(www.vknews.com) : ಅಲ್ಲಿಂದ ಹಝ್ರಾಹಿಲ್ ನೀಡಿದ ಉತ್ತರವು ಹೀಗಿತ್ತು,…”ಅಲ್ಲಾಹ್ ಕೊಟ್ಟ ಅಜ್ಞೆಯ ಹೊರತು ಆಯುಷ್ಯದ ಅವಧಿಯನ್ನು ಹೆಚ್ಚು ಅಥವಾ ಕಡಿಮೆ ಗೊಳಿಸುವ ಯಾವೊಂದು ಅಧಿಕಾರ ನಮಗಿಲ್ಲ.ಹಾಗೆ ಒಮ್ಮೆಯೂ ನಡೆದ,ನಡೆಸಿದ ವರದಿಯೇ ಇಲ್ಲ. ಇದು ಅಸಾಧ್ಯವಿರುವ ವಿಷಯವೂ ಆಗಿದೆ”ಎಂಬುವುದಾಗಿತ್ತು.ಆದರೂ, ಮರಣದ ಸಮಯದ ಬಗ್ಗೆ ಒಂದು ನಿಖರ ಮಾಹಿತಿ ಬೇಕಿದ್ದರೆ ನೀಡಬಹುದು ಎಂದು ಹಝ್ರಾಹೀಲ್ ಔದಾರ್ಯವಾಗಿ ಆ ಮಲಕ್ ಗೆ ತಿಳಿಸಿದರು.ಹಾಗಿದ್ದರೆ ಇದ್ರೀಸ್ ನಬಿಯವರ ಮರಣದ ಸಮಯದ ಮಾಹಿತಿಯನ್ನಾದರು ತಿಳಿಸಿಕೊಡಲು ಮನವಿ ಮಾಡಿದರು.
ಅಂತೆಯೇ ಅಝ್ರಾಹಿಲ್ ಇದ್ರೀಸ್ ನಬಿಯ ಮರಣ ಸಮಯದ ಪರಿಶೀಲನೆ ನಡೆಸಲು,ಮರಣ ದಿನಾಂಕ ಅಥವಾ ಸಮಯ ನಿಗದಿಪಡಿಸಿರುವ ಪಟ್ಟಿಗಳನ್ನು ಪರಿಶೀಲಿಸಿದರು. ಆದರೆ ಇದ್ರೀಸ್ ನಬಿಯರ ಮರಣ ದಿನಾಂಕವು ಹತ್ತಿರದಲ್ಲಿ ಎಲ್ಲೂ ಕಾಣಸಿಗಲಿಲ್ಲ.ಅಂತೆಯೇ ಸೂರ್ಯ ಮಲಕ್ ಗೆ ಅದನ್ನು ತಿಳಿಸಲಾಯಿತೆಂದು ಮಹಾನ್ ಗ್ರಂಥಗಳಲ್ಲಿ ಉಲ್ಲೇಖನಗೊಂಡಿರುತ್ತದೆ.
ಇಂತಹ ಮಹಾನ್ ಇಬಾದತ್ ನಡೆಸುವ ,ಈ ವ್ಯಕ್ತಿಯನ್ನು ನನಗೂ ಬೇಟಿ ಆಗಬೇಕೆಂದು ಆಶಿಸಿ ಹಝ್ರಾಹೀಲ್ ಅ. ಸ ಅಲ್ಲಾಹ್ ನಲ್ಲಿ ಅನುಮತಿಯನ್ನು ಪಡೆದುಕೊಂಡರು. ಮತ್ತು ಭೂಲೋಕಕ್ಕೆ ಬಂದು ಇದ್ರೀಸ್ ನಬಿ ಆ. ಸ ರವರ ಮನೆಗೆ ಮಾರುವೇಷದಲ್ಲಿ ಬಂದರು. ಇದ್ರೀಸ್ಅ. ಸ.ಹಗಲಲ್ಲಿ ಉಪವಾಸ ವ್ರತ ಆಚರಿಸುತ್ತಿದ್ದರು ಹಾಗೂ ಉಪವಾಸ ತ್ಯಜಿಸುವ ಸಂದರ್ಭದಲ್ಲಿ ಈ ಅಥಿತಿ ಯನ್ನು ಆಹಾರ ಸೇವಿಸಲು ಕ್ಷಣಿಸುತಿದ್ದರು.ಆದರೆ ಮಲಕ್ ಆಹಾರ ಸೇವಿಸಲು ಸಮ್ಮತಿಸುತ್ತಿರಲಿಲ್ಲ. ಅನ್ನ,ನೀರು ಇಲ್ಲದೆ ಕೇವಲ ಇಬಾದತ್ ನಡೆಸುತಿದ್ದ ಈ ಮನುಷ್ಯ 3ದಿನಗಳು ಕೂಡ ಮನೆಯಲ್ಲಿದ್ದುಕೊಂಡು,ಆಹಾರ, ಪಾನೀಯ ಸೇವನೆಗೆ ಆಹ್ವಾನಿಸಿದರು ಸಮ್ಮತಿಸುತ್ತಿರಲಿಲ್ಲ. ಹೀಗೇ 3 ನೆಯ ದಿನ ನಬಿ ಕೇಳಿಯೇ ಬಿಟ್ಟರು ,ಅನ್ನ ನೀರಿಲ್ಲದೆ ಇಬಾದತ್ ಮಾತ್ರ ನಡೆಸುವ ತಾವು ಯಾರೆಂದು ತಿಳಿಸಿರಿ ಎಂದು.ಆವಾಗ ಇದ್ರೀಸ್ ನಬಿಯಲ್ಲಿ ನುಡಿದೇ ಬಿಟ್ಟರು “ನಾನು ಮಲಕುಲ್ ಮೌತ್ ಹಝ್ರಾಹೀಲ್” ಎಂದು.
ಈ ಮಲಕ್ ಕೂಡ ಇದ್ರೀಸ್ ನಬಿಯ ಸ್ನೇಹ ಬೆಳೆಸಲು ಅಶಿಸಿದ್ದರು.ಅಂತೆಯೇ ಇದ್ರೀಸ್ ನಬಿ ಆ. ಸ ರು ಮಲಖ್ ರಲ್ಲಿ ಕೋರಿಕೆ ಒಂದನ್ನು ಮುಂದಿಟ್ಟರು.ಒಮ್ಮೆ ಮರಣದ ರುಚಿ ನೋಡಬೇಕಿದೆ ನನಗೆ,ನನ್ನ ರೂಹನ್ನು(ಆತ್ಮ) ದೇಹದಿಂದ ಬೇರ್ಪಡಿಸಿದಾಗ ಆಗುವ ಅನುಭವವನ್ನುಪಡೆಯಲು ಅನುವು ನೀಡಲು ಕೋರಿಕೊಂಡರು.
ಅಲ್ಲಾಹ್ ನ ಅನುಮತಿ ಪಡೆದು, ನಬಿಯ ಕೋರಿಕೆಯಂತೆ ರೂಹ್ ತೆಗೆದರು. ಹಾಗೆಯೇ ಸ್ವಲ್ಪ ಸಮಯದ ನಂತರ ಪುನಃ ದೇಹಕ್ಕೆ ರೂಹ್ ಮರಳಿಸಿದರು.
ಆ ಅನುಭವದ ಬಗ್ಗೆ ಇದ್ರೀಸ್ ನಬಿಯರಲ್ಲಿ ಮಲಕ್ ಕೇಳಿದಾಗ ಆ ಕಠಿಣ,ಘೋರವಾದ ನೋವನ್ನು ಹೇಗೆಂದು ವಿವರಿಸಲು ಸಾಧ್ಯವಿದೆ ?ಅನ್ನುವದಾಗಿತ್ತು ಉತ್ತರ.
ಇದಾದ ನಂತರ ಇದ್ರೀಸ್ ನಬಿಯು ಇನ್ನೂ ಒಂದು ಬೇಡಿಕೆಯನ್ನು ಮಲಕ್ ನ ಮುಂದಿಟ್ಟರು.ನನಗೆ ಒಮ್ಮೆ ನರಕವನ್ನು ನೋಡಬೇಕೆಂದು ಮನ್ನಣೆ ಮಾಡಿದರು.
ಹಿಂದಿನ ಭಾಗಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ…
ಮುಂದುವರೆಯುವುದು….
– ಸಾರ ಅಲಿ, ಪರ್ಲಡ್ಕ, ಪುತ್ತೂರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.