ಜೆದ್ದಾ(www.Vknews.in): ರೂಪಾಂತರಿತ ಕೊವಿಡ್ ಅಟ್ಟಹಾಸಕ್ಕೆ ಪ್ರಪಂಚವು ಮತ್ತೆ ನಲುಗುತ್ತಿರುವಂತೆಯೇ ಇತ್ತ ಸೌದಿ ಅರೇಬಿಯಾವು ತನ್ನ ಅಂತರರಾಷ್ಟ್ರೀಯ ವಿಮಾನಯಾನ ಪುನರಾರಂಭವನ್ನು ಯಾವುದೇ ಕ್ಷಣ ಪುನರ್ ಪರಿಶೀಲಿಸುವುದಾಗಿ ಸೌದಿ ಕೊವಿಡ್ ಮೇಲುಸ್ತುವಾರಿ ಸಮಿತಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಮೇ 17ರಂದು ಪೂರ್ಣಪ್ರಮಾಣದ ಅಂತರರಾಷ್ಟ್ರೀಯ ವಿಮಾನಯಾನವನ್ನು ಪುನರಾರಂಭಿಸಲು ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿರುವುದಾಗಿ ಸೌದಿ ವಿಮಾನಯಾನ ಸಚಿವಾಲಯವು ಈ ಹಿಂದೆ ಪ್ರಕಟಿಸಿದ್ದರೂ ಕೂಡ ಅಧಿಕಾರಿಗಳ ಈಗಿನ ಹೊಸ ಸ್ಪಷ್ಟೀಕರಣವು ಅಂತರರಾಷ್ಟ್ರೀಯ ವಿಮಾನಯಾನ ಪುನರಾರಂಭವನ್ನು ಮತ್ತೆ ಅನಿಶ್ಚಿತತೆಗೆ ತಳ್ಳಿದೆ. ಒಂದುವೇಳೆ ಮೇ 17ಕ್ಕೆ ಅಂತರರಾಷ್ಟ್ರೀಯ ವಿಮಾನಯಾನವು ಪುನರ್ ಪ್ರಾರಂಭವಾದರೂ ಕೂಡ ಭಾರತ ಸೇರಿದಂತೆ ಕೊವಿಡ್ ವ್ಯಾಪಕವಾಗುತ್ತಿರುವ ರಾಷ್ಟ್ರಗಳಿಂದ ಸೌದಿಗೆ ನೇರ ವಿಮಾನಗಳ ಹಾರಾಟವು ಅಸಂಭವೆಂದೇ ಹೇಳಲಾಗುತ್ತಿದೆ ಮಾತ್ರವಲ್ಲ ಸೌದಿಗೆ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರಿಗೆ ಕೊವಿಡ್ ವ್ಯಾಕ್ಸಿನ್ ಸರ್ಟಿಫಿಕೆಟ್ ಕಡ್ಡಾಯಗೊಳಿಸುವ ಸಾಧ್ಯತೆಯಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.