ಜಿಲ್ಲಾ ಆಟೋ ಚಾಲಕರ ಒಕ್ಕೂಟ ಇದರ ವತಿಯಿಂದ ಶಿವಮೊಗ್ಗ ಸಂಸದ ಸನ್ಮಾನ್ಯ ಶ್ರೀ ಬಿ.ವೈ.ರಾಘವೇಂದ್ರ ಅವರಿಗೆ ಇತ್ತೀಚಿಗೆ ಸಲ್ಲಿಸಲಾಯಿತು.
ತೀರಾ ಕಳವಳಕಾರಿ ಸ್ಥಿತಿಯಲ್ಲಿರುವ ಆಟೋ ಚಾಲಕರಿಗೆ ನಿಮ್ಮ ಸಂಸದರ ನಿಧಿಯಿಂದ ಹೆಚ್ಚುವರಿ ಸಹಾಯಧನವನ್ನು ನೀಡುವುದಲ್ಲದೆ ರಾಜ್ಯ ಸರ್ಕಾರ ಘೋಷಿಸಿದ ಪ್ರೋತ್ಸಾಹಧನ 3000 ರೂ ಒಬ್ಬ ಆಟೋ ಚಾಲಕನಿಗೆ ಇನ್ನು ಕೂಡ ತಲುಪಿಲ್ಲ ವಲ್ಲದೆ ಅದು ತಲುಪುವಂತಾಗಬೇಕು ಎಂದು ವಿನಂತಿಸಲಾಯಿತು.
ಕೇಂದ್ರ ಸರ್ಕಾರ ಈ ಹಿಂದೆ ಹೊರಡಿಸಿದ ಕಾನೂನು ಇಂದು ಆಟೋ ಚಾಲಕರಿಗೆ ಅನ್ಯಾಯ ಆಗುತ್ತಿದೆ ಏಕೆಂದರೆ ಎಲ್ಲಾ ಆಟೋ ಮತ್ತು ಕ್ಯಾಬ್ ಚಾಲಕರ ಬ್ಯಾಡ್ಜ್ ರದ್ದುಪಡಿಸಲಾಗಿದ್ದು ಇದೀಗ ಸೇವಾಸಿಂಧು ಗೆ ಅರ್ಜಿ ಸಲ್ಲಿಸಲು ಹೋದರೆ ಬ್ಯಾಡ ನಂಬರ್ ಕೇಳುತ್ತದೆಯಲ್ಲದೆ ಅರ್ಜಿಯನ್ನು ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸರಿ ಸುಮಾರು ಶಿವಮೊಗ್ಗ ಜಿಲ್ಲೆಯ ಹತ್ತರಿಂದ ಹದಿನೈದು ಸಾವಿರ ಆಟೋ ಚಾಲಕರಿಗೆ ಪ್ರೋತ್ಸಾಹಧನ ಸಿಗುತ್ತಿಲ್ಲ. ಈ ಕಾರಣದಿಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ ಎಲ್ಲಾ ಆಟೋ ಚಾಲಕರಿಗೆ ಪ್ರೋತ್ಸಾಹಧನ ಸಿಗುವಂತೆ ಮಾಡಬೇಕೆಂದು ಶಿವಮೊಗ್ಗ ಜಿಲ್ಲಾ ಆಟೋ ಚಾಲಕರ ಒಕ್ಕೂಟ ಮತ್ತೊಮ್ಮೆ ಮನವಿಯನ್ನು ಸಲ್ಲಿಸಿ ವಿನಂತಿಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.