(www.vknews.com) : ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರು,ಬಡವರ ಕಣ್ಮಣಿ ಎಂದೇ ಹೆಸರಾಗಿದ್ದ ಉದ್ಯಮಿ ಮಹಮ್ಮದ್ ಹಾಜಿ ಕುಕ್ಕುವಳ್ಳಿ ಅವರ ನೇತೃತ್ವದಲ್ಲಿ ಪುತ್ತೂರು ತಾಲೂಕಿನ ನೆಟ್ಟನಿಗೆ ಮೂಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಈಶ್ವರಮಂಗಲ, ಮೇನಾಲ,ಪಳ್ಳತ್ತೂರು, ಮೆಣಸಿನಕಾಣ,ಮಾಡನ್ನೂರು ವಿವಿಧ ಪರಿಸರದ ಅತೀ ಕಡು ಬಡತನದ ಅರ್ಹತೆ ಪಟ್ಟ ಕುಟುಂಬಕ್ಕೆ 50 ಕ್ಕೂ ಮಿಕ್ಕಿ ಮನೆಗಳಿಗೆ ವಿಶೇಷ ರಂಝಾನ್ ಹಾಗೂ ಲಾಕ್ ಡೌನ್ ಕಿಟ್ ವಿತರಣೆ ಮಾಡಲಾಯಿತು ಹಾಗೂ ಇನ್ನಿತರ ರೂಪದಲ್ಲಿ ಧನ ಸಹಾಯ ಕಾರ್ಯಕ್ರಮ ಮಾಡಲಾಯಿತು.
ಈ ಕಿಟ್ ಕಾರ್ಯಕ್ರಮ ಮಾಡಲು ವಿಶೇಷವಾಗಿ ನಮ್ಮ ಊರಿನ ಹಾಗೂ ಗಲ್ಫ್ ರಾಷ್ಟ್ರದಲ್ಲಿ ದುಡಿಯುತ್ತಿರುವ ಎಲ್ಲಾ ಸಮಾಜ ಸೇವೆಯ ನಾಗರಿಕರು ನಮಗೆ ಉತ್ತಮ ರೀತಿಯಲ್ಲಿ ವಾಟ್ಸಫ್ ಗ್ರೂಪ್ ಮೂಲಕ ಉತ್ತಮ ಸ್ಪಂದನೆ ಕೊಟ್ಟು ಉನ್ನತ ರೀತಿಯಲ್ಲಿ ಧನ ಸಹಾಯ ಮಾಡಿ ಸಹಕರಿಸಿದ್ದಾರೆ
ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಬಣದ ಜಿಲ್ಲಾ ನಾಯಕರು ಹಾಗೂ ಯುವ ಉದ್ಯಮಿ ಜಲೀಲ್ ಹಾಜಿ ಬೈತಡ್ಕ,ಯುವ ಉದ್ಯಮಿ ಆಸೀಫ್ ಹಾಜಿ 313 ತಂಬುತ್ತಡ್ಕ,ಕರವೇ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಮೀದ್ ಕೊಮ್ಮೆಮ್ಮಾರ್,ಯುವ ಉದ್ಯಮಿ ನೌಶಾದ್ ರೋಯಲ್ ಈಶ್ವರಮಂಗಲ,ಜನಬ್ ನಾಸೀರ್ ಆಟೋ ನಿಡ್ಪಳ್ಳಿ,ಯುವ ಉದ್ಯಮಿ ಅಶ್ರಫ್ ಪೆರ್ಲಂಪಾಡಿ, ಯುವ ವಾಗ್ಮಿ ಇಕ್ಬಾಲ್ ಬಾಳಿಲ,ಕಾಂಗ್ರೆಸ್ ಈಶ್ವರಮಂಗಲ ಗ್ರಾಮ ನಾಯಕರಾದ ಅಬ್ಬುಲ್ ರಹ್ಮಾನ್ ಹಾಜಿ ಮೇನಾಲ ಹಾಗೂ ಅಬ್ಬುಲ್ಲ ಮೆಣಸಿನಕಾಣ,ಯುವ ಉದ್ಯಮಿಗಳಾದ ತ್ವಾಹ PS ಮೇನಾಲ,ಝಕರಿಯ ಮೇನಾಲ,ಆರೀಸ್ ಮೇನಾಲ ಈ ಸಂದರ್ಭದಲ್ಲಿ ಘನ ಉಪಸ್ಥಿತಿ ಇದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.