(www.vknews.com) : ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಉದ್ಯಮಿ ಮಹಮ್ಮದ್ ಹಾಜಿ ಕುಕ್ಕುವಳ್ಳಿ ಅವರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನ ವಿವಿಧ ಗ್ರಾಮದ ಅತೀ ಕಡು ಬಡತನದ ಕುಟುಂಬದ 200 ಕ್ಕೂ ಅರ್ಹ ಮನೆಗಳಿಗೆ ವಿಶೇಷ ರಂಝಾನ್ ಕಿಟ್ ವಿತರಣೆ ಹಾಗೂ ಇನ್ನಿತರ ರೂಪದಲ್ಲಿ ಧನ ಸಹಾಯ ಕಾರ್ಯಕ್ರಮ ಮಾಡಲಾಯಿತು.
ಈ ಕಾರ್ಯಕ್ರಮ ಮಾಡಲು ವಿಶೇಷವಾಗಿ ನಮ್ಮ ಊರಿನ ಹಾಗೂ ಗಲ್ಫ್ ರಾಷ್ಟ್ರದಲ್ಲಿ ದುಡಿಯುತ್ತಿರುವ ಎಲ್ಲಾ ಸಮಾಜ ಸೇವೆಯ ನಾಗರಿಕರು ನಮಗೆ ಉತ್ತಮ ರೀತಿಯಲ್ಲಿ ವಾಟ್ಸಫ್ ಗ್ರೂಪ್ ಮೂಲಕ ಉತ್ತಮ ಸ್ಪಂದನೆ ಕೊಟ್ಟು ಉನ್ನತ ರೀತಿಯಲ್ಲಿ ಧನ ಸಹಾಯ ಮಾಡಿ ಸಹಕರಿಸಿದ್ದಾರೆ.
ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಬಣದ ಜಿಲ್ಲಾ ನಾಯಕರಾದ ಉದ್ಯಮಿ ಜಲೀಲ್ ಹಾಜಿ ಬೈತಡ್ಕ, ಉದ್ಯಮಿ ಆಸೀಫ್ ಹಾಜಿ 313 ತಂಬುತ್ತಡ್ಕ, ಉದ್ಯಮಿ ಹಮೀದ್ ಕೊಮ್ಮೆಮ್ಮಾರ್, ಉದ್ಯಮಿ ನೌಶಾದ್ ರೋಯಲ್ ಈಶ್ವರಮಂಗಲ, ನಾಸೀರ್ ನಿಡ್ಪಳ್ಳಿ, ಉದ್ಯಮಿ ಅಶ್ರಫ್ ಪೆರ್ಲಂಪಾಡಿ, ಯುವ ವಾಗ್ಮಿ ಇಕ್ಬಾಲ್ ಬಾಳಿಲ, ಉದ್ಯಮಿ ಶಾಫಿ ಪೇರಲ್ತಡ್ಕ ಹಾಗೂ ಇನ್ನಿತರ ನಾಯಕರು ಉಪಸ್ಥಿತಿ ಇದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.