ಶ್ರೀನಿವಾಸಪುರ (www.vknews.com) :- ತಾಲ್ಲೂಕಿನ ಗೌನಿಪಲ್ಲಿಯ ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಯ ಚಿಲೇಪಲ್ಲಿ ಗ್ರಾಮದಲ್ಲಿ ಒಂದೇ ದಿನದಂದು ೨೮ ಕೋವಿಡ್ ಪ್ರಕರಣಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ತಾಲ್ಲೂಕು ನೂಡಲ್ ಅಧಿಕಾರಿ ಡಾ//ಕಮಲ ಎಂ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿ ಡಾ//ಎಂ ಸಿ ವಿಜಯ ತಂಡದವರು ಮನ ಮನ ಭೇಟಿ ಮಾಡಿದರು.
ಗ್ರಾಮದ ೨೮ ಕೊವಿಡ್ ಸೋಂಕಿತ ಪ್ರಕರಣಗಳ ಮನೆಗಳಲ್ಲಿ ಪ್ರಥಮ ಸಂಪರ್ಕ ಮತ್ತು ದ್ವಿತೀಯ ಸಂಪರ್ಕ ಹೊಂದಿರುವವರ ಮೂಗು ಮತ್ತು ಗಂಟಲು ದ್ರವ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಲಾಯಿತು. ಹಾಗೂ ಸೋಂಕಿತ ವ್ಯಕ್ತಿಗಳ ಮನ ಒಲಿಸಿ ಕೋವಿಡ್ ಕೇರ್ ಕೇಂದ್ರಕ್ಕೆ ಆಂಬ್ಯುಲೆನ್ಸ್ ಮೂಲಕ ದಾಖಲಿಸಲಾಯಿತು. ಅಲ್ಲಿನ ಗ್ರಾಮಸ್ಥರಿಗೆ ಕೋವಿಡ್ ನಿಯಂತ್ರಣ ಕ್ರಮಗಳಾದ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡುವುದು ಮತ್ತು ಸಾಬೂನಿನಿಂದ ಆಗಾಗ ಕೈತೊಳೆಯುವುದು, ಪೌಷ್ಟಿಕ ಆಹಾರ ಸೇವಿಸುವುದು, ಯೋಗ ವ್ಯಾಯಾಮಗಳ ಬಗ್ಗೆ ತಿಳುವಳಿಕೆ ನೀಡಲಾಯಿತು.
ಕೋವಿಡ್ ಯಾವುದೇ ಲಕ್ಷಣಗಳಾದ ಜ್ವರ , ಕೆಮ್ಮು , ನೆಗಡಿ , ಮೈಕೈನೋವು , ತಲೆನೋವು , ಸುಸ್ತು ವಾಖರಿಕೆ , ವಾಂತಿ , ವಾಸನ ಮತ್ತು ರುಚಿ ಗೊತ್ತಾಗದೆ ಇರುವುದು , ಈ ಲಕ್ಷಣಗಳುಕಂಡು ಬಂದ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಪರೀಕ್ಷಿಸಿ ಸೂಕ್ತ ಚಿಕಿತ್ಸೆ ಪಡೆಯುವುದಾಗಿ ಶ್ರೀನಿವಾಸಪುರ ತಾಲ್ಲೂಕು ನೋಡಲ್ ಅಧಿಕಾರಿ ಡಾ// ಕಮಲ ಎಲ್ಲ ಮಾಹಿತಿ ನೀಡಿದರು ಹಾಗೂ ಗ್ರಾಮಸ್ಥರಿಗೆ ಕಡ್ಡಾಯವಾಗಿ ಕೊವಿಡ್ ಲಸಿಕೆಯನ್ನು ೧೮ ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಲು ಸೂಚಿಸಿದರು.
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.