ಜೆದ್ದಾ(www.Vknews.in): ಮೇ 17ರಂದು ತನ್ನೆಲ್ಲಾ ಗಡಿಗಳನ್ನು ತೆರೆಯುವ ಮೂಲಕ ಅಂತರರಾಷ್ಚ್ರೀಯ ಪ್ರಯಾಣವನ್ನು ಪುನರಾರಂಭಿಸಲಿರುವ ಸೌದಿ ಅರೇಬಿಯಾವು, ರಾಷ್ಟ್ರವನ್ನು ಪ್ರವೇಶಿಸುವ ವಿದೇಶಿಗಳಿಗೆ 7 ದಿನಗಳ ‘ಇನ್ಸ್ಟಿಟ್ಯೂಷನಲ್ ಕ್ವಾರೆಂಟೈನ್’ ಕಡ್ಡಾಯಗೊಳಿಸಿದೆ.
ಸೌದಿ ಪ್ರವೇಶಿಸಿದ ವಿದೇಶಿಗಳು ಈ 7 ದಿನಗಳ ಕ್ವಾರೆಂಟೈನ್ ಪೂರ್ಣಗೊಳಿಸದೆ ತಮ್ಮ ಮನೆಗಳಿಗೆ ತೆರಳುವಂತಿಲ್ಲ. ಆದರೆ ಆರೋಗ್ಯ ವಿಭಾಗದಲ್ಲಿ ಸೇವೆ ಸಲ್ಲಿಸುವ, ತಮ್ಮ ಸ್ಪೋನ್ಸರ್ ನೊಂದಿಗೆ ಪ್ರಯಾಣಿಸುವ ಗೃಹ ಕಾರ್ಮಿಕರಿಗೆ, ಎರಡೂ ಡೋಸ್ ವ್ಯಾಕ್ಸಿನ್ ಸ್ವೀಕರಿಸಿದವರಿಗೆ, ಟ್ರಕ್ ಚಾಲಕರಿಗೆ, ವಿಮಾನ ಯಾ ಹಡಗು ಕ್ರ್ಯೂ ಸದಸ್ಯರಿಗೆ ಈ ಕ್ವಾರೆಂಟೈನ್ ಕಡ್ಡಾಯವಿರುವುದಿಲ್ಲ.
ಸೌದಿ ಪ್ರವಾಸೋದ್ಯಮ ಸಚಿವಾಲಯವು ಅನುಮೋದಿಸಿದ ವಸತಿಗಳಲ್ಲೊಂದರಲ್ಲಿ ಕ್ವಾರೆಂಟೈನ್ ಕಡ್ಡಾಯವಾಗಿದ್ದು, ಈ ಕ್ವಾರೆಂಟೈನ್ ಗೆ ತಗಲುವ ವೆಚ್ಚವನ್ನು ಪ್ರಯಾಣಿಕರ ಟಿಕೆಟ್ ನೊಂದಿಗೆ ಸೇರಿಸಿ ವಸೂಲು ಮಾಡುವಂತೆ ವಿಮಾನ ಸಂಸ್ಥೆಗಳಿಗೆ ನಿರ್ದೇಶಿಸಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.