ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಕರುಣೆ ಮುಖ್ಯ, ಮನುಷ್ಯನಂತೆ ಎಲ್ಲಾ ಜೀವಿಗಳಲ್ಲಿ ಕರುಣೆ ತೋರಬೇಕು ಇದು ಪ್ರಾಯೋಗಿಕವಾಗಿ ತೋರಿಸಿ ಕೊಟ್ಟು ಸುಳ್ಯದ ಪೋಲಿಸ್ ಅಧಿಕಾರಿಗಳು ಮಾದರಿಯಾಗಿರುತ್ತಾರೆ. ಸರ್ವ ಧರ್ಮಗಳು ಕರುಣೆಗೆ ಮೊದಲ ಆದ್ಯತೆ ನೀಡಿವೆ.
ನಾನೊಬ್ಬ ಮದ್ರಸದ ಕಿರು ಅಧ್ಯಾಪಕನೆಂಬ ನೆಲೆಯಲ್ಲಿ ಮಕ್ಕಳಿಗೆ ಬಹಳಷ್ಟು ಕರುಣೆಯ ಪಾಠ ಮತ್ತು ಧರ್ಮದ ಸಂದೇಶ ಹೇಳಿಕೊಟ್ಟಿರುತ್ತೇನೆ. ಮರುಭೂಮಿಯಲ್ಲಿ ಬಾಯಾರಿಕೆಯಿಂದ ಬಳಲಿದ ನಾಯೊಂದಕ್ಕೆ ಆಳವಾದ ಭಾವಿಗಿಳಿದು ತನ್ನ ಶೂ ಮೂಲಕ ನೀರು ತುಂಬಿ ಬಾಯಲ್ಲಿ ಕಚ್ಚಿಕೊಂಡು ಮೇಲೇರಿ ನಾಯಿಗೆ ನೀರುಣಿಸಿದವನಿಗೆ ಸ್ವರ್ಗ ಲಭ್ಯವಾಗಿದೆ.
ಪುಣ್ಯ ಪುರುಷರೊಬ್ಬರು ಸಾಂಕ್ರಾಮಿಕ ರೋಗದಿಂದ ಕಂಗಾಲಾದ ನಾಯಿಯನ್ನು ನಲ್ವತ್ತು ದಿನಗಳ ಕಾಲ ಔಷಧಿ ಮತ್ತು ಊಟ ನೀಡಿ ಪರಿಪಾಲಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡಿಸಿ ಸಂಪೂರ್ಣವಾಗಿ ಚೇತರಿಸಿದ ಬಳಿಕ ಅದರ ಪಾಡಿಗೆ ಬಿಟ್ಟಿರುತ್ತಾರೆ.ಬೆಕ್ಕಿಗೆ ಅನ್ನ ಆಹಾರ ನೀಡದೆ ಕಟ್ಟಿ ಹಾಕಿ ಹಿಂಸಿಸಿದ ಮಹಿಳೆಯೊಬ್ಬಳಿಗೆ ನರಕ ಶಿಕ್ಷೆ ದೊರೆಯುವುದು. ಹೀಗೆ ಸಾವಿರಾರು ಕರುಣೆಯ ಪಾಠ ಮದ್ರಸದಲ್ಲಿ ಕಲಿಸಲಾಗುತ್ತಿದೆ.
ಮೂಕ ಪ್ರಾಣಿಗಳಲ್ಲಿ ಕರುಣೆ ತೋರಬೇಕೆಂದಾದರೆ ಮನುಷ್ಯನು ಮನುಷ್ಯನಲ್ಲಿ ಕರುಣೆ ತೋರಬೇಕೆಂಬುದರಲ್ಲಿ ಎರಡು ಮಾತಿಲ್ಲ.ಲಾಕ್ ಡೌನ್ ಇನ್ನೂ ಮುಂದುವರಿದ್ದಲ್ಲಿ ಬಡ ಮಧ್ಯಮ ವರ್ಗದ ಮನೆ ಬಾಗಿಲಿಗೂ ಈ ಕರುಣೆಯ ಚೀಲ ಹೊತ್ತೊಯ್ಯಬೇಕಾದ ಅಗತ್ಯ ಬಂದಲ್ಲಿ ಅಚ್ಚರಿಯಿಲ್ಲ. ತಿಂಡಿ ತಿನಿಸುಗಳು ಸಿಗದೇ ಫುಲ್ ಮೂಡ್ ಔಟಾದ ಪುಟಾಣಿ ಮಕ್ಕಳು ಒಂದು ಭಾಗದಲ್ಲಿ ಮತ್ತೊಂದೆಡೆ ಕೆಲಸವಿಲ್ಲದೆ ಬದುಕಿನ ದಾರಿ ಕಾಣದೆ ಕಂಗಾಲಾದ ಬಡ ಮಧ್ಯಮ ವರ್ಗದ ಜನ ಸಾಮಾನ್ಯರು.ಸರ್ವರಿಗೂ ಶುಭವಾಗಲಿ ನಾಡಿನ ಕ್ಷೇಮಕ್ಕಾಗಿ ಕಾರ್ಯಾಚರಿಸೋಣ.
✍️ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಮದ್ರಸ ಅಧ್ಯಾಪಕರು ಗಾಂಧಿನಗರ ಸುಳ್ಯ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.