ಮಂಗಳೂರು (www.vknews.com) ; ಕೋವಿಡ್ ನಿಮಿತ್ತ ಜನರು ತೀರಾ ತೊಂದರೆ ಅನುಭವಿಸುತ್ತಿರುವ ಸಂದರ್ಭದಲ್ಲಿ ಜನಪರ ಕಾಳಜಿ ವಹಿಸಿ ಅನೇಕ ಸಂಘ ಸಂಸ್ಥೆಗಳ ಕಾರ್ಯಕರ್ತರು ಅಹರ್ನಿಶಿ ದುಡಿಯುತ್ತಿದ್ದಾರೆ.
ವೈದ್ಯರು, ದಾದಿಯರು,ವಾರಿಯರ್ಸ್ ಗಳ ಜೊತೆಗೆ ರೋಗಿಗಳ ಆರೈಕೆಯಿಂದ ಹಿಡಿದು ತೀರಿಕೊಂಡಾಗ ಶವಸಂಸ್ಕಾರ ವನ್ನು ಕೂಡಾ ಹೆಗಲಿಗೆ ಹೆಗಲು ಕೊಟ್ಟು ಶಾಸ್ತ್ರ ಬದ್ದವಾಗಿ ಬೇಧ ಭಾವ ತೋರದೇ ನಡೆಸುತ್ತಿದ್ದಾರೆ. ಭಾರತೀಯ ಬಂಧುತ್ವಕ್ಕೆ ಹೆಚ್ಚು ಒತ್ತು ಕೊಡುವ ಕಾರ್ಯ ಎಲ್ಲಾಕಡೆಯಿಂದಲೂ ನಡೆಯುತ್ತಿದೆ.
ಸಾಮಾಜಿಕ ಸೇವಾ ರಂಗದಲ್ಲಿ ಹೆಚ್ಚಿನ ಕಾರ್ಯಕ್ಷಮತೆ ಇರುವ ಎಸ್ಕೆಎಸ್ಸೆಸ್ಸೆಪ್ ನ ಟೀಮ್ ವಿಖಾಯ ಕೂಡಾ ಸಂತ್ರಸ್ತರಿಗೆ ಗರಿಷ್ಟ ಮಟ್ಟದಲ್ಲಿ ಸಾಥ್ ನೀಡುತ್ತಿದೆ.
ಕೋವಿಡ್ ಮಯ್ಯಿತ್ ಪರಿಪಾಲನೆ ವೇಳೆ ಧರಿಸಲು ಅನಿವಾರ್ಯ ವಾಗಿರುವ ಪಿಪಿಇ ಕಿಟ್ ನ ಕೊರತೆಯನ್ನು ನೀಗಿಸುವ ಸಲುವಾಗಿ ದಾರಿಮಿ ಉಲಮಾ ಒಕ್ಕೂಟವು ಮೊದಲ ಹಂತದ 250 ಕಿಟ್ ನ್ನು ನೀಡುವುದರ ಮೂಲಕ ವಿಖಾಯ ದೊಂದಿಗೆ ಕೈ ಜೋಡಿಸಿದ್ದು ಎಸ್ ಕೆ ಎಸ್ಸೆಸ್ಸೆಪ್ ಜಿಲ್ಲಾದ್ಯಕ್ಷ ಅಮೀರ್ ತಂಙಳವರಿಗೆ ರಾಜ್ಯ ಉಲಮಾ ಕಾರ್ಯದರ್ಶಿ ಮೌಲಾನಾ ಯು ಕೆ ಅಬ್ದುಲ್ ಅಝೀಝ್ ದಾರಿಮಿ ಕಿಟ್ಟನ್ನು ಹಸ್ತಾಂತರಿಸಿದರು.
ಜಿಲ್ಲಾ ಎಸ್ಕೆಎಸ್ಸೆಸ್ಸೆಪ್ ನಾಯಕರ ಕೋರಿಕೆ ಮೇರೆಗೆ ಪಿಪಿಇ ಕಿಟ್ ಒದಗಿಸಲು ರಾಜ್ಯ ಉಲಮಾ ಒಕ್ಕೂಟ ತೀರ್ಮಾನಿಸಿದ್ದು ಒಕ್ಕೂಟದ ಅದ್ಯಕ್ಷ ಎಸ್ ಬಿ ದಾರಿಮಿಯವರ ನೇತೃತ್ವದಲ್ಲಿ ಒಮಾನ್ ದಾರಿಮಿ ,ಕೆ ಎಸ್ ಹೈದರ್ ದಾರಿಮಿ,ತಬೂಕ್ ದಾರಿಮಿ ,ಹುಸೈನ್ ದಾರಿಮಿ ಮೊದಲಾದವರ ಮೇಲ್ನೋಟದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಸಂಗ್ರಹಿಸಲಾದ ಮೊತ್ತದಿಂದ ಕಿಟ್ ಖರೀದಿಸಿ ಹಸ್ತಾಂತರಿಸಲಾಯಿತು. ಇದಕ್ಕೆ ಸಹಕರಿಸಿದ ಎಲ್ಲಾರಿಗೂ ರಾಜ್ಯ ದಾರಿಮಿ ಒಕ್ಕೂಟ ಅಭಿನಂದನೆಗಳನ್ನು ಸಲ್ಲಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.