ವಿಶ್ವ ಕನ್ನಡಿಗ ನ್ಯೂಸ್ :- ಪುತ್ತೂರಿನ ಬೊಳವಾರಿನ ಆಂಜನೇಯ ಯಕ್ಷಗಾನ ಕಲಾ ಸಂಘದ ಸದಸ್ಯರ ಅಂತರ್ಜಾಲ ಗೂಗಲ್ ಮೀಟ್ ನಲ್ಲಿ ಯಕ್ಷಗಾನ ತಾಳಮದ್ದಳೆ ದಿನಾಂಕ 05-06-2021 ಶನಿವಾರದಂದು ಮಧ್ಯಾಹ್ನ 3ಗಂಟೆಗೆ ಗಣಪತಿ ಪೂಜೆಯೊಂದಿಗೆ ಪ್ರಾರಂಭವಾಯಿತು. ಮರೀಲುಯಲ್ಲಿ ಭಾಗವತರು ಮತ್ತು ಚಂಡೆಯವರು, ಮೂರು ಪಂಜದಲ್ಲಿ ಮದ್ದಲೆಯವರು, ಕಲ್ಲಾರೆಯಿಂದ ಅರ್ಜುನ, ಮರೀಲುನಲ್ಲಿ ಹನುಮಂತ, ನಡುಗಲ್ಲನಿಂದ ವೃದ್ಧ ಬ್ರಾಹ್ಮಣ, ಗೆರುಕಟ್ಟೆಯಿಂದಶ್ರೀರಾಮನ ಪಾತ್ರದಲ್ಲಿ ಹೀಗೆ ಅಗತ್ಯಕ್ಕಿಂತಲೂ ಹೆಚ್ಚು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಗೂಗುಲ್ ಮೀಟ್ ಮೂಲಕ ಅಂತರ್ಜಾಲ ಯಕ್ಷಗಾನ ತಾಳಮದ್ದಲೆ “ಶರ-ಸೇತು- ಬಂಧನ” ಎಂಬ ಪ್ರಸಂಗವನ್ನು ನಡೆಸಿಕೊಟ್ಟರು. ಶನಿವಾರ ಮಧ್ಯಾಹ್ನ 2ಗಂಟೆಗೆ ಭಾಗವತರು ಚಂಡೆಗುಳಿ ಉದಯ ನರಸಿಂಹ ಶಾಸ್ತ್ರಿಯವರು “ಚಾರುಬಾಲ ಕನ್ಯಾಪುರ ವರನಿಲಯ! ತಾಳ ವೃಂದ ಸ್ಥಾಪಿತ ಮಂಗಳ ಕರಯಾ!!” ಎಂದು ಪ್ರಾರಂಭವಾದ ತಾಳಮದ್ದಲೆ ನಂತರ ಗಾಳಿಮನೆ ಡಾ. ವಿನಾಯಕ ಭಟ್ ರವರ ಅರ್ಜುನ ಅರ್ಥಗಾರಿಗೆಯಲ್ಲಿ ಪ್ರಾರಂಭವಾಗಿ “ಧಾರುಣೀಸುರರಗ್ರಹಾರರ| ಸೂರೆಗೊಳುತಿಹ ತಸ್ಕರರ ಯಮ|ನೂರ ಹೊಂದಿಸಿ ಬಳಿಕ ರವಿಯುದಯದಲಿ ಫಲಗುಣನು||” ಈ ಭರತವರ್ಷದಲ್ಲಿ ಚಂದ್ರವಂಶ ಸಂಬೂತರಾಗಿ ಪಾಂಡುರಾಜನ ತನಯನರಲ್ಲಿ ಮಧ್ಯಮ ಪಾಂಡವನೆಂದು ಕರೆಯುವರು. ಗುರು ದ್ರೋಣರಿಂದ ವಿಧ್ಯೆ ಕಲಿತು ನಂತರ ಪಾಂಚಾಲ ದೇಶದ ರಾಜಕುಮಾರಿ ಯಜ್ಞಾಸಂಬೂತೆ ದ್ರೌಪತಿಯನ್ನು ಮತ್ಸ್ಯ ಯಂತ್ರ ಬೇಧಿಸಿ, ಸ್ವಯಂವರದಲ್ಲಿ ವರಿಸಿ ಹೀಗೆ ತಾಯಿ ಕುಂತಿದೇವಿಯಲ್ಲಿ ಹೇಳಿದಾಗ ಐವರು ಹಂಚಿ ತಿನ್ನಿ ಎಂದು ನುಡಿದಳು. ಆಗ ವೇದವ್ಯಾಸರು ಬಂದು ಇವಳ ಪೂರ್ವ ವೃಂತ್ತಾಂತ ಪೇಳಿ ಈ ಪಾಂಚಾಲೆಯನ್ನು ಐವರು ವರಿಸಿ, ವರುಷಕೊರ್ವರಂತೆ ಪತಿಯ ಸನಿಹದಲ್ಲಿ ಇರುವ ನಿಯಮವನ್ನು ವೇದವ್ಯಾಸರು ಹೇಳಿದರು. ಆನಂತರ ಈ ವರುಷದ ಸರಧಿ ಅಣ್ಣ ಧರ್ಮರಾಯನ ಸರಧಿ. ಹಾಗೆ ಈ ಸಮಯದಲ್ಲಿ ಯಾರಾದರು ಅವರ ಏಕಾಂತಕ್ಕೆ ಭಂಗ ಪಡಿಸಿದರೆ, ಹನ್ನೆರಡು ವರ್ಷ ಘೋರ ಶಿಕ್ಷೆ ವಿಧಿಸುವ ನಿಯಮವನ್ನು ವೇದವ್ಯಾಸರು ಹಾಗೂ ನಾರದ ಮನಿಗಳು ಹೇಳಿದರು. ಆದರೆ ಈ ಭೂದಿವಿಜರ ಅಗ್ರಹಾರವನ್ನು ಯಾರೋ ತಸ್ಕರ ಉಪಟಳವೆಂದು ನನ್ನಲ್ಲಿ ದೂರಿದಾಗ, ಕ್ಷತ್ರಿಯನಾದ ನನಗೆ ಎಲ್ಲಿಲ್ಲದ ಕೋಪದಿಂದ ಆಯುಧವನ್ನು ತೆಗೆದು ತಸ್ಕರರನ್ನು ಯಮನೂರಿಗೆ ಕಳುಹಿಸಿ, ಆಮೇಲೆ ತಿಳಿಯಿತು ನಾನು ಆಯುಧವನ್ನು ತೆಗೆದುಕೊಂಡು ಬರುವಾಗ ಅಣ್ಣನ ಏಕಾಂತಕ್ಕೆ ಭಂಗವಾಯಿತು. ವೇದವ್ಯಾಸರ ಮಾತಿನ ಪ್ರಕಾರ ನನಗೆ ಹನ್ನೆರಡು ವರ್ಷ ಕಠಿಣವಾದ ಶಿಕ್ಷೆಗೆ ಗುರಿಯಾಗಬೇಕಿತ್ತು. ಆದರು ನೀನು ಮಾಡಿದ್ದು ಕಾರ್ಯ ಒಳ್ಳೆಯ ಉದ್ದೇಶ ಇರುವುದರಿಂದ ಹನ್ನೆರಡು ವರ್ಷ ಬದಲು ಹನ್ನೆರಡು ತಿಂಗಳು ಬದಲಾಯಿಸಿ ತೀರ್ಥಯಾತ್ರೆ ಗೆ ಹೋಗು ಎಂದಾಗ ಅಣ್ಣನ ಆಜ್ಞೆಯಂತೆ ಮುಂದುವರಿದು ಬರುತ್ತೀದ್ದೇನೆ.
“ಸಾರಿ ಗಂಗೆಯ ಮೇಲೆ ಶೇಷ ಕು|ಮಾರಿ ಲುಪಿಯನೊಲಿಸಿಯವಳಲಿ ಚಾರು ಸುತನನು ಪಡೆದು ಮುಂದಕೆ ತೆರಳ್ದನೊಲದಿ||” ಹೀಗೆ ಅಗ್ರಜರಿಂದ ಹಾಗೂ ದೇವ ಶ್ರೀಕೃಪ್ಣನ ಬೀಳ್ಕೊಂಡು, ಗಂಗೆಯನುತ್ತರಿಸಿ, ಅಯೋಧ್ಯೆ, ಹೃಷಿಕೇಶ, ಹೀಗೆ ಹರಿದ್ವಾರದಲ್ಲಿ ಇರುವಾಗ ಗಂಗೆಯಲಿ ಇಳಿದದ್ದು ಗೊತ್ತು, ನೋಡಿದರೆ ಪಾತಳದಲಿ ನಾನಿದ್ದೆ. ನಾಗ ಕನ್ನಿಕೆಯಾದ ಉಲೂಪಿಯು ನನ್ನ ಮೋಹಿಸಿ ಕರೆದುಕೊಂಡು ಹೋದಳು, ಆಮೇಲೆ ಆವಳನ್ನು ಗಾಂದರ್ವದ ವಿವಾಹ ಪದ್ದತಿಯಲ್ಲಿ ವರಿಸಿದೆ. ಆಮೇಲೆ ನನ್ನ ಅವಳ ದಾಂಪತ್ಯದ ಪ್ರತೀಕ “ಇರಾವಂತ” ಎಂಬ ಗಂಡು ಮಗುವಿನ ಜನಿಸಿದನು.
“ಪಾರ್ಥೀವಾಗ್ರಣಿ ಕೇಳು ಬಳಿಕಲ್ಲಲ್ಲಿರುವ |ತೀರ್ಥತೀರ್ಥಂಗಳೆಲ್ಲರಲಿ|| ಅರ್ತಿಯಲಿ ಮಿಂದು ತಾನಿಯ್ತಂದು ನೋಡಿದನು||” ಹೀಗೆ ಪಾರ್ಥ ಪಾತಾಳದಿಂದ ಬೀಳ್ಕೊಂಡು, ಮುಂದೆ ಸಾಗುತ್ತಾ ಕಾಶಿ, ವಾರಣಾಸಿಯನ್ನು ಉತ್ತರಿಸಿ, ದಕ್ಷಿಣದ ದನುಷ್ಕೋಟಿಗೆ ಬಂದು ತಲುಪಿದ್ದೇನೆ. ಮುಂದೆ ಇಲ್ಲಿನ ರಾಮೇಶ್ವರನನ್ನು ಅರ್ಚಿಸಿ, ಆ ಕಡೆಗೆ ಹಿಂದೆ ತ್ರೇತ್ರಾಯುಗದ ಶ್ರೀರಾಮ ವಾನರ ಕೂಡಿ ಲಂಕೆಗೆ ಆಗಮಿಸಿದ ಈ ಸೇತುವೆಯನು ನೋಡುತ್ತಿದ್ದೇನೆ. ಆಹಾ ಆಹಾ ಇದೇ ಅಲ್ಲವೇ ಹಿಂದೆ ರಘುವರನು ಬಲಿಸಿತ ಸೇತುಬಂಧ ಆ ಅದೇನು ನೋಡುತ್ತಿದ್ದೆ “ಬಂದಿಲ್ಲಿ ರಘುವರ್ಯನು ರಚಿಸಿದ ಸೇತು|ಬಂಧವನು ಕಂಡು ನಸುನಗುತ|| ಮುಂದೆ ಸೂಕ್ಷ್ಮಾಕಾರದಿಂದ ತಪಿಸುವ ಅನಿಲ|ನಂದನ ಕಂಡು ಬೆಸಗೊಂಡ||” ಹೀಗೆ ಸೂಕ್ಷ್ಮಾಕಾರದಲ್ಲಿ ಬಾಯಲಿ ಏನೋ ಮಟ ಮಟ ಮಂತ್ರ ಜಪಿಸುತಿರುವ ಈ ವಾ-ನರ ಯಾರು, ಮೇಲೆ ಸೂರ್ಯ ನ ಬಿಸಿಲು, ಕೆಳಗೆ ಮರಳಿನ ಬಿಸಿಲು, ಇಂತಹ ಸುಡು ಬಿಸಿಲಿನಲ್ಲಿ ಯಾರು ಈ ರೀತಿಯಾಗಿ ಕುಳಿತುಕೊಂಡು ಜಪಿಸುತಿರುವುದು. ಕರೆತೇನೆ ನೋಡೋಣ “ಯಾರು ವನಚರ ನೀನು ಈ ರೀತಿಯಿಂದಬುಧಿ|ತೀರದಲಿ ನೆಲಸಿಕೊಂಡಿರುವ|” ಆಯ್ಯಾ ಪ್ರಾಣಿಯೇ ನೀನಾರು ಈ ಬಿರು ಬಿಸಿಲಿನಲ್ಲಿ ಸುಡುತಿಹ ಏನೋ ಒಂದು ಮಟಮಟ ಮಂತ್ರ ಜಪಿಸುವ ನೀನಾರು? ನೀನು ವನಚರ ಇಲ್ಲೇಕೆ ಸಾಗರದ ತುದಿಯಲ್ಲಿ ಇದ್ದೀ ಎಂದು ಪಾರ್ಥ ಕೇಳುತ್ತಾನೆ. “ಪ್ರಾಣರೂಪನೆನ್ನಪ್ಪ ವಾಯುದೇವನೇ ಜನಕ|ಕ್ಷೀಣ ಬಲ ಹನುಮನೆಂದೆನುತ|| ಕ್ಷೋಣಿಯಲಿ ಪೆಸರಾದುದೆನಗೆ ಕೇಳನಲು ಸು|ತ್ರಾಣ ಪಾರ್ಥನು ನುಡಿದ ನಗುತ||” ಅಯ್ಯ ನರನೇ ಕೇಳು ಈ ಪ್ರಪಂಚದ ಎಲ್ಲಾ ಜೀವಿಯ ಪ್ರಾಣರೂಪವನ್ನು ವಾಯುದೇವ ಕಾಯುತ್ತಾನೆ. ಆ ಪ್ರಾಣಕ್ಕೆ ಒಂದು ರೂಪ ಕೊಟ್ಟ ಜನಕ ನನ್ನ ಜನಕ, ಈ ಲೋಕದೊಳು ಹನುಮ, ಆಂಜನೇಯ, ಕೇಸರಿನಂದನ, ಮುಂತಾದ ಹೆಸರಲ್ಲಿ ಕರೆಯುತ್ತಾರೆ. ಆಗ ನಗುತ ಪಾರ್ಥನು ಹೀಗೆ ಹೇಳುತ್ತಾನೆ.
“ಹನುಮ ನೀನೆಂದೆಂಬ ತನುವ ನೋಡಿದರೆ ಬಡ|ಜಿಣುಗಿನದಂದೊ|ಳಿರುವೆಯೇಕೆ||” ಹೀಗೆ ಪಾರ್ಥನು ನಗುತ ಏನು ಏನು ನೀನು ಹನುಮನೋ ಅವನು ಸಾಮನ್ಯದವನಲ್ಲ ಎಂದು ತಿಳಿದಿದ್ದೆ. ಆಷ್ಟ ಸಿದ್ಧಿಗಳನ್ನು ತಿಳಿದ ಅವನು ಆಕ್ಷೀಣ ಬಲನು ಆದರೆ ನಿನ್ನ ತನು ಬಡವಾದದ್ದನ್ನು ನೋಡಿ ನಾನು ಹೀಗೆ ತರ್ಕಿಸಿದೆ. ಕೆಲವರು ದೊಡ್ಡವರ ಹೆಸರು ಹೇಳಿ ಬದುಕುದು ಉಂಟು ಹಾಗೆ ನೀನು ಇರಬೇಕು ಎಂದು ತಿಳಿಯಿತು. ಅದಕೆ “ಕೇಳಯ್ಯ ನಮ್ಮ ತನು ವಾದದ| ಪೇಳಲೆನದ ಹಿಂದೆ ಶರಧಿಗೆ|ನೀಲ ಸೇತುವ ಕಟ್ಟಲು|” ಅಯ್ಯ ಮಾನವ ನಾವು ಹಿಂದೆ ರಾಮಕಾರ್ಯದಲ್ಲಿ 77ಸಾವಿರ ಕೋಟಿ ಕಪಿಗಳೊಂದಾಗಿ, ನೀಲನ ನಾಯಕತ್ವ ದಲಿ ಈ ಸೇತುವೆಯ ನೀರ್ಮಾಣಕ್ಕೆ “ತಾಳಿ ಪರ್ವತ ಹೊತ್ತು ಕಲ್ಮರಗಳ| ಸ್ಥೂಲ ದೇಹವು ಸುರುಟಿದುದು ಕೈ|ಕಾಲುಗಳು ಒಳ ಸರಿದವು||” ಆ ನೀಲನೆಂಬವನ ನಾಯಕತ್ವದಲ್ಲಿ ಪರ್ವತ, ಗುಡ್ಡ, ಮರ, ಮಣ್ಣು ಮುಂತಾದವುಗಳ ತಂದು ರಾಮನ ಸೇವೆಯಲ್ಲಿ ನಿರತವಾದ ಈ ದೇಹ ಕೈಕಾಲುಗಳು ದೇಹ ಕ್ಷೀಣಿಸಿ, ಒಳ ಸರಿದವು ಎಂದು ಹನುಮಂತ ಹೇಳಿದಾಗ “ಪೊತ್ತು ದಣಿಯುದೇಕೆ ಗಿರಿಗಳ|ನೆತ್ತಲೇಕೆ ಕಲ್ಮರಗಳ | ಮತ್ತೆ ಬಳಲುವುದೇಕೆ ಸೇತುವೆ ಬಿತ್ತರಿಪಡೆ|” ನೀವು ಆ ಕಾಲದಲ್ಲಿ ಸುಮ್ಮನೆ ಹೊತ್ತು ದಣಿದ್ದೀರಿ. ಆ ರಾಮನ ಕಾರ್ಯಕ್ಕೆ ಆ ರಾಮನು ಆರಾಮವಾಗಿ ಮಾಡುವ ಕೆಲಸವನ್ನು ಹೊತ್ತು ಕಳೆಯದೆ ಕ್ಷಣ ಮಾತ್ರದಿಂದ ಮಾಡಬಹುದಾದ ಸೇತುವೆಯನ್ನು ಸುಮ್ಮನೆ, ಗಿರಿ ಮರಗಳ, ಪರ್ವತ ಗುಡ್ಡಗಳ ತಂದು ಈ ರೀತಿ ಸೇತುವನ್ನು ಮಾಡಿದ್ದೀರಿ ನಾನಾದರೇ “ಬಿಡು ಬಿಡಿ ಸೇತುವನು ಬಲಿವಡೆ| ಕಡು ಗಹನೇ ಬಾಣಮುಖದಲಿ|| ಎಡೆ ಬಿಡದೆ ಸೇತುವನು ರಚಿಸುವೆ| ದೃಡತರದೊಳು||” ಅಯ್ಯ ವಾನರ ನಿಮ್ಮಂತಹ ಕಪಿಗಳನ್ನು ರಾಮ ಚೆನ್ನಾಗಿ ಬಳಸಿಕೊಂಡ, ನಾನಾದರೆ ಕ್ಷಣ ಮಾತ್ರದಲ್ಲಿ ನನ್ನ ಬತ್ತಳಿಕೆಯಲ್ಲಿರುವ ಬಾಣದ ಮೂಲಕ ಸೇತುವೇ ನಿರ್ಮಾಣ ಮಾಡಿಬಿಡುತ್ತಿದ್ದೆ. ಹಿಂದೆ ನಾನು ಅಮ್ಮನ ಗಜಗೌರಿ ವೃತ ಮಾಡಲು ಸುರಪತಿ ದೇವೇಂದ್ರನ ಐರಾವತವನ್ನು ಭೂವಿಗೆ ಬಾಣದ ಸೇತುವೆಯ ಮೂಲಕ ಭೂಮಿಗೆ ತರಿಸಿದ್ದೇನೆ. ಇದು ರಾಮನಿಂದ ಸಾಧ್ಯವಾಗಿರಬಹುದು. ಆದರೆ ಅವನು ವ್ಯರ್ಥ ನಿಮ್ಮ 77 ಸಾವಿರ ವಾನರನ್ನು ಬಳಸಿಕೊಂಡು ಈ ಸೇತುವೆಯನ್ನು ಬಳಸಿ ಸೇತುವೆ ನಿರ್ಮಾಣ ಮಾಡಿದ ಹೋಗಲಿ ಬಿಡು ಎದು ಮದಗರ್ವದಿಂದ ಅರ್ಜುನ ಹೇಳಿದಾಗ ಅಂಜನೇಯ ಎನೆಂದೆ ಮಾನವ ರಾಮನ ತೆಗಳುತ್ತಿಯಾ ಏನು ನಾನೇನು ಸಾಮಾನ್ಯ ದವನೆ ರಾಮ ಭಕ್ತ ಹನುಮಂತ ನನ್ನ ಪ್ರಭುವನ್ನು ಅಲ್ಲಗೆಳೆಯುತ್ತೀಯಾ?
“ಮುಕ್ಕುವೇ ಜಗವನು| ತಿಕ್ಕುವೇ ಯಮನನು| ಸಿಕ್ಕಿದ ಭೈರವನ| ಠಕ್ಕುಪಚಾರದ| ಗರ್ವವಿದೇತಕೆ| ಸೊಕ್ಕಲಿ ಗಳಹದಿರು||” ನೋಡು ನೋಡು ನೀನು ಆ ರಾಮನ ಸಾಮರ್ಥ್ಯ ದ ಬಗ್ಗೆ ಮಾತಾಡುತ್ತೀಯಾ, ನಾನು ನನ್ನ ಪ್ರಭುವಿಗೆ ಯಾರಾದರು ಏನಾದರೂ ಹೇಳಿದರೆ ಸಿಟ್ಟು ಬಂದರೆ ಈ ಲೋಕವನ್ನೇ ಬಾಯಲ್ಲಿ ಮಕ್ಕುತ್ತೇನೆ. ಆ ಸೂರ್ಯ ಅಗ್ರಜನಾದ ಯಮನನ್ನು ಕೈಯಲ್ಲಿ ತಿಕ್ಕುತ್ತೇನೆ. ಮತ್ತೆ ಆ ಕಾಲಭೈರವನೇ ನಿನ್ನ ಪರವಾಗಿ ಎದುರು ಬಂದರೆ ಲಕ್ಕಿಸದೇ ಕಾದಾಡುವೇನು. ಈ ಮಂಗ ಸಾಮಾನ್ಯದವನಲ್ಲ. ನಿನ್ನ ಬಿಡು ನಿನ್ನಂತಹ ಸಾವಿರ ಜನರು ನನ್ನ ಪ್ರಭುವಿಗೆ ಏನಾದರು ಹೇಳಿದರೆ ಬಿಡುವನಲ್ಲ. ಎಂದು ಹನುಮಂತ ನೀನು ಎಷ್ಟೇ ಉದ್ದದ ಸೇತುವೆಯನ್ನು ಕಟ್ಟಿದರು ನಾನು ನೋಡಿದ ಕ್ಷಣ ನನ್ನ ಎಡಕಾಲಿನಿಂದ ಪುಡಿಗೈಯುವೇ ನೋಡು ಎಂದಾಗ ಅರ್ಜುನ “ಎಲವೋ ಮರ್ಕಟನೇ ಗರ್ವದಿ ನೀನು|ಸುಮ್ಮ|ನುಲಿಯಲು ಕಾಣೆನು ಫಲವನು| ಬಲಿವೆನು ಶರಧಿಗೆ ಸೇತುವನದ| ನೀನು| ಬಲದಿ ಮುರಿಯದಿರನೆಂದ|” ಹನುಮಂತ ನಾನು ಮೂರು ಬಾರಿ ಶರದ ಮೂಲಕ ಸೇತುವೆಯನ್ನು ಮಾಡುತ್ತೇನೆ. ಅದನ್ನ ನೀನು ತುಂಡರಿಸಿದೆಯಾದರೆ, ನಾನು ಅಗ್ನಿ ಪ್ರವೇಶ ಮಾಡುತ್ತೇನೆ. ಅದಕ್ಕೆ ಹನುಮಂತ ನಾನು ಸಹ ಕ್ಷಣ ಮಾತ್ರದಲ್ಲಿ ಸೇತುವೇ ನನ್ನ ಪಾದದ ಮೂಲಕ ಪುಡಿಗೈಯಲ್ಲಿಲ್ಲ ಆದರೆ ಇಂದಿನ ವರೆಗೆ ರಾಮದಾಸ ನಾದ ನಾನು ನಿನ್ನ ದಾಸನಾಗುತ್ತೇನೆ. ಏಕೆಂದರೆ ನಾನು ಚಿರಂಜೀವಿ ಅಗ್ನಿಗೆ ಹಾರಿದರೆ ಅಗ್ನಿ ಸುಡುವುದಿಲ್ಲ. ಅದಕ್ಕೆ ನಿನ್ನ ಪ್ರತಿಜ್ಞೆಗೆ ಸರಿಸಮವಾಗಿ ನಾನು ನಿನ್ನ ದಾಸನಾಗುತ್ತೇನೆ ಎಂದು ಹೇಳಿದಾಗ, ಅರ್ಜುನ ಅಕ್ಷಯಾಸ್ತ್ರದಿಂದ ಒಂದು ಸರಿ ಸೇತುವೇ ಬಲಿದ, ಅದನ್ನು ಹನುಮ ತುಂಡರಿಸಿದ, ಎರಡನೇ ಬಾರಿಯು ತುಂಡರಿಸಿದ ಮೂರನೆಯ ಬಾರಿಯೂ ತುಂಡರಿಸಿ ಹೀಗೆ ಹೇಳುತ್ತಾನೆ ಹನುಮ “ಎಲೆ ಮಾನವ ನೀ |ಸಲೆ ಕೈ ಚಳಕದಿ| ಬಲಿತಿಹ ಸೇತುವೆದೇನಾಯ್ತು||ಬಲಿಮುಖರೈ ನಾವ್| ಬಲು ಭಟರೈ ನೀವ್| ಸಲುಹುದೆ ನಿಮಗೀ ಪೌರುಷವು||” ಅಯ್ಯಾ ಮಾನವ ನೀನು ಬಲು ಭಟನಾಗಿ ಮೂರು ಬಾರಿ ಶರದಿಂದ ಮಾಡಿದ ಸೇತುವೇ ಎಲ್ಲಿಹೋಯಿತು? ಈ ಸಾಮಾನ್ಯ ಮಂಗನಾದ ನಾನು ಏನು ಮಾಡಲಿಲ್ಲ. ಕೇವಲ ಕಾಲಿನಿಂದ ಜೈ ಶ್ರೀರಾಮ್ ಎಂದು ಮೆಟ್ಟಿದೆ. ನೋಡಿದೆಯಾ ರಾಮ ನಾಮದ ಮಹಿಮೆ ಹಾಗಾದರೆ ಆ ಪ್ರಭು ಶ್ರೀರಾಮನ ಮಹಿಮೆ ಎಷ್ಟಿರಬಹುದು ತಿಳಿ ನೀನು. ಹೋ ನೀನು ಪೂರ್ವ ದಲ್ಲಿ ಪ್ರತಿಜ್ಞೆ ಮಾಡಿದೆ ಹೆದರಬೇಡ ನಾನು ಯಾರಲ್ಲೂ ಹೇಳುದಿಲ್ಲ. ನೀನು ಸಹ ಈ ಪ್ರಸಂಗ ಇಲ್ಲಿಗೆ ಬಿಡು ಮುಂದೆ ನಡೆ ಎಂದು ಹನುಮಂತ ಹೇಳುತ್ತಾನೆ.
“ಅಕಟಕ್ಕಟಾ |ಎತಕಿವನಲಿ| ಸೊಕ್ಕಿ ಪಂಥವ|ಗೈದೆ ನಿಂದಿನಿ||ಮಕ್ಕಳಾಟಿಕೆ| ಮುಂದುವರಿಯದೆ|ಹಕ್ಕಿ ದೇರನ |ದಯವು ಮಾಣ್ಣುದೆ||” ಅಯ್ಯೋ ವಿಧಿಯೇ ಚಂದ್ರವಂಶದವರು ಆಡಿದ ಮಾತಿಗೆ ತಪ್ಪಿ ನಡೆಯುವರೇ, ಈ ಸಾಹಸಿ ಹನುಮಂತನಲ್ಲಿ ಏಕೆ ಇಷ್ಟು ಸೊಕ್ಕಿನಿಂದ ಪಂಥವನ್ನು ಮಾಡಿದೆ ಆ ಹಕ್ಕಿಯ ವಾಹನವನ್ನು ಮಾಡಿಕೊಂಡ ಕೃಷ್ಣ ಇನ್ನು ದಯೇ ತೋರಲಿಲ್ಲ. ಆ ದೇವನಿಚ್ಚೆಯಂತೆ ಇರಬೇಕು ಆಗ್ನೇಯಾಸ್ತ್ರದಿಂದ ಅಗ್ನಿಯನ್ನು ಮಾಡಿ ಅಗ್ನಿ ಕುಂಡದಲ್ಲಿ ಈ ಪಾರ್ಥನ ದೇಹ ಸುಡಲಿ ಆ ಲೋಕ ನೋಡಲಿ ಎಂದು ಅರ್ಜುನ ಅಗ್ನಿ ಕುಂಡಕ್ಕೆ ಹಾರಲು ಮುಂದಾದಾಗ ಅಲ್ಲಿಗೆ ವೃದ್ಧ ಬ್ರಾಹ್ಮಣರ ಆಗಮನವಾಗಿ ನಿಲ್ಲು ನಿಲ್ಲು ಎಂಬ ಮಾತು ಕೇಳಿಬರುತ್ತಿದೆ. “ಏನಿದು ನಿಮ್ಮಲಿ| ಸಂವಾದ| ಸಾಕಯ್ಯ ತಡೆಯಿರಿ| ನಾನು ಕೇಳಿಕೊಂಡಪೆನದ||” ಅಯ್ಯ ಹಾರಬೇಡ ನಿಮ್ಮಲ್ಲಿ ಏನೋ ನೀನು ಅಗ್ನಿ ಕುಂಡಕ್ಕೆ ಹಾರುತ್ತೀಯಾ, ಯಾಕೆ ಎಂದು ತಿಳಿದಿಲ್ಲ. ಈ ಒಂದು ಪ್ರಾಣಿ ಮಂಗ ಆ ಕಡೆ ನಿಂತಿದೆ. ನಿಮ್ಮಲ್ಲಿ ಏನು ಸಂವಾದ ಆಗಿದೆ. ನೀನೇಕೆ ಅಗ್ನಿಗೆ ಹಾರುತ್ತೀಯಾ ಎಂದು ವೃದ್ಧ ಬ್ರಾಹ್ಮಣರು ಕೇಳಿದಾಗ ಅರ್ಜುನ ಇವರೆಗೆ ನಡೆದ ಪ್ರಸಂಗವನ್ನ ಹೇಳಿದಾಗ, ನೀವುಬ್ಬರು ಪಂಥ ಮಾಡಿದ್ದಕ್ಕೆ ನೋಡಿದ ಸಾಕ್ಷಿ ಯಾರಿದ್ದಾರೆ? ಅದಕ್ಕೆ ಪುನಃ ನೀನು ಸೇತುವನ್ನು ಮಾಡು ನಾನು ಕಂಡ ಸಾಕ್ಷಿಯಾಗುತ್ತೇನೆ. ನಂತರ ನೀನು ಪಾದದಿಂದ ಮೆಟ್ಟಿ ಪುಡಿ ಮಾಡು ಹನುಮಂತ ಅದಕ್ಕೂ ಸಾಕ್ಷಿ ನಾನಾಗುತ್ತೇನೆ. ಆಮೇಲೆ ಪಂಥದಂತೆ ಅಗ್ನಿಗೆ ಹಾರೋದೊ ಇಲ್ಲವೋ ನೋಡೋಣ ಎಂದಾಗ ಅರ್ಜುನನು ಮತ್ತೊಂದು ಶರದ ಸೇತುವನ್ನು ಮಾಡುತ್ತಾನೆ. ಅದನ್ನು ವೃದ್ಧ ಬ್ರಾಹ್ಮಣರು ತುದಿಯವರೆಗೆ ನೋಡಿ ಕೂ ಹಾಕುತ್ತೇನೆ. ಆಮೇಲೆ ಹನುಮ ನೀನು ಸೇತುವೆಯನ್ನು ಮುರಿದು ಹಾಕು ಎಂದು ವೃದ್ಧ ಬ್ರಾಹ್ಮಣ ರು ಹೇಳಿದಾಗ ಆಯಿತು ಎಂದು ಹನುಮ ಒಪ್ಪುತ್ತಾನೆ. ಆದರೆ ವೃದ್ಧ ಬ್ರಾಹ್ಮಣರು ತನ್ನ ನಿಜ ರೂಪದಿಂದ ಸೇತುವೆಯ ತುದಿಯಲ್ಲಿ ಹಿಂದೆ ಕೂರ್ಮವತಾರದಲ್ಲಿ ಧರೆಯನ್ನು ಹಿಡಿದ ಹಾಗೆ ಶರಗಳ ಸೇತುವನ್ನು ಹಿಡಿಯುತ್ತಾನೆ. ಆಗ ಹನುಮ ಎಂದು ಕೂಗುತ್ತಾನೆ. ನಂತರ ಹನುಮ ಸೇತುವೆಯನ್ನು ಕಾಲಿನಿಂದ ಎಷ್ಟು ಸರಿ ಮೆಟ್ಟಿದರು ತುಂಡಾಗಲಿಲ್ಲ. ಆಗ ಹನುಮ “ಪವನಸುತ ಮನದ ತಾ|ಮುರಿಯದಾರಲವನು ಮನದಿ|ಮರುಗುತೆಂದನಾ ಸಮೀರ| ವರಕುಮಾರನು|| ಅರರೆ ರಾಮಭಕ್ತನೆಂಬ| ಬಿರುದು ಪೊಯ್ತೆಯನಟಕ ದೇಹ| ವಿರಲು ಸಫಲವಾವುದಿದನು |ತೊರೆಯನೆಂದನು||” ಅಯ್ಯೋ ರಾಮ ನಾನು ಇನ್ನು ಏನು ಇದ್ದು ಪ್ರಯೋಜನ. ಈತ ಸಾವಿರ ಸೇತುವೇ ಕಟ್ಟಿದರೂ ನಾನು ಮುರಿತೇನೆ ಎಂಬ ಅಹಂಕಾರವೇ ನನಗೆ ಈ ರೀತಿ ಭೂಸುರರೆದುರು ಸೋಲಾಯಿತೇ? ರಾಮಭಕ್ತ ಎಂಬ ಬಿರುದು ಹೋಯಿತೆ ರಾಮಾ ಇನ್ನು ನಾನು ಇದ್ದು ಏನು ಪ್ರಯೋಜನ? ಎಂದು ಹನುಮ ಮನದಲ್ಲಿ ಯೋಚಿಸಿದಾಗ ಆ ವೃದ್ಧ ಬ್ರಾಹ್ಮಣರು ಶ್ರೀರಾಮಚಂದ್ರನ ರೂಪದಿಂದ ಹನುಮನಿಗೆ ದರುಷನ ಕೊಟ್ಟು ಅನಂತರ ನಿಮ್ಮಿಬ್ಬರ ಸಮ್ಮೀಲನದಿಂದ ಈ ನಾಟಕವನ್ನು ಮಾಡಬೇಕಾಯಿತು. ಅದರೆ ಆ ಪಾರ್ಥನು ನನ್ನ ಭಕ್ತ. ಭಕ್ತರಾದ ನೀವಿಬ್ಬರು ಮುಂದೆ ನಡೆಯುವ ಮಹಾ ಸಂಗ್ರಾಮಕ್ಕೆ ನನಗೆ ನೆರವಾಗಬೇಕು. ಎಂದು ಶ್ರೀರಾಮ ಹೇಳಿದಾಗ ಪ್ರಭು ನಿಮ್ಮ ಆಜ್ಞೆ ಶಿರೋದಾರಿಯ ಎಂದು ರಾಮಧ್ಯಾನದಲ್ಲಿ ಅಂತರಮುಖನಾಗುತ್ತಾನೆ. ಹೀಗೆ ಶರ ಸೇತು ಬಂಧನ ಮುಂದೆ ಅರ್ಜುನ ಹನುಮನಿಗೆ ಸ್ನೇಹ ಸೇತು ಬಂಧನವಾಗಿ ನಾಂದಿಯಾಯಿತು. ಹೀಗೆ ಹನುಮಂತನಾಗಿ ಶುಭ ಸಿ ಅಡಿಗ ಹಾಗೂ ಶ್ರೀರಾಮನಾಗಿ ದಿವಾಕರ ಆಚಾರ್ಯ ಗೇರುಕಟ್ಟೆ ಹಾಗೂ ವೃದ್ಧ ಬ್ರಾಹ್ಮಣರಾಗಿ ಕಿಶೋರಿ ದುಗ್ಗಪ್ಪ ನಡುಗಲ್ಲುನಿಂದ, ಅರ್ಜುನನಾಗಿ ಡಾ. ವಿ. ವಿನಾಯಕ ಭಟ್ ಗಾಳಿಮನೆಯವರ ಹನುಮಂತನ ಹತ್ತಿರ ಸಂಭಾಷಣೆ ಅರ್ಥಗರ್ಭಿತವಾಗಿತ್ತು. ಹೀಗೆ “ಜಯ ಜಯ ಶ್ರೀರಾಮ ರಘುವರ ಶುಭರಾಮ ” ಎಂಬ ಮಂಗಳ ಪದವನ್ನು ಹಾಡಿದರು. ಭಾಗವತರು ಚಂಡೆಗುಳಿ ಶ್ರೀ ಉದಯ ನರಸಿಂಹ ಶಾಸ್ತ್ರಿಯವರಿಗೆ ಚಂಡೆ ಮದ್ದಳೆಯಲ್ಲಿ ಪ್ರೋ ದಂಬೆ ಈಶ್ವರ ಶಾಸ್ತ್ರಿ ಹಾಗೂ ಬಂಗಾರಡ್ಕ ಶ್ರೀ ಪ್ರಕಾಶ ಸಾಥ್ ನೀಡಿದರು. ತಾಳಮದ್ದಳೆಯನ್ನು ಸರಾಸರಿ ಸುಮಾರು ನೂರೈವತ್ತು ಹೆಚ್ಚು ಮಂದಿ ಆಂತರ್ಜಾಲದಲ್ಲಿ ವೀಕ್ಷಿಸಿದರು. ದುಬೈ, ಮಸ್ಕತ್, ಡೆಲ್ಲಿ, ಮುಂಬೈ, ಬೆಂಗಳೂರು, ಉಡುಪಿ, ಉತ್ತರಕನ್ನಡ, ಹಾಗೂ ಸುತ್ತಮುತ್ತಲಿನ ಪೇಕ್ಷಕರು ವಿಕ್ಷಿಸಿ ಹುರಿದುಂಬಿಸಿದರು.
✍️ಪ್ರಸಂಗಕರ್ತರು ಚಾರ ಪ್ರದೀಪ ಹೆಬ್ಬಾರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.