ಹಳೆಯಂಗಡಿ (www.vknews.com) : ಮಹಾಮಾರಿ ಕರೋನವನ್ನು ತೊಲಗಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ’ ಸರಕಾರ ಅದೆಷ್ಟು ಜಾಗೃತಿ ವಹಿಸಿದರೂ ಜನ ಇನ್ನೂ ಸ್ಪಂದಿಸುತ್ತಿಲ್ಲ ಈ ನಿಟ್ಟಿನಲ್ಲಿ ವಿಶೇಷವಾಗಿ ನೂತನ ಅಭಿಯಾನದ ಮೂಲಕ ಜಾಗೃತಿ ಮೂಡಿಸುವ ಕೆಲಸ ಹಳೆಯಂಗಡಿಯಲ್ಲಿ ಬಾನುವಾರ ನಡೆಯಿತು
ಇಲ್ಲಿನ ತೋಕೂರು ಪರಿಸರದಲ್ಲಿ ಕಾರ್ಯಚರಿಸುತ್ತಿರುವ ಸಂಘ-ಸಂಸ್ಥೆ ಫೇಮಸ್ ಕ್ಲಬ್ ಹಾಗೂ ಪಡುಪಣಂಬೂರು ಗ್ರಾಮ ಪಂಚಾಯತ್ ಮತ್ತು ಇತರ ಸಹಭಾಗಿತ್ವದಲ್ಲಿ ನಡೆದ ನೂತನ ರೀತಿಯ ಕೋರೋಣ ಜಾಗೃತಿ ಅಭಿಯಾನವು ಹಳೆಯಂಗಡಿ ಕೆಮ್ರಾಲ್ ಹಾಗೂ ಪಡುಪಣಂಬೂರು ಗ್ರಾಮಪಂಚಾಯತಿಗಳ ವ್ಯಾಪ್ತಿಯ ಗ್ರಾಮೀಣ ಭಾಗಗಳಿಗೆ ತೆರಲಿ ಈ ಮೂಲಕ ಜಾಗೃತಿ ಮೂಡಿಸಲಾಯಿತು.
ಜಿಲ್ಲಾ ಪಂಚಾಯತ್ ಸದಸ್ಯರಾದ ವಿನೋದ್ ಕುಮಾರ್ ಬೊಳ್ಳೂರು, ಪಡುಪಣಂಬೂರು ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಅನಿತಾ ಕ್ಯಾಥರೀನ್, ಕಾರ್ಯದರ್ಶಿ ಲೋಕನಾಥ್ ಭಂಡಾರಿ ಸದಸ್ಯರಾದ ಮೋಹನ್ ದಾಸ್, ಸೀತಾರಾಮ ಮತ್ತು ಇತರರು ಫೇಮಸ್ ಕ್ಲಬ್ ವಠಾರದಲ್ಲಿ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವರದಿ: ಅದ್ದಿ ಬೊಳ್ಳೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.