ಉಪ್ಪಿನಂಗಡಿ(ವಿಶ್ವಕನ್ನಡಿಗ ನ್ಯೂಸ್): ತೋಕೆ ಉಸ್ತಾದರ ಸಾರಥ್ಯದ ದಾರುಲ್ ಮುಸ್ತಫಾ ಮೋರಲ್ ಅಕಾಡಮಿ ಸಂಸ್ಥೆಯ ಅಧೀನದಲ್ಲಿ ಸುಲ್ತಾನಿಯ್ಯಾ ಅರೆಬಿಕ್ ಕಾಲೇಜು ಕಾರ್ಯಾಚರಿಸುತ್ತಿದ್ದು, ಉತ್ತಮ ಗುಣಮಟ್ಟದ ಧಾರ್ಮಿಕ ಉನ್ನತ ವಿದ್ಯಾಭ್ಯಾಸವನ್ನು ನೀಡುತ್ತಿದೆ.
ದರ್ಸ್ ಅಧ್ಯಯನ ಪೂರ್ತೀಕರಿಸಿದ ವಿದ್ಯಾರ್ಥಿಗಳು ತಮ್ಮ ಜ್ಞಾನದ ಪ್ರಾಶ್ಯಸ್ತಕ್ಕಾಗಿ ಕೇರಳ ಅಥವಾ ಉತ್ತರಭಾರತವನ್ನು ಆಶ್ರಯಿಸುತ್ತಿದ್ದರು. ಈ ವರ್ಷ ಉನ್ನತ ವ್ಯಾಸಂಗ ನಡೆಸುವುದು ಸದ್ಯದ ಕೊರೋನಾ ಕಾರಣದಿಂದ ಅಸಾಧ್ಯವಾಗಿರಬಹುದು. ಆದರೆ ಆ ಚಿಂತೆಯನ್ನು ಹೋಗಲಾಡಿಸುತ್ತಾ ದಾರುಲ್ ಮುಸ್ತಫಾದಲ್ಲಿ ‘ಸುಲ್ತಾನಿ” ಬಿರುದು ಪಡೆಯುವ ಕೋರ್ಸಿನ ದಾಖಲಾತಿ ನಡೆಯುತ್ತಿದೆ.ನಾಳೆ (20/5/2021 ಗುರುವಾರ) ಅದರ ಪ್ರಥಮ ಇಂಟರ್ವ್ಯೂ ಓನ್ ಲೈನ್ ಮುಖಾಂತರ ನಡೆಯಲಿದೆ.
ಕೋರ್ಸಿನ ವೈಶಿಷ್ಟತೆಗಳು:
ಒಂದು ವರ್ಷದ “ಸುಲ್ತಾನಿ” ಬಿರುದು ನೀಡುವ ಕೋರ್ಸ್
ತುಹ್ಫತುಲ್ ಮುಹ್ತಾಜ್ ಭಾಗ-1, 2 ಅಧ್ಯಯನ
ತುಹ್ಫತುಲ್ ಮುಹ್ತಾಜ್ ನ ಇನ್ನಿತರ ಪ್ರಮುಖ ಅಧ್ಯಯನಾತ್ಮಕ ಭಾಗಗಳ ತರಗತಿ
ಸ್ವಹೀಹುಲ್ ಬುಖಾರಿ, ಸ್ವಹೀಹ್ ಮುಸ್ಲಿಂ, ಸಮೇತ ಸಿಹಾಹುಸ್ಸಿತ್ತ ಗ್ರಂಥಗಳ ಅಧ್ಯಯನ
ಮುಲ್ಲಾಹಸನ್,ಜಂಉಲ್ ಜವಾಮಿಅ್ ಭಾಗ -2, ಹದೀಸ್, ಉಸೂಲುಲ್ ಹದೀಸ್ ತರಗತಿಗಳು
ಸುನ್ನತ್ ಜಮಾಅತ್ ನ ವಿಶೇಷ ತರಬೇತಿ
ಖುರ್ಆನ್, ಹದೀಸ್, ಕರ್ಮಶಾಸ್ತ್ರ, ಭಾಷಾಜ್ಞಾನ, ಅಹ್ಲುಸುನ್ನತ್ ವಲ್ ಜಮಾಅತ್ನ ಪುರವೆಗಳ ಸಹಿತ ಅಧ್ಯಾಯನಾತ್ಮಕ ವಿಷಯಗಳ ಕಲಿಕೆ.
ಇಸ್ಲಾಮಿನ ಜ್ಞಾನ ಶಾಖೆಯಲ್ಲಿ ಅಪಾರ ಪಾಂಡಿತ್ಯ ಇರುವ ಉಸ್ತಾದರುಗಳ ನೇತೃತ್ವ
ರಮಣೀಯವಾದ ಮರ ಗಿಡಗಳ ನಡುವೆ ಪ್ರಶಾಂತವಾಗಿ ಹರಿಯುವ ನದಿ ಇರುವ ಪರಿಸರ
ಅತ್ಯಾಧುನಿಕ ಶೈಲಿಯಲ್ಲಿ ಶಿಕ್ಷಣ
ಬರಹ , ಭಾಷಣದಲ್ಲಿ ವಿಶೇಷ ತರಭೇತಿ ಅಧ್ಯಾಯನಾತ್ಮಕ ಗ್ರಂಥಗಳ ಬೃಹತ್ ಖುತುಬ್ ಖಾನ*
ಪ್ರವೇಶ ಬಯಸುವವರು ಈ ನಂಬರ್ ಮೂಲಕ ನೋಂದಾಯಿಸಿಕೊಳ್ಳಿ.
ಸೀಟುಗಳು ಪರಿಮಿತವಾಗಿದ್ದು,ಸೇರಲಿಚ್ಚಿಸುವವರು ಕೂಡಲೇ ಸಂಪರ್ಕಿಸಿ.
Contact:8746845522
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.