(www.vknews.com) : ಕೇರಳದ ಬಿಜೆಪಿ-ಆರ್ಎಸ್ಎಸ್ನ ರಾಜ್ಯ ನಾಯಕರು 3.5 ಕೋಟಿ ಹವಾಲಾದಲ್ಲಿ ಭಾಗಿಯಾಗಿದ್ದು, ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕೋಮು ಹಿಂಸಾಚಾರವನ್ನು ಪ್ರಚೋದಿಸಲು ಮತ್ತು ವಿಧ್ವಂಸಕ ಕೃತ್ಯ ನಡೆಸಲು ಬಳಸಲಾಗಿತ್ತು. ಇದರ ಬಗ್ಗೆ ಈಡಿಯು ತನಿಖೆ ನಡೆಸಬೇಕು, ಈಡಿ ಆಯ್ದ ಕೆಲವೊಂದು ಕೇಂದ್ರ ಸರ್ಕಾರದ ವಿರುದ್ಧ ಧ್ವನಿಯೆತ್ತುವವರನ್ನು ಮಾತ್ರ ಭೇಟೆಯಾಡುತ್ತಿದೆ. ಇಂತಹ ಗಂಭೀರ ಪ್ರಕರಕರಣಗಳನ್ನು ಈಡಿಯು ಮರೆಮಾಚುತ್ತಿದೆ, ಈ ವಿಚಾರವಾಗಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲಾ ಸಮಿತಿ ವತಿಯಿಂದ ‘ಬಿಜೆಪಿ ಹವಾಲಾ ಕಾಣಿಸಿಕೊಂಡಾಗ ಇಡಿ ಕಣ್ಮರೆಯಾಯಿತು’ ಎಂಬ ಸಾಮೂಹಿಕ ಮೇಲಿಂಗ್ ಅಭಿಯಾನವನ್ನು ನಡೆಸಿದ್ದು , ಸಂಬಂಧಪಟ್ಟ ಇಲಾಖೆಗಳಿಗೆ, ಅಧಿಕಾರಿಗಳಿಗೆ ಇದರ ಬಗ್ಗೆ ಸೂಕ್ತ ತನಿಖೆ ನಡೆಸಲು ಈ ಮೇಲ್ ಮುಖಾಂತರ ಒತ್ತಾಯಿಸಲಾಯಿತು.
ಜಿಲ್ಲೆಯಿಂದ ಸುಮಾರು ನೂರಕ್ಕೂ ಅಧಿಕ ಈ ಮೇಲ್ ಗಳನ್ನು ವಿದ್ಯಾರ್ಥಿಗಳು, ನಾಗರಿಕರು ಕಳುಹಿಸಿದರು. ಕ್ಯಾಂಪಸ್ ಫ್ರಂಟ್ ಜಿಲ್ಲಾಧ್ಯಕ್ಷರಾದ ಅನ್ಸಾರ್ ಬೆಳ್ಳಾರೆ, ಕಾರ್ಯದರ್ಶಿ ಮುಸ್ತಾಫಾ ಕೊಡಿಪ್ಪಾಡಿ, ಉಪಾಧ್ಯಕ್ಷರಾದ ಇಮ್ರಾನ್ ಕಲ್ಲಾರ್ಪೆ, ಜೊತೆ ಕಾರ್ಯದರ್ಶಿಯಾದ ಫಾರೂಕ್ ಕಬಕ, ಫಾರೂಕ್ ಕಟ್ಟತ್ತಾರ್, ರಫೀಕ್ ಕೆಮ್ಮಾಯಿ, ಸುಹೈಲ್, ಅಫ್ರಿದ್ ಕೂರ್ನಡ್ಕ, ಮತ್ತಿತರರು ಭಾಗವಹಿಸಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.