ಬೆಂಗಳೂರು (www.vknews.com) : ಗಮನ-ಕೊರತೆ / ಹೈಪರ್ಆಯ್ಕ್ಟಿವಿಟಿ ಡಿಸಾರ್ಡರ್ (ADHD) ಪ್ರಸ್ತುತ ನಡೆಯುತ್ತಿರುವ ಪ್ರವೃತ್ತಿ ಮತ್ತು / ಅಥವಾ ಹೈಪರ್ಆಕ್ಟಿವಿಟಿ-ಪ್ರಚೋದಕತೆಯು ಕಾರ್ಯಚಟುವಟಿಕೆಯಿಂದಾಗಿ ಮೆದುಳಿನ ಅಸ್ವಸ್ಥತೆಯಾಗುತ್ತಿದೆ.
ಪೂಜಾ ಎಂಬುವವರ 6 ವರ್ಷದ ಮಗನು ಆಗಾಗ್ಗೆ ಅತಿಯಾದ ಕೋಪವನ್ನು ತೋರಿಸಲಾರಂಭಿಸಿದಾಗ, ಇತರ ಮಕ್ಕಳ ಜೊತೆ ಸೇರಿ ಈ ರೀತಿ ಕಲಿತನೆಂದು ಆತನಿಗೆ ಹೊರಗಡೆ ಇತರ ಮಕ್ಕಳ ಜೊತೆ ಆಟ ಆಡದಂತೆ ಶಿಕ್ಷೆಕೊಡಲಾಯಿತು. ಅನೇಕ ಪೋಷಕರು ADHD ಲಕ್ಷಣಗಳನ್ನು ಗುರುತಿಸಲು ವಿಫಲರಾಗುತ್ತಿದ್ದಾರೆ. ಹಾಗೂ ಈ ಕಾರಣಕ್ಕಾಗಿ ತಮ್ಮ ಮಕ್ಕಳ ಜೊತೆಗೆ ಕಠಿಣವಾಗಿ ನಡೆದುಕೊಂಡು ತಮ್ಮ ಮಕ್ಕಳ ಉತ್ತಮ ಜೀವನದ ಭವಿಷ್ಯದ ಕನಸನ್ನು ತಾವೇ ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ.
ADHD ಎಂದರೇನು?
ಇತ್ತೀಚಿನ ಅಧ್ಯಯನಗಳ ಪ್ರಕಾರ ಜಾಗತಿಕ ಮಟ್ಟದಲ್ಲಿ ಗಮನ ಕೊರತೆ (ಡೆಫಿಸಿಟ್) ಹೈಪರ್ಆಯ್ಕ್ಟಿವಿಟಿ ಡಿಸಾರ್ಡರ್ (ADHD) 5.29% ಆಗಿದೆ. ಈ ADHD ಖಾಯಿಲೆಯು ೩೯ ರಿಂದ ೪೧ ವಾರಗಳ ನಂತರ ಜನಿಸಿದ ಮಗುವಿಗಿಂತ, ಅಕಾಲಿಕವಾಗಿ ಪ್ರಸವ ಪೋರ್ವ ಜನನ ಅಥವಾ ಕಡಿಮೆ ತೂಕವಿರುವ ಶಿಶುಗಳಲ್ಲಿ ೩ ಪಟ್ಟೂ ಅಧಿಕವಾಗಿ ಕಂಡುಬರುತ್ತದೆ.ಈ ಸಮಸ್ಯೆಗೆ ಪ್ರಮುಖ ಕಾರಣ ಮಗುವಿನ ಪ್ರಮುಖ ಅಂಗಾಂಗಳ ಬೆಳವಣಿಗೆಯ ಕೊರತೆ, ಅಪೂರ್ಣ ಬೆಳವಣಿಗೆಯ ಒತ್ತಡ ಹಾಗೂ ಇದರಿಂದಾಗುವ ಹಾರ್ಮೋನುಗಳ ಬದಲಾವಣೆ ಮತ್ತು ಉರಿಯೂತ ಇವುಗಳು ADHDಗೆ ಕಾರಣವಾಗುತ್ತದೆ. ಆದರೂ ಈ ADHD ಕಾಯಿಲೆಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಧೂಮಪಾನ ಮತ್ತು ಮದ್ಯಪಾನ ಸೇವಿಸುವ ತಾಯಿಯಂದಿರು, ತಮ್ಮೂಲಕ ಮಗುವಿನ ಆರೋಗ್ಯದಲ್ಲಿ ಅಪಾಯಕಾರಿ ಪರಿಣಾಮ ಬೀರುವುದಲ್ಲದೇ, ಈ ಅಭ್ಯಾಸಗಳು ಮಕ್ಕಳಲ್ಲಿ ADHDಗೆ ಕಾರಣವಾಗಬಹುದು.
ADHD ಮತ್ತು ನಡವಳಿಕೆಗಳು ತೊಂದರೆಗಳು
ADHD ಯೊಂದಿಗಿನ ಮಕ್ಕಳು ಒಂದು ಕಾರ್ಯದ ಮೇಲೆ ಕೇಂದ್ರೀಕರಿಸುವ ಮತ್ತು ಬಹಳ ಕ್ರಿಯಾತ್ಮಕವಾಗಿ, ತಮ್ಮನ್ನು ತಾವೇ ತೊಡಗಿಸಿಕೊಳ್ಳುವ ತೊಂದರೆ ಹೊಂದಿರುತ್ತಾರೆ. ಅವರನ್ನು ತಿರಸ್ಕರಿಸಿದಾಗ, ತಮ್ಮ ಚಟುವಟಿಕೆಗಳನ್ನು ಮತ್ತು ಸಂಭಾಷಣೆಗಳನ್ನು ಯಾರಿಗೂ ತಿಳಿಸದೇ ತಮ್ಮಲ್ಲೇ ಬಚ್ಚಿಟ್ಟುಕೊಳ್ಳುತ್ತಾರೆ. ಇದರಿಂದ ಇವರಲ್ಲಿ ಯಾವುದನ್ನೂ ಸಕ್ರಿಯೆಗೊಳಿಸಲು ಸಾಧ್ಯವಾಗುವುದಿಲ್ಲ. ADHD ಇರುವ ಮಕ್ಕಳು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಎಲ್ಲಾ ಸಂದರ್ಭಗಳಲ್ಲಿ ತೊಂದರೆ ಅನುಭವಿಸುತ್ತಾರೆ. ಅವರು ಸ್ಥಿರವಾಗಿ ಕುಳಿತುಕೊಳ್ಳಲು ಅಥವಾ ವಿಷಯದ ಕಡೆ ಗಮನ ಹರಿಸಲೂ ಸಾಧ್ಯವಾಗದ ಸ್ಥಿತಿಯಲ್ಲಿ ಇರುತ್ತಾರೆ.
ಭಾರತದಲ್ಲಿ ADHD
ADHD ಭಾರತದಲ್ಲಿ ಪ್ರಚಲಿತವಾಗಿದೆ ಮತ್ತು ದಕ್ಷಿಣ ಭಾರತದಲ್ಲಿ ಇತ್ತೀಚಿನ ಅಧ್ಯಯನದ ಪ್ರಕಾರ ಪ್ರಾಥಮಿಕ ಶಾಲಾ ಮಕ್ಕಳಲ್ಲಿ 11.3% ರಷ್ಟು ಮತ್ತು ಪ್ರೌಢಾವಸ್ಥೆಯ ಪುರುಷ-ಸ್ತ್ರೀ ಅನುಪಾತ 4.1 ರಷ್ಟಿದೆ ಎಂದು ಉಲ್ಲೇಖಿತವಾಗಿದೆ.
ADHD ಭಾರತದಲ್ಲಿ ಪರಿಚಯವಿಲ್ಲದ ಸ್ಥಿತಿಯಾಗಿಲ್ಲದಿದ್ದರೂ, ಹೆತ್ತವರು ಮತ್ತು ಶಿಕ್ಷಕರು ಇನ್ನೂ ಮಗುವಿಗೆ ಈ ಖಾಯಿಲೆ ಇರಬಹುದೆಂದು ಗುರುತಿಸಲು ಸಾಧ್ಯವಾಗಿಲ್ಲ. ADHD ಲಕ್ಷಣಗಳ ಬಗ್ಗೆ ಸಾಕಷ್ಟು ಅರಿವಿಲ್ಲದಿದ್ದರೂ, ಮಕ್ಕಳು ಹೈಪರ್ಆಕ್ಟಿವ್ ಆಗಿದ್ದರೆ, ಅವರನ್ನು ಪೋಷಕರು ಮತ್ತು ಶಿಕ್ಷಕರ ಮೂಲಕ ಹಠಮಾರಿ ಅಥವಾ ಹಠಾತ್ ಪ್ರವೃತ್ತಿಯ ಮಕ್ಕಳು ಎಂದು ಪರಿಗಣಿಸಲಾಗುತ್ತದೆ. ಮಗುವಿಗೆ ಈ ಖಾಯಿಲೆ ಇದೆ ಎಂದು ಯಾರ ಅರಿವಿಗೂ ಬಾರದಿದ್ದರೇ ಚಿಕಿತ್ಸೆ ವಿಳಂಬವಾಗುತ್ತದೆ. ಅಲ್ಲದೆ, ಮಗುವಿಗೆ ADHDನ ಗಮನ-ಕೊರತೆವಿದ್ದರೆ, ಪರಿಸ್ಥಿತಿಯ ಯಾವುದೇ ಲಕ್ಷಣಗಳನ್ನು ಗಮನಿಸುವುದು ಕಷ್ಟಕರವಾಗುತ್ತದೆ. ಈ ಅಸ್ವಸ್ಥತೆಯು ವ್ಯಕ್ತಿಯ ವಯಸ್ಸಾದಷ್ಟು ವಯಸ್ಸಿನ ಜೊತೆಗೂ ಇರುತ್ತದೆ ಎಂಬ ಮಾತೂ ಕೂಡ ಇದೆ.
ADHD ಎಂಬುದು ಮಿದುಳಿನ ಅಸ್ವಸ್ಥತೆಯಾಗಿದ್ದು, ಭಾರತೀಯ ಸಮಾಜದಲ್ಲಿ ಪರಿಗಣಿಸಲ್ಪಡುವ ಒಂದು ನಡವಳಿಕೆಯ ಸಮಸ್ಯೆಯಲ್ಲದೆ, ಪ್ರತಿಬಂಧ ಮತ್ತು ಸ್ವನಿಯಂತ್ರಣವನ್ನು ಒಳಪಡಿಸುತ್ತದೆ. ಈ ADHD ಮಗುವಿನ ರೋಗನಿರ್ಣಯ ಮತ್ತು ಮೌಲ್ಯಮಾಪನವನ್ನು ನಿರ್ಧರಿಸಲು ನಮ್ಮ ದೇಶದಲ್ಲಿ ಯಾವುದೇ ನಿರ್ದಿಷ್ಟ ಮಾರ್ಗದರ್ಶಿ ಇಲ್ಲ, ಈ ನ್ಯೂನತೆಗಳ ಕಾರಣ, ಮಕ್ಕಳಿಗೆ ಅಗತ್ಯವಿರುವ ಸಮಗ್ರ ಸಹಾಯವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇದು ಅವರ ಶೈಕ್ಷಣಿಕ ಹಾಗೂ ಸಾಮಾಜಿಕ ಜೀವನದಲ್ಲಿ ಬೃಹತ್ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಸಂಸ್ಕರಿಸದ ( ಚಿಕಿತ್ಸ ರಹಿತ) ADHD ಮಕ್ಕಳು ಸಾಮಾಜಿಕ ಕೌಶಲ್ಯಗಳನ್ನು, ಭಾವನಾತ್ಮಕ ನಿಯಂತ್ರಣ ಮತ್ತು ಉದ್ವೇಗ ನಿಯಂತ್ರಣವನ್ನು ಕಲಿಯುವುದಿಲ್ಲ ಮತ್ತು ಹೈ ಬಿಪಿ, ನಿಧಾನಗತಿಯ ಬೆಳವಣಿಗೆ, ಹಸಿವಿನ ನಷ್ಟ ಮುಂತಾದ ದೀರ್ಘಕಾಲದ ರೋಗಗಳಿಗೆ ತುತ್ತಾಗುತ್ತಾರೆ.
ADHD ರೋಗನಿರ್ಣಯ ಮತ್ತು ನಿರ್ವಹಣೆ
ಚಿಕಿತ್ಸಾಲಯಗಳ ಸಂದರ್ಶನ ಮತ್ತು ಮೌಲ್ಯಮಾಪನ ಪರೀಕ್ಷೆಗಳ ಸಹಾಯದಿಂದ ಶಿಶುತಜ್ನರು ADHD ಅನ್ನು ನಿರ್ಣಯಿಸಬಹುದು. ವಿವಿಧ ಪರೀಕ್ಷೆ, ತಪಾಸಣೆ ಮತ್ತು ದೃಷ್ಟಿಗೋಚರ ತರಬೇತಿಗಳು ಮಗುವಿನ ಏಕಾಗ್ರತೆಯನ್ನು ಸುಧಾರಿಸಲು ಸಹಾಯ ಮಾಡುವ ಕೆಲವು ವಿಧಾನಗಳಾಗಿವೆ. ಪೋಷಕರು, ಶಿಕ್ಷಕರು ಮತ್ತು ವೈದ್ಯರಲ್ಲಿ ADHD ಮಕ್ಕಳನ್ನು ಹೇಗೆ ನಿರ್ವಹಿಸಬೇಕು ಹಾಗೂ ವ್ಯವಹರಿಸಬೇಕು ಎಂಬುದರ ಬಗ್ಗೆ ಅರಿವು/ಜಾಗೃತಿ ಮೂಡಿಸಬೇಕು. ಮಗುವಿನ ನಡವಳಿಕೆಯಲ್ಲಿ ಸ್ಥಿರವಾದ ಮಾದರಿಯನ್ನು ವೀಕ್ಷಿಸಲು ಶಿಕ್ಷಕರು ಮತ್ತು ಪೋಷಕರು ಯತ್ನಿಸಬೇಕು. ಮಗು ಹಠಾತ್ತನೆ ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿದಾಗ, ಭಾವನಾತ್ಮಕ ಪ್ರಕೋಪವನ್ನು ಹೊಂದಿರುವಾಗ ಅಥವಾ ಅವರು ಶಾಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸದಿದ್ದಾಗ, ಅವರನ್ನು ಗಮನಿಸಬೇಕು.
ಮಾನಸಿಕ ಚಿಕಿತ್ಸೆ, ನಡವಳಿಕೆಯ ಚಿಕಿತ್ಸೆ ಮತ್ತು ಸಮಾಲೋಚನೆಯಿಂದಾಗಿ ADHD ಮಕ್ಕಳಿಗೆ ಸಹಾಯ ಮಾಡಬಹುದು.
ಮನೋರೋಗ ಚಿಕಿತ್ಸೆ, ನಡವಳಿಕೆಯ ಚಿಕಿತ್ಸೆ ಮತ್ತು ಸಮಾಲೋಚನೆಗಳ ಮೂಲಕ ಮಕ್ಕಳ ಹಠಾತ್ ಚಟುವಟಿಕೆಗಳನ್ನು ನಿಭಾಯಿಸಲು ಸಹಾಯ ಮಾಡಬಹುದು. ಮನೆಯಲ್ಲಿ ವರ್ತನೆಯ ಚಿಕಿತ್ಸೆಯು ಬಂದಾಗ, ಪೋಷಕರು, ವೈದ್ಯರೊಂದಿಗೆ ಮತ್ತು ಸಮಲೋಚಕರೊಂದಿಗೆ ಸಹಕರಿಸಬೇಕು. ಸರಿಯಾದ ಆಹಾರವನ್ನು ನಿರ್ವಹಿಸುವುದು ಮತ್ತು ಒತ್ತಡವನ್ನು ಕಡಿಮೆ ಮಾಡುವುದರಿಂದ ADHD ಮಕ್ಕಳನ್ನು ನಿರ್ವಹಿಸಲು ಸಹಾಯವಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಮಕ್ಕಳಿಗೆ ಔಷಧಿಗಳು ಬೇಕಾಗಬಹುದು, ಆದರೆ ನೋಂದಾಯಿತ ವೈದ್ಯರು ಮಾತ್ರ ಸೂಚಿಸಬೇಕು. ಸರಿಯಾದ ವೈದ್ಯರು, ಹಾಗೂ ಔಶದೋಪಚಾರ ಮತ್ತು ಚಿಕಿತ್ಸೆಯ ಸಂಯೋಜನೆಯೊಂದಿಗೆ ಮಕ್ಕಳನ್ನು ADHD ಖಾಯಿಲೆಯಿಂದ ಕಾಪಾಡಬಹುದು, ಮತ್ತು ಅವರ ಮುಂದಿನ ಶೈಕ್ಷಣಿಕ, ಸಾಮಾಜಿಕ ಹಾಗೂ ಆರೋಗ್ಯಕರ ಜೀವನವನ್ನು ಸುಖಕರವಾಗಿಸಬಹುದು.
ಲೇಖಕರು : ಡಾ. ಇಂದು ಎಸ್. ನಾಯರ್, ಸೀನಿಯರ್. ಕನ್ಸಲ್ಟೆಂಟ್ ನಿಯೋನಾಟಾಲಜಿ ಮತ್ತು ಪೀಡಿಯಾಟ್ರಿಕ್ಸ್, ಅಪೊಲೊ ಕ್ರೇಡ್ಲ್, ಜಯನಗರ್ (ಎಮ್ಬಿಬಿಎಸ್, ಡಿಎನ್ಬಿ, ಡಿಸಿಎಚ್, ಫೆಲೋಷಿಪ್ ಇನ್ ನಿಯೋನಾಟಾಲಜಿ).
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.