www.vknews.com ಮಡಿಕೇರಿ: “ಬಿತ್ತಿದರೆ ಮಾತ್ರ ಬೆಳೆ” ಎಂಬ ಘೋಷಣೆಯೊಂದಿಗೆ SKSSF ಜಿಸಿಸಿ ಕೊಡಗು ಸಮಿತಿಯ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಝೂಮ್ ಆನ್ಲೈನ್ ನಲ್ಲಿ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಶನಿವಾರಸಂತೆ ಕಂದಾಯ ಶಾಖೆಯ ಹಿರಿಯ ಸಹಾಯಕರಾದ ದೀಪಕ್ ಸೋಮಪ್ಪರವರು ಮಾತನಾಡುತ್ತಾ, ಪರಿಸರದ ರಕ್ಷಣೆ ಅಥವಾ ಗಿಡ ಮರಗಳನ್ನು ನೆಡುವುದು ಈ ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸದೆ ಪ್ರತೀ ದಿನವೂ ಮಾಡಬೇಕಾದ ಕರ್ತವ್ಯ ಆಗಿದೆ. ಅದರ ಜೊತೆಗೆ ಪ್ರತೀ ಪಂಚಾಯತ್ ವ್ಯಾಪ್ತಿಗಳಲ್ಲಿ ಜಲ ಶುದ್ಧೀಕರಣ ಘಟಕ ಸ್ಥಾಪಿಸಲು ಎಲ್ಲರೂ ಮನವಿ ಸಲ್ಲಿಸಬೇಕೆಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಯಾಂಪಸ್ ವಿಂಗ್ ರಾಜ್ಯಾಧ್ಯಕ್ಷರಾದ ಇಬ್ರಾಹಿಂ ಬಾತಿಷಾ ಶಂಸಿ ಕೊಡ್ಲಿಪೇಟೆ, ಈಗಾಗಲೇ ಎಲ್ಲವೂ ಕಾರ್ಪೊರೇಟ್ ಮಯವಾಗಿದ್ದು, ಪರಿಸರ ಕೂಡ ಅದರ ಹೊರತಾಗಿಲ್ಲ. ಕಾಣದ ಕೈಗಳಿಂದ ಪರಿಸರವನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು SKSSF ಜಿಸಿಸಿ ಕೊಡಗು ಅಧ್ಯಕ್ಷರಾದ ಹುಸೈನ್ ಫೈಝಿ ವಹಿಸಿದ್ದರು. ಸೌದಿ ಅರೇಬಿಯಾ ಕೊಡಗು ಸಮಿತಿ ಅಧ್ಯಕ್ಷರಾದ ಝೈನುದ್ದೀನ್ ಉಸ್ತಾದ್ ಪ್ರಾರ್ಥನೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಮತ್ತು ಜಿಸಿಸಿ ಸಮಿತಿಯ ಹಲವು ನಾಯಕರುಗಳು ಹಾಗೂ ಸದಸ್ಯರುಗಳು ಭಾಗವಹಿಸಿದ್ದರು. ಜಿಸಿಸಿ ಪ್ರಧಾನ ಕಾರ್ಯದರ್ಶಿ ಶಿಹಾಬ್ ಆಲುಂಗಲ್ ಸ್ವಾಗತಿಸಿ, ರಝಾಕ್ ಬಜೆಗುಂಡಿ ವಂದಿಸಿದರು. ಯಹ್ಯಾ ಕೊಡ್ಲಿಪೇಟೆ ಕಾರ್ಯಕ್ರಮ ನಿರೂಪಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.