ಮಂಗಳೂರು(ವಿಶ್ವಕನ್ನಡಿಗ ನ್ಯೂಸ್):ರಾಜ್ಯದಲ್ಲಿ ದೈನಂದಿನ ಹೆಚ್ಚುತ್ತಿರುವ ಕೊರೋನ ಎರಡನೇ ಅಲೆಯು ವ್ಯಾಪಕವಾಗುತ್ತಿರುವುದನ್ನು ನಿಯಂತ್ರಿಸಲಾಗದ ಕೇಂದ್ರ ಸರ್ಕಾರದ ನೀತಿ ಮತ್ತು ಸೋಂಕಿತ ರೋಗಿಗಳಿಗೆ ಬೇಕಾದ ಹಾಸಿಗೆ, ಅಮ್ಲಜನಕ, ಲಸಿಕೆ ಸಹಿತ ಅವರನ್ನು ಸುಶ್ರೂಷಿಸಲು ಅಗತ್ಯವಿರುವ ಪ್ರಾಥಮಿಕ ಅವಶ್ಯಕತೆಗಳನ್ನು ಕೂಡಾ ಒದಗಿಸಲಾಗದ ರಾಜ್ಯ ಸರ್ಕಾರದ ವಿಫಲತೆಯನ್ನು ಹಾಗೂ ಒಟ್ಟು ಪ್ರಚಲಿತ ಸಂಧಿಗ್ದತೆಯನ್ನು ನಿಭಾಯಿಸುವಲ್ಲಿ ಪ್ರಜಾಪರವಿರಬೇಕಾಗಿದ್ದ, ಸರ್ಕಾರವು ತದ್ವಿರುದ್ಧವಾಗಿರುವ ಪ್ರಸಕ್ತ ಜನವಿರೋಧಿ ಧೋರಣೆಯನ್ನು ಖಂಡಿಸಿ, ಸಮಾನ ಮನಸ್ಕ ರಾಜಕೀಯ ಪಕ್ಷಗಳು ಮತ್ತು ಸಾಮಾಜಿಕ ಸಂಘಟನೆಗಳ ಒಕ್ಕೂಟ ಆಯೋಜಿಸಿರುವ “ನಾವೂ ಬದುಕಬೇಕು” ಎಂಬ ಜನಾಗ್ರಹ ಆಂದೋಲನದ ಭಾಗವಾಗಿ ಅದೇ ಧ್ಯೇಯ ವಾಕ್ಯದ ಭಿತ್ತಿ ಪತ್ರದೊಂದಿಗೆ ಖಾಲಿ ಚೀಲ ಹಿಡಿದು ಖಾಲಿ ತಟ್ಟೆ ಬಡಿದು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ರಾಜ್ಯವ್ಯಾಪಿಯಾಗಿ ಇಂದು ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು, ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆಗಳಲ್ಲಿರುವ ಪಕ್ಷದ ಕಾರ್ಯಕರ್ತರು, ಸಮಾನ ಮನಸ್ಕ ಸಾಮಾಜಿಕ ಸಂಘಟನೆ, ರಾಜಕೀಯ ಪಕ್ಷಗಳು ಮತ್ತು ಜನ ಸಾಮಾನ್ಯರೊಂದಿಗೆ ಸೇರಿ, ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ದ.ಕ. ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿತು. ಇದರ ಸಲುವಾಗಿ ಇಂದು ಮುಂಜಾನೆ 9 ರಿಂದ 9:30 ಸಮಯದಲ್ಲಿ ವೆಲ್ಪೇರ್ ಪಕ್ಷದ ಕಾರ್ಯಕರ್ತರು ಕುಟುಂಬ ಸಮೇತರಾಗಿ ತಮ್ಮ ತಮ್ಮ ಮನೆಗಳ ಮುಂದೆ ಮತ್ತು ಕೆಲವೆಡೆಗಳಲ್ಲಿ ಮುಖ್ಯ ಬೀದಿಗೆ ಬಂದು ಖಾಲಿ ಚೀಲವನ್ನು ಕೈಯಲ್ಲಿ ಹಿಡಿದು ಖಾಲಿ ತಟ್ಟೆ ಬಡಿದು ನಾವೂ ಬದುಕಬೇಕು ಎಂಬ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದರು.
ಈ ನಿಟ್ಟಿನಲ್ಲಿ ಇಂದಿನ ಸಾಂಕೇತಿಕ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ಪಕ್ಷದ ಕಾರ್ಯಕರ್ತರು ಮತ್ತು ಜತೆ ಸೇರಿಕೊಂಡ ಎಲ್ಲಾ ನಾಗರಿಕರನ್ನು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿರುವ ಅಡ್ವೋಕೇಟ್ ಸರ್ಪರಾಝ್ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಎಮ್. ಮುತ್ತಲಿಬ್ ರವರುಗಳು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಅಭಿನಂದಿಸಿ ಧನ್ಯವಾದಗಳನ್ನು ಸಲ್ಲಿಸಿರುವರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.