ಜೆದ್ದಾ(www.vknews.in): ಭಾರತದಲ್ಲಿ ಕೊವಿಡ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಭಾರತೀಯರ ಸೌದಿ ಪ್ರವೇಶವು ಮತ್ತಷ್ಟು ಜಟಿಲವಾಗತೊಡಗಿದೆ. ಕಳೆದ ವರ್ಷ ಸೌದಿಯಿಂದ ಭಾರತಕ್ಕೆ ನೇರ ವಿಮಾನ ಹಾರಾಟ ಸ್ಥಗಿತಗೊಂಡ ನಂತರ ಭಾರತೀಯರು ಯುಎಇ, ಓಮಾನ್, ಬಹ್ರೈನ್, ಕತಾರ್, ನೇಪಾಳ ಹಾಗೂ ಮಾಲ್ದಿವ್ ರಾಷ್ಟ್ರಗಳಿಗೆ ಪ್ರಯಾಣಿಸಿ ಅಲ್ಲಿ 14 ದಿನಗಳ ಕ್ವಾರೆಂಟೈನ್ ಪೂರ್ತಿಗೊಳಿಸಿದ ನಂತರ ಸೌದಿಗೆ ಪ್ರಯಾಣಿಸಲು ಅನುಮತಿಸಲಾಗುತ್ತಿತ್ತು. ಆದರೆ ರೂಪಾಂತರ ಕೊವಿಡ್ ಹಾವಳಿಯ ನಂತರ ಸೌದಿ ಅರೇಬಿಯಾವು ಯುಎಇ ಮಾರ್ಗವಾಗಿ ಸೌದಿ ಪ್ರವೇಶವನ್ನು ನಿಷೇಧಿಸಿದರೆ ಓಮಾನ್ ಹಾಗೂ ಕತಾರ್ ಭಾರತೀಯ ಸಂದರ್ಶಕರಿಗೆ ಪ್ರವೇಶವನ್ನು ನಿರಾಕರಿಸಿತ್ತು.
ಇದೀಗ ಏಪ್ರಿಲ್ 27ರಿಂದ ಮಾಲ್ದೀವ್ ಕೂಡ ಭಾರತೀಯರಿಗೆ ವಾಸ್ತವ ಹೂಡಲು ರೂಂ ಗಳನ್ನು ನೀಡಬಾರದೆಂದು ಎಲ್ಲಾ ಹೊಟೆಲ್ ಗಳಿಗೆ ಆದೇಶ ನೀಡಿದೆ ಮಾತ್ರವಲ್ಲ ನೇಪಾಳ ಕೂಡ ತಕ್ಷಣದಿಂದ ಸಂದರ್ಶಕರಿಗೆ ಕೊವಿಡ್ ಪಿಸಿಆರ್ ಪರೀಕ್ಷೆಗಳನ್ನು ಸ್ಥಗಿತಗೊಳಿಸಿದೆ. ಸದ್ಯ ಈ ಕಾರಣದಿಂದಾಗಿ ಈ ಎರಡು ರಾಷ್ಟ್ರಗಳಿಂದ ಭಾರತೀಯರ ಸೌದಿ ಪ್ರವೇಶದ ನಿರೀಕ್ಷೆಗೆ ತಣ್ಣೀರೆರಚಿದೆ. ಇದೀಗ ಭಾರತೀಯರಿಗೆ ಬಹ್ರೇನ್ ಮೂಲಕ ಮಾತ್ರ ಸೌದಿ ಪ್ರವೇಶವನ್ನು ಮಾಡಬಹುದಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.