ಜುಬೈಲ್ (www.vknews.com) : ಕಾಟಿಪಳ್ಳ ಮುಸ್ಲಿಂ ಯೂತ್ ಅಸೋಸಿಯೇಷನ್ ಈಸ್ಟರ್ನ್ ಪ್ರೋವಿನ್ಸ್ ಇದರ 32ನೇ ವಾರ್ಷಿಕ ಮಹಾಸಭೆ ದಿನಾಂಕ 2, ಎಪ್ರಿಲ್, 2021 ಶುಕ್ರವಾರ ಜುಮಾ ನಮಾಝಿನ ಬಳಿಕ ಜುಬೈಲ್ ನಲ್ಲಿ ಅಧ್ಯಕ್ಷರಾದ ಪಿ.ಎ. ಮುಹಮ್ಮದ್ ಬಶೀರ್ ರವರ ಘನ ಅಧ್ಯಕ್ಷತೆಯಲ್ಲಿ ಜರುಗಿತು. ಪ್ರಾರಂಭದಲ್ಲಿ ಇಸ್ಮಾಯೀಲ್ ಕಾಟಿಪಳ್ಳ ರವರ ದುಆ ದೊಂದಿಗೆ ಪ್ರಾರಂಭ ಗೊಂಡಿತು.
ಅಧ್ಯಕ್ಷರಾಗಿ ನೌಶಾದ್ ರಶೀದ್, ಗೌರವಾಧ್ಯಕ್ಷರಾಗಿ ಪಿ.ಎ. ಮುಹಮ್ಮದ್ ಬಶೀರ್, ಕೋಶಾಧಿಕಾರಿಯಾಗಿ ಪಿ.ಎಂ. ತಾಜುದ್ದೀನ್, ಸಲಹೆಗಾರರಾಗಿ ನಝೀರ್, ಬಿ.ಎಂ.ರಫೀಖ್, ಪಿ.ಎಂ. ಅಬ್ದುಲ್ ಹಮೀದ್, ಮುಸ್ತಫ, ಪಿ. ಇ. ಮುಸ್ತಫ, ಶುಐಬ್ ಹಾಗೂ ಪ್ರಧಾನ ಕಾರ್ಯದರ್ಶಿ ಯಾಗಿ ಇಸ್ಮಾಯೀಲ್ ಕಾಟಿಪಳ್ಳ ಆಯ್ಕೆ ಗೊಂಡರು.
ಆಡಿಟರ್ ಅಬ್ದುಲ್ ಗಫ್ಫಾರ್ ರವರು ಚುನಾವಣಾಧಿಕಾರಿಯಾಗಿ 33ನೇ ವರ್ಷದ 2021-22ನೇ ಸಾಲಿಗೆ ಈ ಮೇಲೆ ತಿಳಿಸಿದ ಸದಸ್ಯರನ್ನು ನೇಮಕ ಮಾಡಿದರು.
ದಮ್ಮಾಂ, ಕೋಬರ್, ಜುಬೈಲ್, ಅಲ್-ಹಸ್ಸಾ ಮತ್ತು ಜೀಝಾನ್ ನ ಸದಸ್ಯರು ಮಹಾಸಭೆಗೆ ಆಗಮಿಸಿದ್ದು ಝೂಂ ನಲ್ಲಿ ಜಿದ್ದಾ, ರಿಯಾದ್ ಮಾತ್ರವಲ್ಲದೆ ಊರಿನಲ್ಲಿರುವ ಸದಸ್ಯ ಮಿತ್ರರು ವೀಕ್ಷಿಸಿ ಸಮಾರಂಭದ ಯಶಸ್ವಿಗೆ ಸಾಕ್ಷಿಯಾದರು. ಉಪಾಧ್ಯಕ್ಷ ರಾಗಿ ಕಲಂದರ್, ಶಬೀರ್, ಕಾರ್ಯದರ್ಶಿಗಳಾಗಿ ರಫೀಖ್, ಆಸಿಫ್, ಸಂಘಟನಾ ಕಾರ್ಯದರ್ಶಿಯಾಗಿ ಶಕೀಲ್, ಜೊತೆ ಕೋಶಾಧಿಕಾರಿಯಾಗಿ ಶರ್ವಾನ್, ಮೀಡಿಯಾ ಕವರೇಜ್ ಗಾಗಿ ನೌಫಲ್ ಆಯ್ಕೆ ಗೊಂಡರು.
ಅಮಾನುದ್ದೀನ್ ಸೂರ: ಅರ್ರಹ್ಮಾನ್ ಖಿರಾಅತ್ ಪಾರಾಯಣಗೈದರು. ಶರ್ ವಾನ್ ಇಬ್ನ್ ಮುಹ್ಯಿದ್ದೀನ್ ಸ್ವಾಗತಿಸಿದರು. ಇಸ್ಮಾಯಿಲ್ ಕಾಟಿಪಳ್ಳ ವಿರಚಿತ ಮರ್ ಹಬ ಯಾ ಶಹ್ ರ ರಮಳಾನ್ ಬುಲೆಟಿನ್ ಬಿಡುಗಡೆ ಗೊಳಿಸಲಾಯಿತು. ಇಸ್ಮಾಯೀಲ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು ಕೊನೆಯಲ್ಲಿ ಧನ್ಯವಾದಗೈದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.