ಮಸ್ಕತ್(ವಿಶ್ವಕನ್ನಡಿಗ ನ್ಯೂಸ್): ಇಸ್ರಾಯೀಲ್ ಸೈನ್ಯದಿಂದ ನಿರಂತರವಾಗಿ ದಾಳಿಗೊಳಗಾಗುತ್ತಿರುಲ ಪ್ಯಾಲಸ್ತೀನಿಯರಿಗೆ ಬೆಂಬಲ ನೀಡುವುದಾಗಿ ಅರಬ್ ಲೀಗ್ ಸಭೆಯಲ್ಲಿ ಒಮಾನ್ ವಿದೇಶಾಂಗ ಮಂತ್ರಿ ಸೂಚಿಸಿದ್ದಾರೆ.
ವಿದೇಶಾಂಗ ಸಚಿವರಾದ ಸೈದ್ ಬದ್ರ್ ಅಲಿ ಬುಸೈದಿ ಅವರು ಆನ್ ಲೈನಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಹೇಳಲಾಗಿದೆ. ಪವಿತ್ರ ರಮಝಾನ್ ತಿಂಗಳಲ್ಲಿ ಮಸ್ಜಿದುಲ್ ಅಕ್ಸಾ ರಾಗೂ ಪ್ಯಾಲಸ್ತೀನಿಯರ ಮೇಲೆ ಇಸ್ರಾಯೀಲ್ ಸೈನ್ಯ ನಡೆಸಿದ ದಾಳಿ ಖಂಡನೀಯ ಎಂದು ಹೇಳಿದರು.
ಎಪ್ಪತ್ತು ವರ್ಷಗಳಿಂದ ಪ್ಯಾಲಸ್ತೀನಿಯರ ಕಣ್ಣೀರು ಪ್ರಪಂಚ ಕಾಣುತ್ತಿದೆ. ಎಲ್ಲರೂ ಒಂದಾಗಿ ಅವರಿಗೆ ಬೆಂಬಲ ನೀಡಬೇಕು ಹಾಗೂ ವಿಶ್ವಸಂಸ್ಥೆಯು ಇದಕ್ಕೆ ಪರಿಹಾರ ನೀಡಬೇಕು ಎಂದು ವಿದೇಶಾಂಗ ಸಚಿವರು ಒತ್ತಾಯಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.