ಬೆಳ್ಳಾರೆ (www.vknews.com): ಸಂವಿಧಾನ ವಿರೋಧಿ ಸಿ ಎ ಎ ಕಾಯ್ದೆಯನ್ನು ಹಿಂಬಾಗಿಲಿನ ಮೂಲಕ ಜಾರಿ ಮಾಡಲು ಹೊರಟ ಕೇಂದ್ರ ಸರಕಾರದ ವಿರುದ್ಧ “ತಿರಸ್ಕರಿಸಿ ಸಿ.ಎ.ಎ ರಾಜಕೀಯವನ್ನು” ಎಂಬ ಘೋಷ ವಾಕ್ಯದೊಂದಿಗೆ ಇಂದು ಜೂನ್ 1 ರಂದು ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟನೆ ಮಾಡಲಾಯಿತು.
ಬೆಳ್ಳಾರೆ ವಲಯದ ಬೆಳ್ಳಾರೆ ಮತ್ತು ಪಳ್ಳಿಮಜಲಿನಲ್ಲಿ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆಯಲ್ಲಿ ಎಸ್ ಡಿ ಪಿ ಐ ರಾಜ್ಯ ಸಮಿತಿ ಸದಸ್ಯ,ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯ ಇಕ್ಬಾಲ್ ಬೆಳ್ಳಾರೆ ಭಾಷಣ ಮಾಡಿದರು. ಎಸ್ ಡಿಪಿಐ ವಲಯ ಅಧ್ಯಕ್ಷರಾದ ಸಿದ್ದೀಕ್ ಎಂ, ರಾಜ್ಯ ಮುಖಂಡರಾದ ಶಾಫಿ ಬೆಳ್ಳಾರೆ,ಸುಳ್ಯ ಕ್ಷೇತ್ರ ಸಮಿತಿ ಸದಸ್ಯ ಫೈಝಲ್ ಟಿಎ, ವಲಯ ಸಮಿತಿ ಸದಸ್ಯರಾದ ಶಹೀದ್ ಎಂ, ಶಾಫಿ,ಟಿ, ಸಿದ್ದೀಕ್ , ಸದ್ದಾಂ ಹುಸೈನ್ , ಹಾರಿಸ್ ಪಳ್ಳಿಮಜಲು, ತಾಜುದ್ದೀನ್ ಹಾಗೂ ಕಾರ್ಯಕರ್ತರು,ಸದಸ್ಯರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.