ಮಂಗಳೂರು (ವಿಶ್ವಕನ್ನಡಿಗ ನ್ಯೂಸ್): ಬ್ಯಾರೀಸ್ ವೆಲ್ಪೇರ್ ಫಾರಮ್ ಅಬುಧಾಬಿ. ಯು. ಎ. ಇ. ಇದರ ವತಿಯಿಂದ, ಸುಮಾರು 125 ರಮಝಾನ್ ಆಹಾರ ಕಿಟ್ ಗಳನ್ನು, ದ.ಕ. ಜಿಲ್ಲೆಯ ವಿವಿಧ ಪ್ರದೇಶಗಳಾಗಿರುವ ಉಪ್ಪಿನಂಗಡಿ, ನೆಲ್ಯಾಡಿ, ಗುರುವಾಯನಕೆರೆ , ಕಕ್ಕಿಂಜೆ ಪ್ರದೇಶಗಳಲ್ಲಿ ಹಾಗೂ ಎರಡನೇ ಹಂತದಲ್ಲಿ ವಿಟ್ಲ , ಪರಿಸರದ ಒಕ್ಕೆತ್ತೂರು ಮತ್ತು ಕನ್ಯಾನ ಅಲ್ಲದೆ ಮೆಲ್ಕಾರ್ ಆಸುಪಾಸುವಿನಲ್ಲಿರುವ ಕೆಲವು ಆಯ್ದ ಕುಟುಂಬಗಳಿಗೆ ವಿತರಿಸಲಾಯಿತು.
ಬ್ಯಾರೀಸ್ ವೆಲ್ಪೇರ್ ಫೋರಮ್ ಇದರ ಪದಾಧಿಕಾರಿ ಹನೀಫ್ ಉಳ್ಳಾಲ್ ಮತ್ತು ಇಕ್ವಾನ್ ಆಹ್ಮದ್ ಕುದ್ರೋಳಿಯವರ ನೇತೃತ್ವದ ತಂಡ ಈ ಕಿಟ್ ವಿತರಣೆಯನ್ನು ನಡೆಸಿತು. ಈ ಸರಳ ಕಾರ್ಯಕ್ರಮದಲ್ಲಿ ಸ್ಥಳೀಯವಾಗಿ ಸಹಕರಿಸಿದ ಹನೀಫ್ ಹಾಜಿ ಗೋಳ್ತಮಜಲು , ಇಸ್ಮಾಯಿಲ್ ನೆಲ್ಯಾಡಿ ,ಶಾಕಿರ್ ಹಕ್ ನೆಲ್ಯಾಡಿ, ರಶೀದ್ ಕಕ್ಕಿಂಜೆ , ಅಬ್ದುಲ್ ಖಾದರ್ ಕುಕ್ಕಾಜೆ, ಎಮ್. ಎ. ರಹಿಮಾನ್ ವಿಟ್ಲ ಅಲ್ಲದೆ ಹಕೀಮ ಮತ್ತು ಅಲ್ ವಫಾ ಟ್ರಸ್ಟ್ ಮಂಗಳೂರು ಹಾಗೂ ರಮಝಾನ್ ಉಡುಗೊರೆಯನ್ನು ಸ್ವೀಕರಿಸಿದ ಎಲ್ಲಾ ಕುಟುಂಬಗಳಿಗೆ ಬ್ಯಾರೀಸ್ ವೆಲ್ಪೇರ್ ಫಾರಮ್ ಅಬುಧಾಬಿ ಇದರ ಅಧ್ಯಕ್ಷರಾಗಿರುವ ಮೊಹಮ್ಮದ್ ಅಲಿ ಉಚ್ಚಿಲ ,ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಮದುಮೂಲೆ , ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಬಿ.ಡಬ್ಲ್ಯು.ಎಫ್. ವತಿಯಿಂದ ಹೃತ್ಪೂರ್ವಕ ಧನ್ಯವಾದಗಳನ್ನು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಬ್ಯಾರೀಸ್ ವೆಲ್ಪೇರ್ ಫಾರಮ್ ಅಬುಧಾಬಿ. ಯು. ಎ. ಇ. ಸಂಘಟನೆಯು , ಹಲವು ಜೀವಕಾರುಣ್ಯ , ಜನೋಪಯೋಗಿ ಮತ್ತು ಸಮಾಜಮುಖಿ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಇದರ ವತಿಯಿಂದ ಪ್ರತಿವರ್ಷ ನಿರ್ವಹಿಸಿಕೊಂಡು ಬಂದಿರುವ ಸಾಮೂಹಿಕ ವಿವಾಹ ಸಮಾರಂಭ ಬಹಳ ಪ್ರಸಿದ್ಧಿಯನ್ನು ಪಡೆದಿದೆ.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.