(www.vknews.com) : ಕೋವಿಡ್ ಕಾಲದಲ್ಲಿ ಅಗತ್ಯ ವೈದ್ಯಕೀಯ ನೆರವಿನೊಂದಿಗೆ ಕಾರ್ಯಚರಿಸಲು ಮುಲ್ಕಿ ಕೋವಿಡ್ ವಾರಿಯರ್ಸ್ ತಂಡವನ್ನು ರಚಿಸಿ ಇಂದು ಅಧಿಕೃತ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮವನ್ನು ಮುಲ್ಕಿ ನಗರಸಭೆಯ ಮುಖ್ಯಾಧಿಕಾರಿ ಶ್ರೀಮಾನ್ ಚಂದ್ರ ಪೂಜಾರಿ ಪಿ ಉದ್ಘಾಟಿಸಿ ಈ ಮಹಾತ್ಕಾರ್ಯವನ್ನು ಆರಂಭಿಸಿದ ತಮಗೆಲ್ಲರಿಗೂ ಒಳಿತಾಗಲಿ ಎಂದು ಶುಭಹಾರೈಸುದರೊಂದಿಗೆ ಮುಲ್ಕಿಯ ಆಸುಪಾಸಿನ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆಕೊಟ್ಟರು.
ಮಖ್ಯ ಅತಿಥಿಯಾಗಿ ಆಗಮಿಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮೆಡಿಕಲ್ ಉಸ್ತುವಾರಿ ಖಾದರ್ ಕಂಕನಾಡಿ ಕೋವಿಡ್ ನ ಕುರಿತು ಜಾಗೃತಿಯನ್ನು ಜನರಲ್ಲಿ ಮೂಡಿಸಿ ಇಲ್ಲಿ ದೊರಕುವ ಆಕ್ಸಿಜನ್ ಪೂರೈಕೆ , ಆ್ಯಂಬುಲೆನ್ಸ್ ಸೇವೆ, ಸ್ಯಾನಿಟೈಝೇಷನ್ ಸಹಿತ ಪ್ರತಿಯೊಂದು ಸೇವೆಗಳನ್ನು ಅವಶ್ಯಕತೆ ಇರುವ ಜನರಿಗೆ ತಲುಪಿಸುವ ಕಾರ್ಯಗಳನ್ನು ಮಾಡಬೇಕಿದೆ ಎಂದು ಕರೆನೀಡಿದರು.
ಈ ಸಂದರ್ಭದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮುಲ್ಕಿ ಇದರ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ, ಶಾಫಿ ಜುಮಾ ಮಸೀದಿ, ಮುಲ್ಕಿ ಇದರ ಅಧ್ಯಕ್ಷರಾದ ಲಿಯಾಕತ್ ಅಲಿ, ಕೋಲ್ನಾಡು ಜುಮಾ ಮಸೀದಿ ಅಧ್ಯಕ್ಷರಾದ ಹನೀಫ್ ಕೋಲ್ನಾಡು,ಎಸ್ಕೆ ಎಸ್ಸೆಮ್ ಮುಲ್ಕಿ ಅಧ್ಯಕ್ಷರಾದ ಉಮರ್ ಫಾರೂಕ್, ಕಾರ್ಯದರ್ಶಿಯಾದ ಮೊಹಮ್ಮದ್ ಕಾರ್ನಾಡು, ಯುನೈಟೆಡ್ ಮುಲ್ಕಿ ಫೌಂಡೇಷನ್ ಜಂಟಿ ಕಾರ್ಯದರ್ಶಿಯಾದ ಮಹಮ್ಮದ್ ಸಲೀಂ ಮುಲ್ಕಿ , ಸದಸ್ಯರಾದ ಅಬೂಬಕ್ಕರ್ ಅಜಿಲಮೊಗರು, ಮುಲ್ಕಿ ಜುಮಾ ಮಸೀದಿ ಮಾಜಿ ಅಧ್ಯಕ್ಷರಾದ ಹಾಜಿ ಅಬ್ಬಾಸ್ ಅಲಿ ಕಾರ್ನಾಡು, ಎಸ್ ಡಿಪಿಐ ಮುಲ್ಕಿ ವಲಯ ಕಾರ್ಯದರ್ಶಿ ಇಬ್ರಾಹೀಂ ಕಾರ್ನಾಡು, ಮುಲ್ಕಿ ನಗರಸಭೆ ಸದಸ್ಯ ಹಾಗೂ ಮುಸ್ಲಿಂ ಯಂಗ್ ಮೆನ್ಸ್ ಕಾರ್ನಾಡು ಅಧ್ಯಕ್ಷರಾದ ಹಕೀಂ ಕಾರ್ನಾಡು, ಇಮ್ತಿಯಾಜ್ ಮುಲ್ಕಿ, ಮತ್ತು ಹಿಮಾಯತುಲ್ ಇಸ್ಲಾಂ ದಫ್ ಸಮಿತಿ ಕಾರ್ನಾಡು ಅಧ್ಯಕ್ಷರಾದ ಎಂ ಕೆ ಮೊಹಮ್ಮದ್ ಉಪಸ್ಥಿತರಿದ್ದರು ಎಂದು ಯುಎಮ್ಎಫ್ ಇದರ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶಂಸುದ್ಧೀನ್ ಮೂಲ್ಕಿ, ಕಾರ್ಯದರ್ಶಿಯಾದ ಕಬೀರ್ ಅಹಮ್ಮದ್ ಮೂಲ್ಕಿ, ಹಾಗೂ ಹಿರಿಯ ಸದಸ್ಯರು ಮತ್ತು ಕಾರ್ಯನಿರ್ವಾಹಕ ಸಮಿತಿಯ ಸದಸ್ಯರಾದ ಆಶ್ಫಾಕ್ ಎ. ಕಾರ್ನಾಡ್, ಶಂಸುದ್ದೀನ್ ಎಮ್ ಎಸ್, ಫಾರೂಕ್ ಜುಬೈಲ್ ಮತ್ತಿತರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಯಪಡಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.