ಜೆದ್ದಾ(www.vknews.in): ಕರೋನವೈರಸ್ ಸಾಂಕ್ರಾಮಿಕದ ಬಳಿಕ ಕಳೆದ ಒಂದು ವರ್ಷದಿಂದ ಸ್ಥಗಿತಗೊಂಡ ಸೌದಿ ಅರೇಬಿಯಾದ ಅಂತರರಾಷ್ಟ್ರೀಯ ಪ್ರಯಾಣವು ಇಂದು ಮುಂಜಾನೆಯಿಂದ ಪುನರಾರಂಭಗೊಂಡಿದೆ. ವಿಶ್ವದ ಬಹುತೇಕ ದೇಶಗಳಿಂದ ಸೌದಿಗೆ ನೇರ ವಿಮನ ಹಾರಾಟವು ಆರಂಭಗೊಂಡಿದ್ದು, ಭಾರತ ಸೇರಿದಂತೆ 13 ರಾಷ್ಟ್ರಗಳಿಂದ ಪ್ರಯಾಣಿಕರಿಗೆ ನೇರವಾಗಿ ಸೌದಿಗೆ ಪ್ರಯಾಣಿಸಲು ಆಂತರಿಕ ಸಚಿವಾಲಯವು ಅನುಮತಿ ನೀಡಿಲ್ಲ.
ಸೌದಿ ಆಂತರಿಕ ಸಚಿವಾಲಯವು ಪ್ರಯಾಣ ನಿರ್ಬಂಧ ಹೇರಿದ ರಾಷ್ಟ್ರಗಳ ಪೈಕಿ ಅಫ್ಘಾನಿಸ್ತಾನ, ಅರ್ಮೇನಿಯಾ, ಬೆಲಾರಸ್, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಭಾರತ, ಇರಾನ್, ಲೆಬನಾನ್, ಲಿಬಿಯಾ, ಸೊಮಾಲಿಯಾ, ಸಿರಿಯಾ, ಟರ್ಕಿ, ವೆನೆಜುವೆಲಾ ಮತ್ತು ಯೆಮೆನ್ ಸೇರಿದೆ.
ಸೌದಿ ಅರೇಬಿಯಾದ ಈ ಪ್ರಯಾಣ ನಿರ್ಬಂಧವು ನೇರವಾಗಿ ಸೌದಿಗೆ ಪ್ರಯಾಣಿಸ ಬಯಸುವ ಭಾರತೀಯರ ಆಸೆಗೆ ಮತ್ತೊಮ್ಮೆ ತಣ್ಣೀರೆರಚಿದೆ. ಆದರೆ ಭಾರತೀಯರು ಯುಎಇ, ಕತಾರ್,ಬಹರೈನ್ ಸೇರಿದಂತೆ ಇತರ ಗಲ್ಫ್ ರಾಷ್ಟ್ರಗಳಲ್ಲಿ 14 ದಿನಗಳ ಕ್ವಾರೆಂಟೈನ್ ಪೂರ್ಣಗೊಳಿಸಿ ಸೌದಿಗೆ ಪ್ರಯಾಣ ಬೆಳೆಸಬಹುದಾಗಿದೆ. ಸೌದಿ ಪ್ರವೇಶಿಸಿದ ಎಲ್ಲಾ ವಿದೇಶಿಗಳಿಗೂ 7 ದಿನಗಳ ಇನ್ಸ್ಟಿಟ್ಯೂಷನಲ್ ಕ್ವಾರೆಂಟೈನ್ ಕಡ್ಡಾಯವಾಗಿದ್ಜು, ಸೌದಿ ತಲುಪಿದ ತಕ್ಷಣ ಪ್ರಯಾಣಿಕರು ವಿಮಾನ ನಿಲ್ದಾಣದಿಂದಲೇ ನೇರವಾಗಿ ಕ್ವಾರೆಂಟೈನ್ ಗೆ ತೆರಳಬೇಕಾಗುತ್ತದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.