ಜೆದ್ದಾ(www.vknews.in): ಸೌದಿ ಅರೇಬಿಯಾ 11 ದೇಶಗಳಿಂದ ಬರುವ ಪ್ರಯಾಣಿಕರ ಮೇಲಿನ ನಿಷೇಧವನ್ನು ತೆಗೆದುಹಾಕಿದೆ ಎಂದು ಸೌದಿ ರಾಜ್ಯ ಸುದ್ದಿ ಸಂಸ್ಥೆ ಶನಿವಾರ ತಿಳಿಸಿದೆ, ಆದರೆ ಕ್ಯಾರೆಂಟೈನ್ ಕಾರ್ಯವಿಧಾನಗಳು ಈಗಿರುವಂತೆ ಮುಂದುವರಿಯುತ್ತದೆ ಎಂದು ಅದು ಸ್ಪಷ್ಚಪಡಿಸಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್, ಜರ್ಮನಿ, ಯುನೈಟೆಡ್ ಸ್ಟೇಟ್ಸ್, ಐರ್ಲೆಂಡ್, ಇಟಲಿ, ಪೋರ್ಚುಗಲ್, ಯುನೈಟೆಡ್ ಕಿಂಗ್ಡಮ್, ಸ್ವೀಡನ್, ಸ್ವಿಟ್ಜರ್ಲೆಂಡ್, ಫ್ರಾನ್ಸ್ ಮತ್ತು ಜಪಾನ್ ದೇಶಗಳ ಪ್ರಯಾಣಿಕರಿಗೆ ಭಾನುವಾರದಿಂದ ಪ್ರವೇಶಿಸಲು ಅನುಮತಿ ನೀಡಲಾಗುವುದು ಎಂದು ಆಂತರಿಕ ಸಚಿವಾಲಯದ ಮೂಲವನ್ನು ಉಲ್ಲೇಖಿಸಿ ಎಸ್ಪಿಎ ವರದಿ ಮಾಡಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.