(www.vknews.com) : ಬೈಕಾಡಿ ಪ್ರತಿಷ್ಠಾನವು ಪೂಜ್ಯ ಬೈಕಾಡಿಯವರ ಬದುಕಿನ ಭಾವ ಮತ್ತು ಭಾಗವಾಗಿದ್ದ ’ಭಾಷಣ ಕಲೆ’ಯ ಉತ್ತೇಜನಕ್ಕಾಗಿ “ವಾಗ್ಮಿ 2021” ಶೀರ್ಷಿಕೆಯೊಂದಿಗೆ ಭಾಷಣ ಸ್ಪರ್ಧೆಯನ್ನು ಏರ್ಪಡಿಸುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಗೌರವಪೂರ್ವಕವಾಗಿ ವಿನಂತಿಸುತ್ತಿದ್ದೇವೆ.
ಸಾಮಾನ್ಯ ನಿಯಮಗಳು
1. ವಾಗ್ಮಿ 2021 ಒಂದು ಆನ್ಲೈನ್ ಕನ್ನಡ ಭಾಷಣ ಸ್ಪರ್ಧೆಯಾಗಿದ್ದು 3 ವಿಭಾಗಗಳು ಹಾಗೂ 2 ಸುತ್ತುಗಳನ್ನು ಒಳಗೊಂಡಿರುತ್ತದೆ. ಮೊದಲನೆಯ ಸುತ್ತು 13.05.2021ರಿಂದ ಆರಂಭಗೊಂಡು 23.05.2021ರಂದು ಮುಕ್ತಾಯವಾಗಲಿದೆ.
2. ಎಲ್ಲಾ ಸ್ಪರ್ಧಾಳುಗಳು 23.05.2021ರ ಒಳಗಾಗಿ, ಭಾಷಣವನ್ನು 3 ನಿಮಿಷಗಳಿಗೆ ಮೀರದಂತೆ ವೀಡಿಯೋ ರೆಕಾರ್ಡ್ ಮಾಡಿ [email protected] ಇಮೇಲ್ಗೆ ಅಥವಾ +91 9886507605 ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮೂಲಕ ಕಳುಹಿಸತಕ್ಕದ್ದು.
3. ಕಳುಹಿಸಿದ ವೀಡಿಯೋ ರೆಕಾರ್ಡಿಂಗ್ನ್ನು ತಮ್ಮ ಫೇಸ್ಬುಕ್ ಪೇಜ್ನಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಉಪಯೋಗಿಸುವ ಎಲ್ಲಾ ಹಕ್ಕನ್ನು ಬೈಕಾಡಿ ಪ್ರತಿಷ್ಠಾನ (ರಿ.) ಕಾಯ್ದಿರಿಸಿಕೊಂಡಿದೆ.
4. ಸ್ಪರ್ಧೆ ನಡೆಯುವ ಸಂದರ್ಭದಲ್ಲಿ ಅಗತ್ಯ ಬಿದ್ದಲ್ಲಿ ಸ್ಪರ್ಧಾಳುಗಳ ವಯಸ್ಸನ್ನು ದೃಢೀಕರಿಸಲು ತಕ್ಕುದಾದ ದಾಖಲೆಗಳನ್ನು ಒದಗಿಸತಕ್ಕದ್ದು.
5. ಅಂತಿಮ ಸುತ್ತಿಗೆ ಆಯ್ಕೆಯಾದ ಸ್ಪರ್ಧಾಳುಗಳ ಹೆಸರನ್ನು ದಿನಾಂಕ:26.05.2021ರ ನಂತರ ಘೋಷಿಸಲಾಗುವುದು. ತದನಂತರ ಮುಂದಿನ ಸುತ್ತಿಗೆ ಆಯ್ಕೆಯಾದ ಸ್ಪರ್ಧಾಳುಗಳಿಗೆ ಅಂತಿಮ ಸುತ್ತಿನ ವಿಷಯ ಹಾಗೂ ನಿಯಮಗಳನ್ನು ನೀಡಲಾಗುವುದು.
6. ಮೊದಲನೆಯ ಸುತ್ತಿನಲ್ಲಿ ಪ್ರತೀ ವಿಭಾಗದಲ್ಲಿ ತಲಾ 10 ಸ್ಪರ್ಧಾಳುಗಳನ್ನು ಆಯ್ಕೆ ಮಾಡಲಾಗುವುದು ಮತ್ತು ಅವರ ನಡುವೆ ಅಂತಿಮ ಸುತ್ತಿನ ಸ್ಪರ್ಧೆ ಜರಗಲಿದ್ದು ಪ್ರತೀ ವಿಭಾಗದಿಂದ 3 ವಿಜೇತರನ್ನು ಘೋಷಿಸಲಾಗುವುದು.
7. ಪ್ರತೀ ವಿಭಾಗದಲ್ಲಿ ತಲಾ 3 ಬಹುಮಾನಗಳಿರುತ್ತವೆ. ಪ್ರಥಮ: ರೂ. 2000/- ಮತ್ತು ಇ-ಸರ್ಟಿಫಿಕೇಟ್, ದ್ವಿತೀಯ: ರೂ. 1000/- ಮತ್ತು ಇ-ಸರ್ಟಿಫಿಕೇಟ್, ತೃತೀಯ: ರೂ. 500/- ಮತ್ತು ಇ-ಸರ್ಟಿಫಿಕೇಟ್,
8. ನಿಯಮಗಳ ಪರಿಪಾಲನೆಯ ಕೊರತೆ ಕಂಡುಬಂದಲ್ಲಿ ಸ್ಪರ್ಧಾಳುಗಳ ಭಾಗವಹಿಸುವಿಕೆಯನ್ನು ಅಮಾನ್ಯಗೊಳಿಸಲಾಗುವುದು.
9. ಅರ್ಹ ಮತ್ತು ಅನುಭವಿ ನಿರ್ಣಾಯಕರಿಂದ ಪ್ರತೀ ಸ್ಪರ್ಧಾಳುಗಳ ಮೌಲ್ಯ ಮಾಪನ ಮಾಡಿಸಲಾಗುವುದು.
10. ಬೈಕಾಡಿ ಪ್ರತಿಷ್ಠಾನ (ರಿ.) ಹಾಗೂ ನಿರ್ಣಾಯಕರ ತೀರ್ಪು ಅಂತಿಮ.
ಇತರ ಷರತ್ತುಗಳು:
ಪ್ರೌಢಶಾಲಾ ವಿಭಾಗ (8ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ)
1. ವೀಡಿಯೋ ಕಳುಹಿಸುವಾಗ ಎಲ್ಲಾ ಸ್ಪರ್ಧಾಳುಗಳು ಕಡ್ಡಾಯವಾಗಿ ತಾವು ಭಾಗವಹಿಸುತ್ತಿರುವ ವಿಭಾಗ, ಹುಟ್ಟಿದ ದಿನಾಂಕ, ಕಲಿಯುತ್ತಿರುವ ಶಾಲೆ, ತರಗತಿ, ಸಂಪರ್ಕ ಸಂಖ್ಯೆ ಹಾಗೂ ಸಂಪೂರ್ಣ ವಿಳಾಸವನ್ನು ನಮೂದಿಸತಕ್ಕದ್ದು.
2. ಮೊದಲನೆ ಸುತ್ತಿನ ಸ್ಪರ್ಧೆಯ ವಿಷಯ: “ಕೋವಿಡ್ ಕಲಿಸಿದ ಪಾಠಗಳು”
ಕಾಲೇಜು ವಿಭಾಗ (ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ)
1. ವೀಡಿಯೋ ಕಳುಹಿಸುವಾಗ ಎಲ್ಲಾ ಸ್ಪರ್ಧಾಳುಗಳು ಕಡ್ಡಾಯವಾಗಿ ತಾವು ಭಾಗವಹಿಸುತ್ತಿರುವ ವಿಭಾಗ, ಹುಟ್ಟಿದ ದಿನಾಂಕ, ಕಲಿಯುತ್ತಿರುವ ಕಾಲೇಜು, ತರಗತಿ, ಸಂಪರ್ಕ ಸಂಖ್ಯೆ ಹಾಗೂ ಸಂಪೂರ್ಣ ವಿಳಾಸವನ್ನು ನಮೂದಿಸತಕ್ಕದ್ದು.
2. ಮೊದಲನೆ ಸುತ್ತಿನ ಸ್ಪರ್ಧೆಯ ವಿಷಯ: “ಬದುಕಿನಲ್ಲಿ ಲಲಿತಕಲೆಗಳ ಪಾತ್ರ”
ಸಾರ್ವಜನಿಕ ವಿಭಾಗ (25ವರ್ಷಕ್ಕಿಂತ ಮೇಲ್ಪಟ್ಟವರಿಗೆ).
1. ವೀಡಿಯೋ ಕಳುಹಿಸುವಾಗ ಎಲ್ಲಾ ಸ್ಪರ್ಧಾಳುಗಳು ಕಡ್ಡಾಯವಾಗಿ ತಾವು ಭಾಗವಹಿಸುತ್ತಿರುವ ವಿಭಾಗ, ಹುಟ್ಟಿದ ದಿನಾಂಕ, ಮಾಡುತ್ತಿರುವ/ಮಾಡುತ್ತಿದ್ದ ಉದ್ಯೋಗ, ಸಂಪರ್ಕ ಸಂಖ್ಯೆ ಹಾಗೂ ಸಂಪೂರ್ಣ ವಿಳಾಸವನ್ನು ನಮೂದಿಸತಕ್ಕದ್ದು.
2. ಮೊದಲನೆ ಸುತ್ತಿನ ಸ್ಪರ್ಧೆಯ ವಿಷಯ: “ಸಾಮಾಜಿಕ ಸ್ಥಿತ್ಯಂತರಗಳಲ್ಲಿ ಮಾಧ್ಯಮಗಳ ಪಾತ್ರ”
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.