ಭರವಸೆಯೇ ಜೀವನ
ಜಗತ್ತು ನಡೆದುಕೊಂಡು,ಜನ ಕಷ್ಟ-ಸುಖ ದೊಂದಿಗೆ ಬದುಕುತ್ತಿದ್ದರು, ಬೆಳಿಗ್ಗೆ ಎದ್ದರೆ ಕೋಟಿ ಕೋಟಿ ಜನರ ಕೋಟಿ-ಕೋಟಿ ಸವಾಲುಗಳು, ಕೆಲವರಿಗೆ ಉದ್ಯೋಗದ ಚಿಂತೆ, ಕೆಲವರಿಗೆ ಮದುವೆ, ಮಕ್ಕಳು, ಶಿಕ್ಷಣ ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಒಟ್ಟಿನಲ್ಲಿ ಹಾಗೂ ಹೀಗೂ ಕಾಲ ಕಳೆಯುತ್ತಿದ್ದವು. ಆದರೆ ಇತಿಹಾಸ ಹಿಂದೆ ಕಾಣದ ಅತ್ಯಂತ ಕೆಟ್ಟದರಲ್ಲಿ ಕೆಟ್ಟದಾದ ಕಣ್ಣಿಗೆ ಕಾಣದ ವೈರಸ್ 2019 ರಲ್ಲಿ ವುಹಾನ್ನಿಂದ ಬಂದ ವೈರಸ್ ಈಗ ಅದರ ಬಗ್ಗೆ ಗೊತ್ತಿಲ್ಲದವರು ಯಾರೂ ಇಲ್ಲ. ವೈರಸ್ ಕಥೆ ಹಳೆಯದಾದರೂ ಅದರಿಂದ ಪ್ರತಿಯೊಂದು ದಿನ ಅನುಭವಿಸುತ್ತಿರುವ ಮಾನಸಿಕ ಯಾತನೆ ಪ್ರತಿದಿನ ಹೊಸದು. ಇವತ್ತು ಎಲ್ಲರಿಗೂ ನಾನು ನಿಭಾಯಿಸಬಲ್ಲೆ ಎಂಬ ಯೋಚನೆ ಬಂದರೆ, ನಂತರದ ಕ್ಷಣವೇ ನಾನು ಸೋತು ಹೋದೆ ಎಂಬ ಕಲ್ಪನೆ, ನನಗೆ ನನ್ನ ಕುಟುಂಬಕ್ಕೆ ಏನು ಆಗುವುದಿಲ್ಲ ಎಂಬ ಧೋರಣೆ ಒಂದು ಕಡೆ, ಮತ್ತೊಂದು ಕಡೆ ಏನಾದರೂ ಆದೀತೆ ಆದರೆ ಏನು ಮಾಡುವುದು ಎಂಬ ವ್ಯಥೆಯು ಕೂಡ ಮನೆಯಲ್ಲಿ ಇಡೀ ದಿನ ಮಡದಿ, ಮಕ್ಕಳು, ಗಂಡ ವಾರದಲ್ಲಿ ಒಂದು ದಿನ ಎಲ್ಲರೂ ಸೇರಿ ಕಾಲಕಳೆಯಲು ಕಾಯುತ್ತಿದ್ದ ಸಂತೋಷ ಪ್ರಸ್ತುತ ಯಾವಾಗ ಇವರೆಲ್ಲರೂ ಅಂದರೆ ಸ್ಕೂಲ್, ಕಾಲೇಜು, ಕಚೇರಿ ಹೋಗುತ್ತಾರೆ ಎಂಬ ಕಾತುರ. ಮಾನಸಿಕ ತೊಳಲಾಟ ಒಂದೇ ಎರಡೇ. ನಾವು ಈಗಿರುವ ಪರಿಸ್ಥಿತಿಯನ್ನು ನಿಭಾಯಿಸಿ ಪರಿಪೂರ್ಣವಾಗಿ ಈ ತೊಳಲಾಟದಿಂದ ಹೊರಬರುತ್ತಿರುವ ಕನಸು ಕಾಣುತ್ತಿದ್ದೇವೆ ನನ್ನ ಪ್ರಕಾರ ಈ ಮಾನಸಿಕ ಯಾತನೆಗೆ ಪರಿಹಾರಗಳು ಹಲವು ವಾಸ್ತವವನ್ನು ಅರ್ಥ ಮಾಡಿಕೊಂಡು ಜೀವನದ ಪ್ರತಿಯೊಂದು ಕ್ಷಣವನ್ನು ಮಧುರವಾಗಿ ಅನುಭವಿಸುವ ಭಾವನೆಯೊಂದಿಗೆ ಮಕ್ಕಳಲ್ಲಿ ಮಕ್ಕಳಾಗಿ, ಹಿರಿಯರಲ್ಲಿ ಹಿರಿಯರಲ್ಲಿ ನಮ್ಮ ದೃಷ್ಟಿ ಎಲ್ಲಿಯವರೆಗೂ ಹಾಯುತ್ತಿದೆಯೋ ಅದರ ಪರಿಧಿಯ ಮಿತಿಯಲ್ಲಿ ಕೊಂಚ ಸೇವೆಯನ್ನು ಮಾಡುತ್ತಾ ಯಾಕೆಂದರೆ ಕೊಡುವುದರಲ್ಲಿ ಇರುವಷ್ಟು ಸುಖ ಸಂತೋಷ ಪಡೆಯುವುದರಲ್ಲಿ ಇರುವುದಿಲ್ಲ. ಈ ರೀತಿ ಕೆಲವು ಸಣ್ಣ ಸಣ್ಣ ಬದಲಾವಣೆಗಳೊಂದಿಗೆ ನಾವು ಎದುರಿಸುತ್ತಿರುವ ಮಾನಸಿಕ ಶತ್ರು ಅಂದರೆ ಒತ್ತಡವನ್ನು ಹಿಂಸೆಯನ್ನು ದೂರ ಇಡಬಹುದು. ಯಾಕೆಂದರೆ ಭರವಸೆಯೇ ಜೀವನ
ನೆಮ್ಮದಿಗಾಗಿ ಕೆಲವು ಅಂಶಗಳು
1. ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳುವುದು 2. ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಬಲ್ಲ ಎಂಬ ಧೋರಣೆ 3. ಫೋನ್ ಮೂಲಕ ಸಂಬಂಧಿಕರ ಜೊತೆ ಸಂಭಾಷಣೆ 4. ಮುಕ್ತವಾದ ಮಾತುಗಳು 5. ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವುದು 6. ಸಹಾಯ ಮಾಡುವುದು 7. ರುಚಿಕರ ಮತ್ತು ಆರೋಗ್ಯಕರ ಅಡುಗೆ ಮಾಡಿ ತಿನ್ನುವುದು 8. ಮಧುರ ನೆನಪುಗಳನ್ನು ನೆನಪಿಸಿಕೊಳ್ಳುವುದು 9. ನಾಳಿನ ಭರವಸೆಯನ್ನು ಬಿಡದಿರುವುದು 10. ನಗುವುದು ನಗಿಸುವುದು.
ಸೀಮಾ ಕೌಸರ್ ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.