(www.vknews.com) : ದೇಶದಲ್ಲಿ ಕೊರೋನ 2ನೇ ಅಲೆಯಿಂದಾಗಿ ಮತ್ತೊಮ್ಮೆ ಜನಜೀವನ ಅಸ್ತವ್ಯಸ್ಥಗೊಳ್ಳುತ್ತಿದೆ. ಇದೊಂದು ದುರ್ಘಟನೆಯು ಚೇತರಿಸಿಕೊಳ್ಳಲು ಸರಕಾರದೊಂದಿಗೆ ಜನಸಾಮಾನ್ಯರ ಸಹಭಾಗಿತ್ವ ಅನಿವಾರ್ಯವಾಗಿದೆ.ಆಫತ್ಕಾಲದಲ್ಲಿ ಜನರು ದೇವರಿಗೆ ಮೊರೆ ಹೋಗುವುದು ಜಾಸ್ತಿ ಅದು ಸಹಜವೂ ಹೌದು. ಅದರಿಂದ ಮಾನಸಿಕ ನೆಮ್ಮದಿ, ಆತ್ಮ ಸ್ಥೈರ್ಯ ದೊರೆಯುತ್ತದೆ. ಆಯಾ ಧರ್ಮಾನುಯಾಯಿಗಳಿಗೆ ಅವರವರ ಶೈಲಿಯಲ್ಲಿ ಅವರವರ ಕೇಂದ್ರಗಳಲ್ಲಿ ಕೋವಿಡ್ 19 ರ ನಿಯಮಗಳು ಪಾಲಿಸಿ ಪ್ರಾರ್ಥನೆಗಳು ನಡೆಸಲು ಅವಕಾಶವಿದ್ದಲ್ಲಿ ನಡೆಯಬಹುದಿತ್ತು .ಇದು ಪವಿತ್ರ ರಂಝಾನ್ ಮಾಸ.
ಮುಸ್ಲಿಮರಿಗೆ ಅತೀ ಪವಿತ್ರವೂ ಆರಾಧನಾ ಕರ್ಮಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಮಾಸವಾಗಿದೆ.ದೈನಂದಿನ ನಮಾಝ್ ಗಳನ್ನು ಮಸೀದಿಯಲ್ಲೇ ನಿರ್ವಹಿಸಲು ಉತ್ಸಾಹ ತೋರುತ್ತಾರೆ. ಆದರೆ ದುರದೃಷ್ಟವಶಾತ್ ಈ ವರ್ಷವೂ ಅದರಿಂದ ವಂಚಿಸಲ್ಫಟ್ಟಿದೆ.ಸರಕಾರ ಮತ್ತು ಆರೋಗ್ಯ ಇಲಾಖೆಯ ಎಲ್ಲಾ ನಿಯಮಗಳನ್ನು ಪಾಲಿಸಿ ವ್ಯವಸ್ಥಿತವಾಗಿ ಮಸೀದಿಗಳಲ್ಲಿ ಇದನ್ನು ಕಾರ್ಯರೂಪಕ್ಕೆ ತರುವಲ್ಲಿ ಆಯಾ ಮಸೀದಿ ಆಡಳಿತ ಮಂಡಳಿ ಹಾಗೂ ಜನರು ಉತ್ಸುಕರಾಗಿರುತ್ತಾರೆ. ಆದುದರಿಂದ ಸಂಬಂಧಪಟ್ಟವರು ಈ ಬಗ್ಗೆ ಪುನಃಪರಿಶೀಲಿಸಿ ಅವಕಾಶ ಕಲ್ಪಿಸುವರೆಂಬ ಆಶಾ ಭಾವನೆ ಜನರಿಗಿದೆ.
✍️ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಪ್ರಧಾನ ಕಾರ್ಯದರ್ಶಿ SMA ಸುಳ್ಯ ರೀಜ್ಯನಲ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.