮಾರಿನಲ್ಲಿ ಅತೀ ಹೆಚ್ಚು ಶಿಕ್ಷಣ ವಂಚಿತರು ಇರುವುದರಿಂದ ವ್ಯಾಪಾರ, ಟ್ರೇಡಿಂಗ್, ಮಧ್ಯವರ್ತಿ, ಕಾರ್ಮಿಕ ವರ್ಗದಲ್ಲಿ , ಬೀಡಿ, ಕೂಲಿ ಯನ್ನೇ ಅವಲಂಭಿಸಿದ ಈ ಸಮುದಾಯ ಭದ್ರತೆ ಇರುವ ಯಾವುದೇ ಗಳಿಕೆ ಇಲ್ಲದೆ ಬದುಕು ಕಟ್ಟುತ್ತಿದೆ. ಇದೇ ಶಿಕ್ಷಣ ವಂಚಿತ ಸಮುದಾಯದ ಪೈಕಿ ಶೇಖಡ ಒಂದರಷ್ಟು ಜನರು, ಯಶಸ್ವಿಗಳಾಗಿದ್ದು ಇದೆ. ಮರದ ವ್ಯಾಪಾರ, ಬೀಡಿ ಉಧ್ಯಮ, ಮೀನು ಮತ್ತು ಪಿಶ್ ಮೀಲ್, ಟ್ರೇಡಿಂಗ್(ಅಡಿಕೆ, ಮೆಣಸು), ತರಕಾರಿ, ಮರ್ಚೈಂಟೈಸ್ ನಲ್ಲೂ ಯಶಸ್ವಿಯಾದವರೂ ಇದ್ದಾರೆ. 2002 ರ ನಂತರ ಬಿಲ್ಡರ್, ಶಿಕ್ಷಣ, ಆರೋಗ್ಯ, ಜಮೀನು ವ್ಯಾಪಾರದಲ್ಲಿ ಕೆಲವರು ಯಶಸ್ವಿಯಾದರೆ, 2010 ರ ನಂತರ ಮ್ಯಾನ್ ಪವರ ಕಂಪೆನಿಗಳ ಮೂಲಕ, ಹೋಟೇಲ್ ಮತ್ತು ವಸ್ತ್ರಮಳಿಗೆ ಮೂಲಕವು ವಿದೇಶದಲ್ಲಿ ಹಾಗೇ ಜಿಲ್ಲೆಯಲ್ಲಿ ಕೆಲವರು ಶ್ರೀಮಂತರಾದರು.
ಮುಸ್ಲಿಮರ ವ್ಯಾಪಾರದ ಮೈಂಡ್ ಸೆಟ್ಟ್ ಗೆ ಎರಡು ಉದಾಹರಣೆ ಕೊಡುತ್ತೇನೆ. ಮೊಬೈಲ್ ಅಂಗಡಿಯ ಯಶಸ್ವಿಯ ಸಂದರ್ಭ ಎಲ್ಲಿ ನೋಡಿದರು ಮೊಬೈಲ್ ಸೆಂಟರ್ ಮುಸ್ಲಿಮರು ಆರಂಭಿಸಿದರು. ಈಗ ಅವರೇ ಒಂದೊಂದಾಗಿ ಮುಚ್ಚುತ್ತಿದ್ದಾರೆ. ಸೌದಿಯಲ್ಲಿ ಮ್ಯಾನ್ ಪವರ ಕಂಪೆನಿಗಳು ಯಶಸ್ವಿಯಾದಾಗ ಹಲವು ಮುಸ್ಲಿಮರು ಅದನ್ನು ಆರಂಭಿಸಿದರು ಕೈ ಸುಟ್ಟು ಕೊಂಡರು. ಹೊಸ ಐಡಿಯಾಗಳಿಲ್ಲದೆ, ಆಧುನಿಕ ಜಗತ್ತಿನ ಮಾರುಕಟ್ಟೆಯ ಬೇಡಿಕೆಯನ್ನು ಅರಿಯದೆ ವ್ಯಾಪಾರವನ್ನು ನಕಲಿ ಮಾಡುವ ಮನೋಭಾವ ಮುಸ್ಲಿಮರನ್ನು ವಿಫಲರನ್ನಾಗಿಸಿತು. ಒಂದು ಕಾಲದಲ್ಲಿ ಬೀಡಿ ಉಧ್ಯಮದಿಂದ ಕೆಲವರು ಶ್ರೀಮಂತರಾಗಿದ್ದರು. ಈಗ ಬೀಡಿ ಉಧ್ಯಮ ನೆಲಕಚ್ಚಿದೆ. ಆದರೆ ಐಟೀ ಉಧ್ಯಮದ ಈ ಕಾಲಘಟ್ಟದಲ್ಲಿ ಎರಡು ಬ್ಯಾರಿಗಳನ್ನು ಬಿಟ್ಟು ಬೇರೆ ಯಾರೂ ಅದರತ್ತ ಒಲವು ತೋರಿಸಲೇ ಇಲ್ಲ. ಇಂಡಸ್ಟ್ರಿಯಲ್ಲಿ ಮರದ ಇಂಡಸ್ಟ್ರಿಯಿಂದ ಬಿಸ್ಲೆರಿಯವರೆಗೆ ಮುಸ್ಲಿಮರಿಗೆ ಸಾಗಲು ಸಾಧ್ಯವಾಗಿದೆ ಹೊರತು ಬೇಡಿಕೆ ಇರುವ ರೆಡಿಮೇಡ್, ಪ್ರೊಡಕ್ಟ್, ಹೋಮ್ ಅಪ್ಲಯಂನ್ಸಸ್ಸ್, ಕಾಸ್ಮೇಟಿಕ್ಸ್ , ಹೆಲ್ತ್(ಮೆಡಿಸಿನ್) ಮತ್ತು ಪುಡ್ ಇಂಡಸ್ಟ್ರಿಯಲ್ಲಿ ಯಾವುದೇ ಸಾಧನೆಯೇ ಇಲ್ಲ.
ಚಿಕನ್ ಐಟಂ ಗಳನ್ನು ಮೇಕಿಂಗ್ ಮಾಡಿ ತಿನ್ನುವುದರಲ್ಲಿ ಮುಸ್ಲಿಮರದು ನಂ-1 ಕೊಡುಗೆ ಇದೆ. ಆದರೆ ಚಿಕನ್ ಪೌಡರ್ ಮಾಡುವ ಕಂಪೆನಿ ಆರಂಭಿಸುವ ಕನಸು ಇಲ್ಲ. ಬಿರಿಯಾಣಿ ಮತ್ತು ತಿಂಡಿ ವೈವಿಧ್ಯತೆಯಲ್ಲಿ ನಮ್ಮದೇ ಮೇಲುಗೈ ಆದರೆ, ಕೃಷಿ- ಹೈಣುಗಾರಿಕೆ-ಪಶುಸಂಗೋಪನೆಯಲ್ಲಿ ನಾವು 1 ಶೇಖಡಾವೂ ಭಾಗಿಯಾಗಿಲ್ಲ. ಈಗ ಟೀವಿ ಮಾಧ್ಯಮದ ಬಗ್ಗೆ ನಾವು ಹೇಳುತ್ತೇವೆ. ಪತ್ರಿಕೋಧ್ಯಮ ಅಥವಾ ಮಾಹಿತಿ ತಂತ್ರಜ್ಞಾನದಲ್ಲಿ ನಮಗೆ ಉಧ್ಯಮ ಆಸಕ್ತಿ ಇಲ್ಲ. ಉಧ್ಯಮ ಆಸಕ್ತಿ ಇಲ್ಲದೆ ಸೋಶಿಯಲ್ ಸರ್ವಿಸ್ಸ್ ನಲ್ಲಿ ಮಾಧ್ಯಮ ನಡೆಸುವುದಕ್ಕೆ ಸಾಧ್ಯವೂ ಇಲ್ಲ. ನೀವು ಒಂದು ಲಕ್ಷ ಶೇರ್ ಹಾಕಿ ಮಾಧ್ಯಮ ಮಾಡಿ, ಲಾಭದ ಮೇಲೆ ಸಂಸ್ಥೆಯನ್ನು ಕೊಂಡೊಯ್ಯಬೇಕು. ಅದಕ್ಕೆ ಮ್ಯಾನೇಜ್ ಮೆಂಟ್ ಬೇಕು. ರಾಜಕೀಯ ರಹಿತವಾಗಿದ್ದರೂ ಲಾಭದ ಮೇಲೆ ಕಾರ್ಯತಂತ್ರಗಳು ಇರಬೇಕು. ಹೀಗೆ ನಾವು ಆಲೋಚನೆ ಇಲ್ಲದೆ, ಪ್ಲಾನಿಂಗ್ ಇಲ್ಲದೆ ಏನೂ ಮಾಡಲು ಸಾಧ್ಯವಿಲ್ಲ.
ಮಕ್ಕಳಿಗೆ ಪ್ಯಾಂಪರ್ಸ್ ಬೇಕೆ ಬೇಕು ಆದರೆ ಸಣ್ಣ ಕೈಗಾರಿಕೆಯಲ್ಲಿ (ಸರಕಾರದ ಸೌಲತ್ತು ಇದೆ) ಯಾವುದೇ ಸಾಧನೆ ಇಲ್ಲ. ಒಂದು ಪ್ಯಾಪಂರ್ಸ್ ತಯಾರುಗೊಳಿಸುವ ಕಂಪೆನಿ ಆರಂಭಿಸುವಷ್ಟೂ ಆಲೋಚನೆ ಮಾಡುವುದಿಲ್ಲ. ನಿನ್ನೆ ಬರಾತಿನ ರಾತ್ರಿ ಅತ್ತೆಯ ಮಗ ಬಂದಿದ್ದ. ಏನು ಮಾಡುತ್ತಾ ಇದ್ದಿ ಎಂದು ಕೇಳಿದೆ. ಬೆಂಗಳೂರಿನಲ್ಲಿ ಬೇಕರಿ ಇಟ್ಟಿದ್ದೇನೆ ಎಂದ. ತಿಂಗಳಿಗೆ 40 ಸಾವಿರ ಆದಾಯ ಇದೆ ಎಂದು ಹೇಳಿದ. ನಾನು, ಅದರಲ್ಲಿ ತಿಂಗಳು 20 ಸಾವಿರ ಉಳಿಸಿ 20 ಸಾವಿರ ಖರ್ಚು ಮಾಡು ಎಂದೆ. ಆತ, ಇಲ್ಲ ಅಣ್ಣ, ಈಗ ಅದಕ್ಕೆ 6 ಲಕ್ಷಕ್ಕೆ ಪಾರ್ಟಿ ಬಂದಿದೆ. ನಾಲ್ಕು ಲಕ್ಷ ಲಾಭ ಇದೆ. ಮಾರುತ್ತಾ ಇದ್ದೇನೆ. ಈ ಶನಿ, ಕೊರೊನಾ ಹಾಳು ಮಾಡಿತು ಎಂದ. ಅವನನ್ನು ಕುಳ್ಳಿರಿ, ನನಗೆ ಮಹಮದ್ ಅಲಿ ಸಾಬ್ ಕೊಟ್ಟ ಉಪದೇಶ ಕೊಟ್ಟೆ. 40 ಸಾವಿರ ಲಾಭದ ಮೂಲಕ 12 ತಿಂಗಳಲ್ಲಿ 4 ಲಕ್ಷ 80 ಸಾವಿರ ಗಳಿಸಬಹುದು. ಅದೇ ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಕೊಯ್ದರೆ ಸಿಗುವ ನಾಲ್ಕು ಲಕ್ಷದಲ್ಲಿ ಬೇರೊಂದು ಅಂಗಡಿ ಮಾಡಿ, ಅದು ಲಾಸ್ ಆದರೆ, ಅದೂ ಇಲ್ಲ ಇದೂ ಇಲ್ಲಾ ಎಂದೆ. ಇದಕ್ಕಿಂತಲೂ ಇಂಟ್ರಸ್ಟಿಂಗ್ ಸ್ಟೋರಿ ಬೇರೊಂದು ಇದೆ. ನನ್ನ ಸ್ನೇಹಿತನಲ್ಲಿ ಸ್ವಿಪ್ಟ್ ಕಾರು ಇದೆ. ಕಳೆದ ಆರು ವರ್ಷದಲ್ಲಿ ಅದಕ್ಕೆ 12 ಸಾವಿರದಂತೆ ಕಂತು ಕಟ್ಟಿ ಮುಗಿಸಿದ. ಈಗ ಆತ ಸೆಲ್ಟ್ರೋ ತೆಗೆಯಲು ಬುಕ್ಕ್ ಮಾಡಿದ್ದಾನೆ. ತಿಂಗಳಿಗೆ 16 ಸಾವಿರ ಕಂತು ಕಟ್ಟುವ ಪ್ಲಾನ್ ಆತನದು. ಸಾಲ ಮುಕ್ತ ಆದಾಗ ಮತ್ತೆ ಅದೇ ವಾಹನದ ಬಯಕೆಗೆ ಸಾಲ ಹೆಚ್ಚು ಮಾಡುವ ನಮ್ಮ ಸ್ಥಿತಿಯನ್ನು ಇದು ವಿವರಿಸುತ್ತದೆ.
2018ರಲ್ಲಿ ಮೂರು ಕೋಟಿಯ ನಾಲ್ಕು ಕಾರು ಮಂಗಳೂರಿಗೆ ಬಂದಿತ್ತು. ನಾಲ್ಕನ್ನೂ ಖರೀದಿಸಿದ್ದು ಮುಸ್ಲಿಮರಾಗಿದ್ದಾರೆ. ವಾಹನಕ್ಕೆ ಕಟ್ಟುವ ಇಂನ್ಸೂರೆಂನ್ಸಲ್ಲಿ ಈ ಸಮುದಾಯದ ವಾರ್ಷಿಕ ಶೈಕ್ಷಣಿಕ ಮತ್ತು ಆರೋಗ್ಯ ಸಮಸ್ಯೆಯನ್ನು ನಿವಾರಿಸಬಹುದು. ಬಿ.ಎಂ.ಡಬ್ಲ್ಯು ಎಕ್ಸ್ 5 ಮಾರುಕಟ್ಟೆಗೆ ಬಂದಾಗ ಒಬ್ಬನೇ ಮುಸ್ಲಿಮ್ ವ್ಯಕ್ತಿ ಎರಡು ಖರೀದಿಸಿದ. ಕಿಯಾದ 15 ಲಕ್ಷ ಮೌಲ್ಯದ ಕಾರು 2019 ರ ಕೊನೆಯಲ್ಲಿ ಬಂದಾಗ ಉಭಯ ಜಿಲ್ಲೆಯಲ್ಲಿ ಒಟ್ಟು 359 ಕಾರು ಮಾರಾಟವಾಗಿತ್ತು. ಅದರಲ್ಲಿ 178 ಕಾರು ಮುಸ್ಲಿಮರೇ ಖರೀದಿಸಿದ್ದು. ಬರೋಬ್ಬರಿ 26 ಕೋಟಿ ಇನ್ವೆಸ್ಟ್ ಮೆಂಟ್. ವಾರ್ಷಿಕ ಬಡ್ಡಿ 2 ಕೋಟಿಯಷ್ಟು. ಇದು ಒಂದು ಕಾರಿನ ಕಥೆ….ಇನ್ನಷ್ಟು ವಿಚಿತ್ರ ಸತ್ಯವನ್ನು ನಾಳೆ ಹೇಳುತ್ತೇನೆ..
– ಸುನ್ನಿಟುಡೇ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.