(ವಿಶ್ವ ಕನ್ನಡಿಗ ನ್ಯೂಸ್) ವಿಶ್ವದಲ್ಲಿ ಇಂದು ಕರೋನಾ ಮಹಾಮಾರಿಯಿಂದ ಜನತೆ ಸಂಕಷ್ಟದಲ್ಲಿರುವ ಕಾರಣ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿ ಮಾಜಿ ಶಾಸಕ ಕೆ.ಎಸ್.ಮಂಜುನಾಥ ಗೌಡ ಅಭಿಮಾನಿ ಬಳಗದ ವತಿಯಿಂದ ಗುಡಿಸಲು ವಾಸಿಗಳಿಗೆ ದಿನಸಿ ಕಿಟ್ ವಿತರಣೆ ಮಾಡುವ ಕಾರ್ಯ ಮಾಡಿದರು.
ಮಾಲೂರಿನ ನಂದಿ ಆಟೋಮೊಬೈಲ್ ಮಾಲೀಕ, ಸಮಾಜ ಸೇವಕ ನಂದೀಶ್ ರವರು ಮಾತನಾಡುತ್ತಾ “ಸಂಕಷ್ಟದ ಸಂದರ್ಭದಲ್ಲಿ ಬಡವರಿಗೆ, ನಮ್ಮಿಂದಾಗುವ ಸಹಾಯವನ್ನು ಮಾಡಬೇಕು ಆ ನಿಟ್ಟಿನಲ್ಲಿ ಇಂದು ವಾರ್ಡ್-24 ರಲ್ಲಿ ವಾಸಿಸುವ ನೂರಾರು ಗುಡಿಸಲು ವಾಸಿಗಳಿಗೆ ಮಾಸ್ಕ್, ಸ್ಯಾನಿಟೈಸರ್, ಹಾಗೂ ಆಹಾರದ ದಿನಸಿ ಕಿಟ್ ವಿತರಿಸುವ ಕಾರ್ಯ ಮಾಡಿದ್ದೇವೆ. ಕರೋನಾ ಇಂದು ಎಲ್ಲಾರನ್ನು ಕೈ ಕಟ್ಟಿ ಕೂರುವ ಹಾಗೇ ಮಾಡಿದೆ ಪ್ರತಿಯೋಬ್ಬರು ನಿಮ್ಮಿಂದಾಗುವ ಸಹಾಯ ಮಾಡಿ” ಎಂದರು.
ಇದೇ ಸಂದರ್ಭದಲ್ಲಿ ಕನ್ನಡ ಹೋರಾಟಗಾರ, ಮಾಜಿ ಶಾಸಕ ಕೆ.ಎಸ್.ಮಂಜುನಾಥ್ ಗೌಡ ಅಭಿಮಾನಿಯಾದ ರಾಮಾಂಜಿ ಮಾತನಾಡಿ “ಕರೋನಾ ಮಹಾಮಾರಿಯ ಸಂಕಷ್ಟದ ಸಂದರ್ಭದಲ್ಲಿ ಸಹಾಯ ಮಾಡುವುದು ನಮ್ಮ ಕರ್ತವ್ಯ ಆ ನಿಟ್ಟಿನಲ್ಲಿ ಸೇವಾ ಮನೋಭಾವದಿಂದ ನಂದೀಶ್ ಹಾಗೂ ಗೆಳೆಯರು, ಮಾಜಿ ಶಾಸಕ ಮಂಜುನಾಥ್ ಗೌಡ ಅಭಿಮಾನಿಗಳ ಸಹಕಾರದಿಂದ ದಿನಸಿ ಕಿಟ್ ವಿತರಿಸಿ ಸಹಾಯ ಮಾಡಿದ್ದೀವಿ” ಎಂದರು.
ಈ ಸಂದರ್ಭದಲ್ಲಿ ಮಂಜುನಾಥ್ ಗೌಡ ಅಭಿಮಾನಿ ಬಳಗ ಆಟೋಮೊಬೈಲ್ ನಂದೀಶ್, ಹೋರಾಟಗಾರ ರಾಮಾಂಜಿ, ಮಹೇಶ್, ಜಾವೀದ್, ನಸೀರ್ ಪಾಷಾ,ಮಹೇಂದ್ರ, ಕಿರಣ್, ಆಕಾಶ್, ಮಧು, ಸಿದ್ದು, ಮಹೇಂದ್ರ, ಶಿವು, ಭಾಸ್ಕರ್, ಹಾಗೂ ಮಾಜಿ ಶಾಸಕ ಮಂಜುನಾಥ್ ಗೌಡ ಅಭಿಮಾನಿ ಬಳಗದವರು ಹಾಜರಿದ್ದರು.
ವರದಿ:- ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.