ದುಬೈ(www.Vknews.in): ಕೊವಿಡ್ ಮುನ್ನೆಚ್ಚರಿಕೆ ಕ್ರಮಗಳಿಗೆ ಅನುಗುಣವಾಗಿ ನಡೆಯುವ ಈ ಬಾರಿಯ ಈದುಲ್ ಫಿತ್ರ್ ನಮಾಝಿನ ಮಾರ್ಗಸೂಚಿಯನ್ನು ದುಬೈ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯವು ಬಿಡುಗಡೆಗೊಳಿಸಿದೆ.
ಸಾಮಾಜಿಕ ಅಂತರ ಪಾಲಿಸುವುದು, ಮಾಸ್ಕ್ ಧರಿಸುವುದು, ಸ್ವಂತ ಪ್ರಾರ್ಥನಾ ರಗ್ಗುಗಳನ್ನು(ಮುಸಲ್ಲಾ) ತರುವುದು ಮುಂತಾದ ಮುುನ್ನೆಚ್ಚರಿಕೆಯ ನಿಯಂತ್ರಣಗಳ ಪ್ರಕಾರ ಮಸೀದಿ ಹಾಗೂ ಈದ್ಗಾಗಳಲ್ಲಿ ಪ್ರಾರ್ಥನೆ ನಡೆಯಲಿದೆ. ಈದುಲ್ ಫಿತ್ರ್ ನಮಾಝ್ ಗೆ 30 ನಿಮಿಷಗಳ ಮೊದಲು ಮಸೀದಿಗಳು ತೆರೆದು ಈದ್ ನಮಾಝ್ ಪೂರ್ಣಗೊಂಡ ತಕ್ಷಣ ಮುಚ್ಚಲ್ಪಡುತ್ತದೆ. ಆದರೆ ಈ ಬಾರಿ ಮಹಿಳೆಯರಿಗೆ ಈದ್ ನಮಾಝ್ ಗೆ ಅವಕಾಶ ನೀಡಲಾಗಿಲ್ಲ. ದುಬೈ ಹಾಗೂ ಸಮೀಪದ ಸ್ಥಳಗಳಲ್ಲಿ ಮುಂಜಾನೆ 5:52ಕ್ಕೆ ಈದ್ ನಮಾಝ್ ನೆರವೇರಲಿದೆ ಎಂದು ಸಚಿವಾಲಯವು ಪ್ರಕಟಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.