ಜೆದ್ದಾ(www.Vknews.in): ಸೌದಿ ಅರೇಬಿಯಾದಲ್ಲಿ ಈ ಬಾರಿ ರಂಝಾನಿನ 30 ದಿನಗಳು ಪೂರ್ಣಗೊಂಡು ಮೇ 13ರ ಗುರುವಾರದಂದು ಈದುಲ್ ಫಿತ್ರ್ ಆಚರಿಸುವ ಸಾಧ್ಯತೆಯಿದೆ ಎಂದು ಖಗೋಳ ಶಾಸ್ತ್ರ ವೀಕ್ಷಕರು ಹೇಳಿದ್ದಾರೆ.
ಕೊವಿಡ್ ಎರಡನೇ ಅಲೆ ವಿಶ್ವದಾದ್ಯಂತ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಸೌದಿಯಲ್ಲಿ ಕಟ್ಟುನಿಟ್ಟಿನ ಕೊವಿಡ್ ಪ್ರೊಟೊಕಾಲ್ ನೊಂದಿಗೆ ಎಲ್ಲಾ ಮಸೀದಿ ಹಾಗೂ ಈದ್ಗಾಗಳಲ್ಲಿ ಈದ್ ನಮಾಝ್ ನಡೆಯಲಿದೆ. ಮಾತ್ರವಲ್ಲ ಈದ್ ರಜಾ ದಿನಗಳಲ್ಲಿ ರಾಷ್ಟ್ರಾದ್ಯಂತ ಕಟ್ಟುನಿಟ್ಟಿನ ಪರಿಶೀಲನೆಗಳು ನಡೆಯಲಿದ್ದು, ರಜಾದಿನಗಳಲ್ಲಿ ಈದ್ ಪಾರ್ಟಿಗಳ ಹೆಸರಿನಲ್ಲಿ ಸಭೆ ಸಮಾರಂಭಗಳು ಹಾಗೂ ಜನರು ಗುಂಪುಗೂಡುವುದನ್ನು ನಿಷೇಧಿಸಲಾಗಿದೆ ಎಂದು ಸೌದಿ ಆರೋಗ್ಯ ಮಂತ್ರಾಲಯವು ಎಚ್ಚರಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.