(www.vknews.com) : ಜನರ ಜೀವ ಮತ್ತು ಜೀವನೋಪಾಯ ಎರಡೂ ಅಪಾಯದಲ್ಲಿರುವ ಈ ದಿನಗಳಲ್ಲಿ, ಸರಕಾರದ ಅವೈಜ್ಞಾನಿಕ ಲಾಕ್’ಡೌನ್ ಜನರನ್ನ ಆತ್ಮಹತ್ಯೆಗೆ ಶರಣಾಗುಂತೆ ಪ್ರೇರೇಪಿಸುತ್ತಿದೆಯೇ?
ಕಳೆದ ವಾರ ಚಾಮರಾಜನಗರ ಜಿಲ್ಲೆ ಮೂಕಹಳ್ಳಿಯ ಒಂದೇ ಕುಟುಂಬದ ನಾಲ್ವರು ಆರ್ಥಿಕ ಸಂಕಷ್ಟದ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ನಡೆದ ಬೆನ್ನಿಗೇ ಇಂದು ಮಂಗಳೂರಿನಂತಹ ಮಂಗಳೂರಿನಲ್ಲಿ ದಂಪತಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.
1998ರಿಂದ ನಮ್ಮೆಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಮಂಗಳೂರಿನ ಕದ್ರಿ ನಿವಾಸಿ ಸುರೇಶ್ ತಬ್ಲಾ ಬಾರಿಸಬೇಕೆಂಬ ನಿಯಮವನ್ನು ನಾವೇ ಹೇರಿಕೊಂಡಿದ್ದೆವು. ಪ್ರತಿಭಾವಂತ ಕಲಾವಿದ, ಮಿತಭಾಷಿ, ಸೌಮ್ಯ ಸ್ವಭಾವದ ಸುರೇಶ್ ಮತ್ತು ಪತ್ನಿ ವಾಣಿ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಾತೆತ್ತಿದರೆ ಸುಳ್ಳುಗಳ ಸರಮಾಲೆಗಳನ್ನೇ ಉದುರಿಸುತ್ತಿರುವ ಪ್ರಧಾನಿ, ಅಧಿಕಾರದ ಭದ್ರತೆಗಾಗಿ ಸಹಿ ಕ್ಯಾಂಪೈನ್ ನಾಟಕವಾಡುತ್ತಿರುವ ಬೇಜವಾಬ್ದಾರಿ ಮುಖ್ಯಮಂತ್ರಿಗಳಿಂದ ಜನಪರವಾದ ಪರಿಹಾರ ನಿರೀಕ್ಷಿಸಲು ಸಾಧ್ಯವೇ?
ಜನರ ಕಣ್ಣೀರಿನ ಹಿಡಿ ಶಾಪ ತಟ್ಟುವ ಮೊದಲು ನಮ್ಮ ಸರಕಾರಗಳು ಮೊನಕೈಗೆ ತುಪ್ಪ ಸವರುವ ಸೋಗಲಾಡಿತನ ನಿಲ್ಲಿಸಿ, ಜನಸಾಮಾನ್ಯರ ತೆರಿಗೆ ಹಣವನ್ನು ಜನರ ಜೀವ ಉಳಿಸಲು, ಆರ್ಥಿಕ ಸಂಕಷ್ಟಗಳಿಂದ ಕಿಂಚಿತ್ತಾದರೂ ಹೊರತರಲು ಪರಿಹಾರ ಪ್ಯಾಕೇಜ್’ಗಳನ್ನು ರೂಪಿಸಿ, ಅನುಷ್ಠಾನಕ್ಕೆ ತರಲಿ.
ಇಲ್ಲದಿದ್ದಲ್ಲಿ ಜನ ಸರಕಾರದ ವಿರುದ್ಧ ದಂಗೆ ಏಳುವ ದಿನಗಳು ದೂರವಿಲ್ಲ.
ಉಮರ್ ಯು.ಹೆಚ್.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.