ಶಿವಮೊಗ್ಗದ ಸುದ್ದಿಗಳು :
ಶಿವಮೊಗ್ಗದ ಸುದ್ದಿಗಳು ……….
ಇನ್ಮುಂದೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಟೋಕನ್ ಪಡೆದ ಮರುದಿನ ಸಿಗುತ್ತೆ ಕರೋನ ಲಸಿಕೆ
ಲಸಿಕೆ ಪಡೆಯಲು ಬೆಳಗ್ಗೆ ಬಹುಬೇಗ ಎದ್ದು ಬಂದು ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಟೋಕನ್ ಪಡೆಯುವ ಪದ್ಧತಿಗೆ ಕೊನೆಗೂ ಬ್ರೇಕ್ ಬಿದ್ದಂತಾಗಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಟೋಕನ್ ಪಡೆಯಲು ಪ್ರತ್ಯೇಕ ಸಮಯ ನಿಗದಿ ಮಾಡಲಾಗಿದೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಟೋಕನ್ ವ್ಯವಸ್ಥೆ ಮತ್ತು ಲಸಿಕೆ ನೀಡಲು ಆಗುತ್ತಿರುವ ಗೊಂದಲದ ಕುರಿತು ಚರ್ಚೆ ನಡೆಯಿತು. ಅಲ್ಲದೆ ಬದಲಿ ವ್ಯವಸ್ಥೆ ಕುರಿತು ಸಚಿವ ಈಶ್ವರಪ್ಪ ಸೂಚಿಸಿದರು.
ಬದಲಾವಣೆಗಳು ಏನು?
ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರತಿದಿನ ಕಡ್ಡಾಯವಾಗಿ 500 ಮಂದಿಗೆ ಲಸಿಕೆ ನೀಡಬೇಕು. ಟೋಕನ್ಗೆ ಪ್ರತ್ಯೇಕ ಕ್ಯೂ, ಲಸಿಕೆಗೆ ಪ್ರತ್ಯೇಕ ಕ್ಯೂ ಮಾಡಬೇಕು.
ಟೋಕನ್ ಪಡೆದ ಮರುದಿನ ನಿಗದಿತ ಸಮಯದಲ್ಲಿ ಲಸಿಕೆ ಪಡೆಯಬೇಕು. ಟೋಕನ್ ಪಡೆಯಲು ಆಧಾರ್ ಕರ್ಡ್ ಕಡ್ಡಾಯಗೊಳಿಸಬೇಕು ಎಂದು ಸಚಿವ ಈಶ್ವರಪ್ಪ ಸೂಚಿಸಿದರು.
ರಸ್ತೆಗೆ ಹಾಕಿದ್ದ ತಡೆಗೋಡೆ ಕಿತ್ತೆಸೆದು ವಾಹನ ಚಾಲನೆ ಮಾಡಿಕೊಂಡು ಹೋದ್ರು…!
ತೀರ್ಥಹಳ್ಳಿ: ಕಳೆದ ಹದಿನೈದು ದಿನಗಳಿಂದ ಕೊರೊನಾ ರೋಗ ನಿಯಂತ್ರಣಕ್ಕೆ, ವಾಹನ ಸಂಚಾರಗಳ ನಿಯಂತ್ರಣಕ್ಕಾಗಿ ತಾಲ್ಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ರಾತ್ರಿಹಗಲು ಜನರ ಆರೋಗ್ಯಕ್ಕಾಗಿ ಶ್ರಮಿಸುತ್ತಿದೆ. ಅದಕ್ಕಾಗಿ ವಾಹನಗಳ ನಿಯಂತ್ರಣಕ್ಕಾಗಿ ಕೆಲವು ರಸ್ತೆಗಳಿಗೆ ತಡೆಗೋಡೆಯನ್ನು ನಿರ್ಮಿಸಿದೆ. ಅದೇ ರೀತಿ ಪಟ್ಟಣದ ಕುಶಾವತಿ ಕೆಸಿ ರಸ್ತೆಯಲ್ಲಿ ಬೇಲಿಯನ್ನು ನಿರ್ಮಿಸಲಾಗಿತ್ತು. ಗುತ್ತಿಗೆದಾರರೊಬ್ಬ ತನ್ನ ಬುಲೋರೋ ಜೀಪಿನಲ್ಲಿ ತಂದು ಅತಿವೇಗದಿಂದ ಡಿಕ್ಕಿ ಹೊಡೆದು ಬೇಲಿಯನ್ನು ನಾಶಮಾಡಿ ಕಿತ್ತೆಸೆದು ಜೀಪನ್ನು ಚಲಾಯಿಸಿಕೊಂಡು ಹೋಗಿದ ಆರೋಪ ಕೇಳಿ ಬಂದಿದೆ.
ಜೀಪನ್ನು ಚಲಾಯಿಸಿಕೊಂಡು ಬಂದ ವೇಗಕ್ಕೆ ಕುಶಾವತಿ ಕೆ ಸಿ ರಸ್ತೆಯ ಅಕ್ಕಪಕ್ಕದ ನಿವಾಸಿಗಳು ಮಕ್ಕಳು ಮಹಿಳೆಯರು ಕೆಲವರು ಹೆದರಿ ಮನೆಯೊಳಗೆ ಓಡಿದ ದೃಶ್ಯವೂ ಕಂಡುಬಂತು. ತಕ್ಷಣ ಇದನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಘಟನೆಯ ಬಗ್ಗೆ ಮತ್ತು ಜೀಪ್ ಮಾಲೀಕನ ಹೆಸರು ತಿಳಿಸಿದರೂ ಈವರೆಗೆ ಕ್ರಮ ಜರುಗಿಸಿದೆ ಕಿತ್ತೆಸೆದ ಬೇಲಿ ಬೇಲಿಯ ಕಂಬಗಳು ತುಂಡಾಗಿ ಅದೇ ರೀತಿ ರಸ್ತೆಯಲ್ಲಿ ಬಿದ್ದಿವೆ .
ಇಂತಹವರ ಮೇಲೆ ಪೊಲೀಸರು ಕ್ರಮ ಜರುಗಿಸಲು ಮೀನಾಮೇಷ ಎಣಿಸುತ್ತಿರುವ ಅಗತ್ಯವಾದರೂ ಏನು. ತಕ್ಷಣ ಆತನ ಮೇಲೆ ಕ್ರಮ ಜರುಗಿಸಿ ರಸ್ತೆಗೆ ಅಡ್ಡ ಹಾಕಿರುವ ತಡೆ ಬೇಲಿಯನ್ನು ನಿರ್ಮಿಸಲು ಗ್ರಾಮಸ್ಥರು ಬಡಾವಣೆಯ ನಿವಾಸಿಗಳು ಒತ್ತಾಯಿಸಿದ್ದಾರೆ.
ಪ್ರೀತಿಸುವಂತೆ ಯುವಕನಿಂದ ಬೆದರಿಕೆ, ವಿಷ ಕುಡಿದಿದ್ದ ಬಾಲಕಿ ಮಣಿಪಾಲ ಆಸ್ಪತ್ರೆಯಲ್ಲಿ ಸಾವು
ವಿಷ ಸೇವಿಸಿ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯುವಕನೊಬ್ಬ ಪ್ರೀತಿಸುವಂತೆ ಬೆದರಿಕೆ ಹಾಕಿದ್ದೆ ಈ ಕೃತ್ಯಕ್ಕೆ ಕಾರಣ ಎಂದು ಆರೋಪಿಸಲಾಗಿದೆ.
ಹೊಸನಗರ ತಾಲೂಕು ಕನ್ನಳ್ಳಿ ಸುಧಾಕರ್ ಅವರ ಪುತ್ರಿ ಸಹನಾ (17) ಆತ್ಮಹತ್ಯೆ ಮಾಡಿಕೊಂಡಾಕೆ. ಮೇ 3ರಂದು ಸಹನಾ ವಿಷ ಸೇವಿಸಿದ್ದಳು. ಕೂಡಲೆ ನಗರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿಂದ ಹೊಸನಗರದ ಆಸ್ಪತ್ರೆಗೆ ರವಾನಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಹನಾ ಕೊನೆಯುಸಿರೆಳೆದಿದ್ದಾಳೆ.
ಯುವಕನ ವಿರುದ್ಧ ದೂರು.
ಕರಿಮನೆ ಗ್ರಾಮದ ಪ್ರಶಾಂತ್ ಎಂಬಾತ ಸಹನಾಳನ್ನು ಪ್ರೀತಿಸುವಂತೆ ಬೆದರಿಕೆ ಹಾಕಿದ್ದ. ಈ ಸಂಬಂಧ ಪ್ರಶಾಂತ್ ಮತ್ತು ಅವರ ಕುಟುಂಬದವರ ತಿಳಿವಳಿಕೆ ಹೇಳಲಾಗಿತ್ತು. ಹಾಗಿದ್ದೂ ಪ್ರಶಾಂತ್ ಒತ್ತಡ ಮುಂದುವರೆಸಿದ್ದ. ಇದರಿಂದ ಮನನೊಂದು ಸಹನಾ ವಿಷ ಸೇವಿಸಿದ್ದಾಳೆ ಎಂದು ಆಕೆಯ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.
ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.