ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ತಾಲ್ಲೂಕಿನ ತಿರುಮಲಹಟ್ಟಿ ಗ್ರಾಮದ ದಲಿತ ಯುವಕನನ್ನು ಸುಮಾರು 5 ವರ್ಷದಿಂದ ಜೀತ ಮಾಡಿಸಿಕೊಂಡು, ಹಲ್ಲೆ ಮಾಡುತ್ತಿದ್ದನ್ನು ನವೀನ್ ರವರನ್ನು ಬಂಧಿಸಿ ಜೀವಾವದಿ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಅಂಬೇಡ್ಕರ್ ಸೇವಾ ಸಮಿತಿಯಿಂದ ಮಾಲೂರು ತಹಸೀಲ್ದಾರ್ ರವರಿಗೆ ಹಾಗೂ ತಾಲ್ಲೂಕು ಸಮಾಜ ಕಲ್ಯಾಣಧಿಕಾರಿಗಳಿಗೆ ಮನವಿ ನೀಡಲಾಯಿತು.
ಬಿ.ಎ ಪದವಿದರನಾದ ವೇಣುಗೋಪಾಲ್ ರ ಮನೆಯಲ್ಲಿ ಅವರ ತಂದೆ ಕಾಲಿಲ್ಲದೆ ಅಂಗವಿಕಲನಾಗಿದ್ದು ಇವರ ಮಗಳ ಮದುವೆಗೆಂದು 5 ವರ್ಷದ ಹಿಂದರ ದಿನ್ನೇರಿ ಆರೋಹಳ್ಳಿ ಗ್ರಾಮದ ವಕ್ಕಲಿಗ ಸಮುದಾಯದ ನವೀನ್ ರವರ ಬಳಿ 75 ಸಾವಿರ ಹಣ ಪಡೆದುಕೊಂಡು ವೇಣುಗೋಪಾಲ್ ನನ್ನು ಇಟ್ಟಿಗೆ ಕಾರ್ಖಾನೆ, ಜಮೀನು ಹಾಗೂ ಮನೆಯ ಕೆಲಸಕ್ಕೆ ಜೀತಕ್ಕೆ ಇಟ್ಟಿದ್ದು, ಈ ವಿಚಾರ ಅಂಬೇಡ್ಕರ್ ಸೇವಾ ಸಮಿತಿಯ ಸಂಸ್ಥಾಪಕ ಅದ್ಯಕ್ಷ ಸಂದೇಶ್ ರವರಿಗೆ ತಿಳಿದು ಕೂಡಲೇ ದಿನ್ನೇರಿ ಆರೋಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ವೇಣುಗೋಪಾಲ ರನ್ನು ಜೀತ ವಿಮುಕ್ತಿಗೊಳಿಸಲಾಯಿತು.
ಈಗ ವೇಣುಗೋಪಾಲ ಹಾಗೂ ಅವರ ಕುಟುಂಬಕ್ಕೆ ಜೀವ ಬೆದರಿಕೆ ಇದ್ದು, ಕೂಡಲೇ ಇವರ ಕುಟುಂಬಕ್ಕೆ ರಕ್ಷಣೆ ನೀಡಬೇಕು ಹಾಗೂ ನವೀನ್ ರವರನ್ನು ಜೀವವಧಿ ಶಿಕ್ಷೆಗೆ ಒಳಪಡಿಸಬೇಕೆಂದು ಮನವಿ ಸಲ್ಲಿಸಲಾಯಿತು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.