(www.vknews.com) : ಪಾಣಾಜೆ ಗ್ರಾಮದ ಸುನ್ನಿನಗರ ನಿವಾಸಿಯಾಗಿದ್ದ ಜೆ.ಎಸ್.ಮುಹಮ್ಮದ್ ಹಾಜಿ ಅವರು ತಮ್ಮ ಜೀವನದಲ್ಲಿ ತುಂಬಾ ಕಷ್ಟವನ್ನು ಸ್ವತಃ ಅನುಭವಿಸಿದವರು. ಅವರು ಎಷ್ಟು ಕಷ್ಟದಲ್ಲಿ ಇದ್ದರು ಸಹ ಧಾರ್ಮಿಕ ನಿಷ್ಠೆ ಉಳ್ಳವರಿಗಿದ್ದು 5 ಹೊತ್ತಿನ ನಮಾಜಿಗೆ ಮಸೀದಿಯಲ್ಲಿ ಜಮಾಹತ್ ತಪ್ಪಿಸುವವರಲ್ಲ. ಮಸೀದಿಯಲ್ಲಿ ಬಾಂಗ್ (ಅಜಾನ್) ನೀಡುವುದು ಅವರಿಗೆ ತುಂಬಾ ಇಷ್ಟವಾಗಿತ್ತು. ಮಸೀದಿಗಳಲ್ಲಿ ಉಸ್ತಾದವರುಗಳು ಇದ್ದರು ಸಹ ಅವರು ಹೆಚ್ಚಾಗಿ ಬಾಂಗ್ ನೀಡುತ್ತಿದ್ದರು.
ಅವರು ನನ್ನ ತಂದೆ ಯವರಾದ ಹಾಜಿ ಎಸ್ ಮಹಮ್ಮದ್ ಹಾಜಿ ಅವರಿಗೆ ತುಂಬಾ ಪ್ರಿಯರಾಗಿದ್ದರು. ನಮ್ಮ ಮನೆಯಲ್ಲಿ ನಡೆಯುವ (ಮೌಲೂದ್ , ರಾತೀಬ್ ) ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ನಮ್ಮನ್ನು ಜೆ.ಎಸ್.ಹಾಜಿ ಅವರನ್ನು ಆಹ್ವಾನಿಸಲು ಪ್ರತ್ಯೇಕವಾಗಿ ಹೇಳಿ ಕಳುಹಿಸುತ್ತಿದ್ದರು. ನನ್ನ ತಂದೆಯವರಲ್ಲೂ ಅವರಿಗೆ ತುಂಬಾ ಅಭಿಮಾನವತ್ತು. (ಅಲ್ಲಾಹುವೇ ನನ್ನ ತಂದೆಯವರ ಖಬರ್ ಜೀವನವನ್ನು ಸಂತೋಷಗೊಳಿಸು ಆಮೀನ್.) ತಂದೆ ಯವರ ಅವರ ಜೀವನದ ಪರಿಶುದ್ಧತೆಯನ್ನು ನೆನಪಿಸಿ ಬರೆಯುವಾಗ ನನ್ನ ಕಣ್ಣು ಹೊದ್ದೆಯಾಗಿ ಬಿಟ್ಟಿತು. ಅವರ ಆ ಗುಣಗಳನ್ನು ನಮ್ಮ ಜೀವನದ್ಲಲಿ ಮುಂದುವರಿಸಲು ಅಲ್ಲಾಹು ತೌಫಿಕ್ ನೀಡಲಿ ಆಮೀನ್.ನಾನು ಜೆ.ಎಸ್.ಮುಹಮ್ಮದ್ ಹಾಜಿ ವರ ಗುಣತೆಯನ್ನು ಗೌರವಿಸುವ ಓರ್ವನಾಗಿದ್ದೇನೆ.
ನಾನು ಗಲ್ಫ್ ನಲ್ಲಿ ಇದ್ದರು ಊರಿಗೆ ಬಂದಾಗ ಅವರನ್ನು ಮನೆಗೆ ಹೋಗಿ ಮಾತಾನಾಡಿಸಿ ಬರುವುದು ನನ್ನ ವಾಡಿಕೆ. ನನಗೆ ನನ್ನ ಕುಟುಂಬದ ಹಿರಿಯರಂತೆ ಅವರನ್ನು ಸ್ನೇಹಿಸುತ್ತಿದ್ದೆ. ನನ್ನ ಮನೆ ನಿರ್ಮಾಣ ಸಮಯದಲ್ಲಿ ಅವರಿಂದ ಸಹಕಾರವನ್ನು ಪಡೆಯುತ್ತಿದ್ದೆ. ಅವರು ನನ್ನ ಸ್ವಂತವರ ಮನೆ ನಿರ್ಮಾಣ ಎಂದು ಭಾವಿಸಿ ಕಾರ್ಯಗಳನ್ನು ಕೆಲವೊಮ್ಮೆ ವೀಕ್ಷಿಸುತ್ತಿದ್ದರು.ಇದು ಎಂದೂ ಮರೆಯಲಸಾದ್ಯ .
ಕರ್ನಾಟಕ ರಾಜ್ಯ್ದ ದಕ್ಷಿಣ ಕನ್ನಡ ಜಿಲ್ಲೆ ಎಂದರೆ ಸಂಪನ್ನ ಮುಸ್ಲಿಂ ಬಲಾಢ್ಯರು ಇರುವ ಜಿಲ್ಲೆ. ಇವರೆಲ್ಲರೂ ಜೆ.ಎಸ್.ಹಾಜಿ ಯವರ ಮನಸ್ಥಿತಿಯವರಾಗಿದ್ದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಡ ಮುಸ್ಲಿಂ ಕುಟುಂಬ ಗಳು ಕಾಣಲು ಸಿಗುತ್ತಿರಲಿಲ್ಲ. ಎಲ್ಲಾ ಸಂಪನ್ನರಿಗೂ ಅಲ್ಲಾಹು ಬಡವರಿಗೆ ಸಹಾಯ ಮಾಡುವ ಮನಸ್ಸನ್ನು ನೀಡಲಿ ಆಮೀನ್..ಜೆ.ಎಸ್.ಹಾಜಿ ಯವರ ಈಗ ತೆಗೆದುಕೊಂಡ ತೀರ್ಮಾನವನ್ನು ನೋಡಿದಾಗ ತುಂಬಾ ಸಂತೋಷವಾಯಿತು. 5 ಯತೀಮ್ ಅಥವಾ ಬಡ ಕುಟುಂಬದ ಹೆಣ್ಣು ಮಕ್ಕಳ ಮದುವೆ ನೆಡೆಸುವ ವಿಚಾರ ಅದರಲ್ಲೂ ಮುಂದೆ ಓದಿದಾಗ ನೀಡಿದೆ ಮೊದಲ ಆದ್ಯತೆ ನನ್ನ ಕುಟುಂಬ 2 ನೇ ಆದ್ಯತೆ ನನ್ನ ಗ್ರಾಮ ನಂತರವಾಗಿತ್ತು ತಾಲೂಕು . ಇದು ಎಲ್ಲಾ ಶ್ರೀಮಂತರಿಗೂ ಅಥವಾ ದಾನಿಗಳಿಗೆ ಮಾದರಿ ಎಂದೂ ನಾನು ತಿಳಿಯುತ್ತೇನೆ. ನಮಗೆ ಇಸ್ಲಾಂ ಕಳುಹಿಸುತ್ತಿರುವುದು ಇದನ್ನೇ ಅಲ್ಲಾಹುವೇ ನಮಗೂ ಈ ಭಾಗ್ಯವನ್ನು ನೀಡು …
ಅವರೊಂದಿಗೆ ಅವರಿಗೆ ಸಾಥ್ ಕೊಡುತ್ತಿರುವ ಅವರ ಮಗ ಲವಲವಿಕೆಯ ಯುವ ಉದ್ಯಮಿ ಮನ್ಸೂರ್ ಹಾಗೂ ಸಹೋದರರು … ಅಲ್ಲಾಹುವೇ ಜೆ.ಎಸ್.ಮುಹಮ್ಮದ್ ಹಾಜಿ ಮತ್ತು ಕುಟುಂಬಕ್ಕೆ ಅಫಿಯತ್ ಉಳ್ಳ ದೀರ್ಘಾಯುಸ್ಸನ್ನು ಅನುಗ್ರಹಿಸು ಅವರ ಈ ಸೇವೆಯನ್ನು ಸ್ವೀಕರಿಸು ಇನ್ನು ಅವರಿಗೆ ಬರ್ಕತ್ ಅನುಗ್ರಹಿಸು ಮುಂದೆಯೂ ಈ ಬಡವರ ಕಣ್ಣೇರು ಒರೆಸುವ ಸೇವೆಯನ್ನು ಮುಂದುವರಿಸುವ ಶಕ್ತಿಯನ್ನು ನೀಡಿ ಅನುಗ್ರಹಿಸು ಅಲ್ಲಾ…. ಆಮೀನ್ ಆಮೀನ್ ಯಾ ರಬ್ಬಲ್ ಆಲಮೀನ್.
ಎಸ್.ಯೂಸುಫ್ ಆರ್ಲಪದವು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.