(www.vknews.com) : ಪೀರ್ ಮೊಹಲ್ಲಾ ಕೂರ್ನಡ್ಕ ಜಮಾಅತ್ ಮೊಹಲ್ಲಾ ಖಾಝಿ ಅಲ್ ಹಾಜ್ ಅಬ್ದುಲ್ ಖಾದರ್ ಅಲ್ ಖಾಸಿಮಿ ಉಸ್ತಾದರು ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗಳ ಪರೀಕ್ಷಾ ತಯಾರಿಗಾಗಿ ಉತ್ತೇಜನ ಕೊಡಲು ಮೊಹಲ್ಲಾದ ಮನೆಗಳಿಗೆ ಬೇಟಿ ನೀಡಿ ವಿಧ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಪ್ರೀತಿ ಮತ್ತು ಅಭಿಮಾನದಿಂದ ವಿಧ್ಯಾರ್ಥಿಗಳೊಂದಿಗೆ ಮಾತನಾಡಿದ ಖಾಝಿಯವರು, ಶಿಕ್ಷಣದಿಂದ ಮಾತ್ರವೇ ನಿಮ್ಮ ಮತ್ತು ರಾಷ್ಟ್ರದ ಪ್ರಗತಿ ಸಾಧ್ಯ ಎಂದು ಹಿತವಚನ ನೀಡಿದರು. ಚೆನ್ನಾಗಿ ಕಲಿಯಬೇಕು, ಕ್ರೀಡೆ-ವಿನೋದ ಮತ್ತು ಮೊಬೈಲ್ ಹವ್ಯಾಸದಿಂದ ದೂರ ಇದ್ದು ಕೇವಲ ಪಠಣಕ್ಕಾಗಿ ಹೆಚ್ಚಿನ ಸಮಯ ಮೀಸಲಿಡಬೇಕು. ಇಂದು ನೀವು ಶಿಕ್ಷಣದಲ್ಲಿ ತೋರಿಸುವ ಆಸಕ್ತಿ ಮತ್ತು ಉತ್ಸಾಹ ಭವಿಷ್ಯದ ನಿಮ್ಮ ಬದುಕನ್ನು ಸುಂದರವಾಗಿಸುತ್ತದೆ. ಹೆತ್ತವರಿಗೆ – ಸಮುದಾಯಕ್ಕೆ -ಕಲಿತ ಶಾಲೆಗೆ ವಿಧೇಯತೆ ತೋರಿಸಿ, ಜೀವನದಲ್ಲಿ ಸಾಧನೆ ಮಾಡಿ ಎಲ್ಲರ ಪ್ರಶಂಸೆ ಗಳಿಸಬೇಕು ಎಂದವರು ವಿಧ್ಯಾರ್ಥಿಗಳಿಗೆ ಹುರಿದುಂಬಿಸಿದರು.
ಯುವಕರು ಕಲಿಕೆಯಲ್ಲಿ ಹಿಂದಿದ್ದಾರೆ, ಯುವತಿಯರು ಮುಂದಿರುವುದರ ಕುರಿತು ಪ್ರತೀ ಜಮಾಅತ್ ಗಳು ಚಿಂತನ ಮಂಥನ ನಡೆಸಬೇಕು. ಶಿಕ್ಷಣದ ಈ ಅಸಮತೋಲನ ಭವಿಷ್ಯದಲ್ಲಿ ಲಾಭಕ್ಕಿಂತಲೂ ಸಮಸ್ಯೆ ಸೃಷ್ಠಿಸಬಲ್ಲುದು ಎಂದು ಅಭಿಪ್ರಾಯ ಮಾಡಿದ ಅವರು, ಪ್ರತೀ ಜಮಾಅತ್ ಕಮೀಟಿಗಳು ಬಹಳ ಎಚ್ಚರಿಕೆಯಿಂದ ಭವಿಷ್ಯದ ತಲೆಮಾರಿನ ಕುರಿತು ಕಾಳಜಿ ವಹಿಸಿ ದುಡಿಯಬೇಕು ಎಂದರು. ಫೀರ್ ಮೊಹಲ್ಲಾ ಕೂರ್ನಡ್ಕ ಜಮಾಅತ್ ನ ಅಧ್ಯಕ್ಷರಾದ ಖಾಸಿಂ ರವರು, ಅಗತ್ಯ ಇದ್ದರೆ ವಿಧ್ಯಾರ್ಥಿಗಳಿಗೆ ಮದರಸದಲ್ಲಿ ಟ್ಯೂಶನ್ ಸೌಲಭ್ಯ ಕಲ್ಪಿಸುವುದಾಗಿ ಹೇಳಿದರು. ಪುತ್ತೂರು ಕಮ್ಯೂನಿಟಿ ಸೆಂಟರ್ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಯುತ ಲೊಕೇಶ್ ರವರ ಮಾರ್ಗದರ್ಶನದಲ್ಲಿ ವಿಧ್ಯಾರ್ಥಿಗಳ ಎಸ್.ಎಸ್.ಎಲ್.ಸಿ ಪರೀಕ್ಷೆಯ ಉನ್ನತಿಗಾಗಿ ಶ್ರಮಿಸುವುದಕ್ಕೆ ಖಾಝಿಯವರು ಮತ್ತು ಜಮಾಅತ್ ಅಧ್ಯಕ್ಷರು ಅಭಿನಂದನೆ ಸಲ್ಲಿಸಿದರು. ಜಮಾಅತ್ ನ ಮನೆ ಬೇಟಿ ಸಂದರ್ಭ ಸಲ್-ಸಬೀಲ್ ಯಂಗ್ ಮೆನ್ಸ್ ಅಧ್ಯಕ್ಷರಾದ ಸಿರಾಜ್ ಭಾಗವಹಿಸಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.