(www.vknews.com) : ಮಂಗಳೂರು ಬಜಾಲ್ ವಾರ್ಡಿನಲ್ಲಿ ಮಹಿಳೆಯೊಬ್ಬರ ಅಂತ್ಯ ಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದ ಬಜಾಲ್ ವಾರ್ಡ್ ಕಾರ್ಪೋರೇಟರಾದ ಅಶ್ರಫ್ ಬಜಾಲ್ ಹಾಗೂ ತಂಡ.
ಊರಿನ ಎಲ್ಲಾ ತುರ್ತು ಸೇವೆಗಾಗಿ ಯುವ ಕಾಂಗ್ರೆಸ್ ಕೋವಿಡ್ ಟಾಸ್ಕ್ ಫೋರ್ಸ್ ಬಜಾಲ್ ತಂಡವನ್ನು ರಚಿಸಿದ ಊರಿನ ಕಾರ್ಪೋರೇಟರ್ ಹಲವಾರು ಮಾನವೀಯ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ, ಅದರ ಭಾಗವಾಗಿ ಕೋವಿಡ್ ನಿಂದ ಊರಿನಲ್ಲಿ ಮಹಿಳೆಯೊಬ್ಬರು ಮೃತಪಟ್ಟು ಅವರ ಶವಸಂಸ್ಕಾರವನ್ನು ಮನೆಯವರ ಮುಂದಾಳತ್ವದಲ್ಲಿ, ನಂದಿಗುಡ್ಡೆ ಸ್ಮಶಾನದಲ್ಲಿ ಅಂತ್ಯಕ್ರಿಯವನ್ನು ನೆರೆವೇರಿಸಲಾಯಿತು ಕೋವಿಡ್ ಸಮಯದಲ್ಲಿ ಹಲವಾರು ಸೇವೆ ಮಾಡುತ್ತಿರುವ ಕಾಂಗ್ರೆಸ್ ನಾಯಕ ಸುಹೈಲ್ ಕಂದಕ್ SSF ಸಹಾಯ್ ತಂಡದ ಕೋಆರ್ಡಿನೇಟರ್ ನವಾಝ್ ಸಖಾಫಿ ಅಡ್ಯಾರ್ ಪದವು ,ಅಶ್ರಫ್ ಬಜಾಲ್, ಪ್ರಶಾಂತ್ ಪೂಜಾರಿ ಹಾಗೂ ಆಸಿಫ್ ಬಜಾಲ್ ಸೇರಿ ಮೃತದೇಹದ ಸಂಸ್ಕಾರವನ್ನು ಗೌರವಪೂರವಾಗಿ ನೆರವೇರಿಸಿದ್ದಾರೆ.
ಊರಿನ ಕೋವಿಡ್ ತುರ್ತು ಸೇವೆಗೆ ಈ ತಂಡವು ಸದಾ ಸಿದ್ಧವಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.