(www.vknews.com) : ಸದಾ ಪೋಲಿಸರ ಬಗ್ಗೆ ಅನುಚಿತ ವಾದಗಳನ್ನು ಮಂಡಿಸುವವರಿಗೆ ಮಾನವೀಯತೆಯಿಂದ ಉತ್ತರ ನೀಡುತ್ತಿದ್ದಾರೆ ಪೋಲಿಸರು. ಜನಜೀವನವಕ್ಕೆ ಸುನಾಮಿಯ ಅಲೆಗಳಂತೆ ಅಪ್ಪಳಿಸಿದ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ, ವೈದ್ಯರಷ್ಟೇ ಪಾತ್ರವನ್ನು ವಹಿಸಿ ಪ್ರತಿದಿನ ತಮ್ಮ ಜೀವ ಪಣಕ್ಕಿಟ್ಟು ಹೋರಾಡುವ ಸೇನಾನಿಗಳೇ ನಮ್ಮ ನಾಡಿನ ಪೋಲಿಸರು.
ಇದರ ನಡುವೆಯೂ ಅಸ್ತವ್ಯಸ್ತಗೊಂಡ ಬಡ ವರ್ಗದ ಜನರಿಗೆ ನೆರವಾದ ಮಂಗಳೂರು ನಗರದ ಪೋಲಿಸರಿಬ್ಬರ ಕಥೆ ಈ ನಾಡು ಅರಿಯದೇ ಇರಬಾರದು.
ಕಂಕನಾಡಿ ಆರಕ್ಷಕ ಠಾಣೆಯ (ನಾಗುರಿ ಠಾಣೆ) ಕಾರ್ತಿಕ್ ಮತ್ತು ಮದನ್ ಎಂಬ ಸಿಬ್ಬಂದಿಗಳಿಬ್ಬರು ಸುಮಾರು 25 ಅರ್ಹ ಬಡ ಕುಟುಂಬಗಳಿಗೆ ಯಾವುದೇ ಸದ್ದುಗದ್ದಲ ಪ್ರಚಾರವಿಲ್ಲದೇ, ಜಾತಿ ಬೇಧದ ಗುರುತಿಲ್ಲದೇ ರೇಷನ್ ಕಿಟ್ ನೀಡುವ ಮೂಲಕ ಆ ಕುಟುಂಬಗಳಿಗೆ ಈ ಕಷ್ಟಕಾಲದಲ್ಲಿ ನೆರವಾದದ್ದೂ ನಿಜಕ್ಕೂ ಮಹತ್ಕಾರ್ಯವೇ ಸರಿ.
ನಮ್ಮೆಲ್ಲರ ಸನ್ಮಿತ್ರರಾದ ಕಾರ್ತಿಕ್ ಹಾಗೂ ಮದನ್ ರವರ ಈ ಸೇವೆ ನಿಜಕ್ಕೂ ಶ್ಲಾಘನೀಯ, ತಮ್ಮ ಈ ಸೇವೆಗೆ ನಮ್ಮೂರು ಅಭಾರಿಯಾಗಿರಲಿದೆ ಸರ್.
– ಆಸೀಫ್ ಬಜಾಲ್
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.