ವಿಕೆ ನ್ಯೂಸ್ ಪುತ್ತೂರು:- ಪುತ್ತೂರಿನ ಬೊಳವಾರಿನ ಆಂಜನೇಯ ಯಕ್ಷಗಾನ ಕಲಾ ಸಂಘದ ಸದಸ್ಯರ ಅಂತರ್ಜಾಲ ಗೂಗಲ್ ಮೀಟ್ ನಲ್ಲಿ ಯಕ್ಷಗಾನ ತಾಳಮದ್ದಳೆ ಸರಣಿ ಮೂರನೇಯ ಕಾರ್ಯಕ್ರಮ ದಿನಾಂಕ 12-06-2021 ಶನಿವಾರದಂದು ಮಧ್ಯಾಹ್ನ 3 ಗಂಟೆಗೆ ಗಣಪತಿ ಪೂಜೆಯೊಂದಿಗೆ ಪ್ರಾರಂಭವಾಯಿತು. ಮೂಲ್ಕಿಯಲ್ಲಿ ಭಾಗವತರು ಮತ್ತು ಚಂಡೆ-ಮದ್ದಲೆಯವರು, ಕಲ್ಲಾರೆಯಿಂದ ಶುಕ್ರಾಚಾರ್ಯ, ಕುಂಜೂರು ಪಂಜದಿಂದ ದೇವಯಾನೆ, ಪರ್ಲಡ್ಕ ಶಿವಪೇಟೆಯಲ್ಲಿ ಕಚ, ಪಕಳಕುಂಜದಿಂದ ವೃಷವರ್ವ, ನೆಹರುನಗರದಿಂದ ಧೂಮಕೇತನ ಪಾತ್ರದಲ್ಲಿ ಹೀಗೆ ಅಗತ್ಯಕ್ಕಿಂತಲೂ ಹೆಚ್ಚು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಗೂಗುಲ್ ಮೀಟ್ ಮೂಲಕ ಅಂತರ್ಜಾಲ ಯಕ್ಷಗಾನ ತಾಳಮದ್ದಲೆ “ಕಚ-ದೇವಾಯನಿ” ಎಂಬ ಪ್ರಸಂಗವನ್ನು ನಡೆಸಿಕೊಟ್ಟರು. ಶನಿವಾರ ಮಧ್ಯಾಹ್ನ 3 ಗಂಟೆಗೆ “ಅಂಬುರಳನೇತ್ರೆ ಶ್ರೀದುರ್ಗಾಂಬಿಕೆ ಪಡಬಂದು| ಅಂಬಿತಾನಯ ವಿಘ್ನರಾಜನನ ಸ್ತುತಿಸಿ|” ಎಂದು ಗಣಪತಿಯ ಸ್ತುತಿಯೊಂದಿಗೆ ಭಾಗವತರಾದ ಎರ್ಮಾಳು ವಾಸುದೇವ ರಾವ್ ರವರಿಗೆ ಚಂಡೆ ಮದ್ದಲೆಯಲ್ಲಿ ಆದಿತ್ಯ, ಕಾರ್ತಿಕ್ ರಾವ್ ರವರು ಸಾಥ್ ನೊಂದಿಗೆ ಪ್ರಾರಂಭವಾಯಿತು. ಕಚನಾಗಿ ಭಾಸ್ಖರ ಬಾರ್ಯರು”ತೆರಳಿ ಭಾರ್ಗವ ನಡಿಯ ಸೇವೆಯ| ವಿರಚಿಸುತ ಚೌಷಷ್ಠಿ ವಿದ್ಯೆಯ| ನರಿತು ಗುರುಮುಖದಿಂದ ಸಂಜೀವನದ ಮಂತ್ರವನ್ನು||” ದೇವತೆಗಳ ಗುರು ನಮ್ಮ ತಂದೆ ಬ್ರಹಸ್ಪತಿಯಾಚಾರ್ಯ ನಿರ್ದೇಶನದಂತೆ ಗುರು ಶುಕ್ರಾಚಾರ್ಯರ ಹತ್ತಿರ ಸಂಜೀವಿನಿ ವಿದ್ಯೆಯನ್ನು ಕಲಿತುಕೊಂಡು ಬಾ ಎಂದು ಆಶೀರ್ವಾದ ಮಾಡಿ ಕಳುಹಿದರಲ್ಲಾ. ಹೀಗೆ ಗುರುವಿನ ಆಶ್ರಮಕ್ಕೆ ಬಂದು ಗುರು ಶುಕ್ರಾಚಾರ್ಯರ ಕಾಲಿಗೆ ಬಿದ್ದಿದ್ದೇನೆ. ನಮೋ ನಮಃ ಗುರುಗಳೇ ನಮೋ ನಮಃ ನಮ್ಮ ಉದ್ದರಿಸಬೇಕು. ಎಂದಾಗ ಶುಕ್ರಾಚಾರ್ಯರು “ಬಂದೆಯೇನೈ ಗುರುಜಾತ |ಮನ| ದಂದವನುಸಿರು ಪ್ರಖ್ಯಾತ|| ತಂದೆ ತಾಯ್ಗಳು ಕುಶಲಿಗಳೆ ಪೇಳ್ ನೀನಿಲ್ಲಿ| ಬಂದುದನರುಹೆನಲೆಂದನು ದೈನ್ಯದಿ||” ಮಗೂ ಕಚ ದೇವಗುರು ಬ್ರಹಸ್ಪತಿಯಾಚಾರ್ಯರ ಮಗ ಶುಭವಾಗಲಿ. ನಿನ್ನ ತಂದೆ-ತಾಯಿಗಳು ಕುಶಲಿಗರೆ, ಬಂದ ಕಾರ್ಯಗಳೇನು ಮಗು ಹೇಳು ಈ ಗುರು ಶುಕ್ರಾಚಾರ್ಯರ ಹತ್ತಿರ ಏನು ಬೇಕಾಗಿದೆ ಹೇಳು ಮಗು ಹೇಳು ಕಚ ಎಂದಾಗ ಕಚನಾಗ “ವಿನಯದಿಂ ಪದಕೆಗಿದ ಸನ್ನುತಿಪ ಗುರುಜನಂ| ಕನಿಕರದಿ ಮನ್ನಿಸುತ ಭಾರ್ಗವನು ದಾನದೊಳ್|ಘನವಹುದು ವಿದ್ಯೋಪದೇಶದೊಳು ಸತ್ಪತ್ರಾನಿವನೆನುತ ಯೋಚಿಸತೆಂದನು||” ಗುರುದೇವ ನಮೋ ನಮಃ ನಿಮ್ಮ ಪಾದಕೆರಗಿ, ಪಾದದ ದೂಳನ್ನು ಶಿರಕ್ಕಾಗ್ರಾಣಿಸಿದ್ದೇನೆ. ಗುರುವರ್ಯ ನಿಮ್ಮಲ್ಲಿ ವಿಧ್ಯಾಕಾಮನೆಗಳನ್ನು ಹೊತ್ತು ಬಂದಿದ್ದೇನೆ. ಈ ಶಿಷ್ಯನನ್ನು ಒಪ್ಪಿ ವಿದ್ಯೆಯಿಂದ ಅಪ್ಪಬೇಕು ಎಂದಾಗ ಗುರುಮಗ ನೀನು ಆದರೆ ಇನ್ನೋರ್ವ ಗುರುವನ್ನ ಏಕೆ ಆಶ್ರಯಿಸುತ್ತಾರೆ ಗೊತ್ತ ಮಗನ ಮೇಲಿನ ಮಮಕಾರವು, ಅವನಿಗೆ ಜೋರು ಮಾಡಿ ಹೇಳಿದರೆ ಅಪ್ಪ ಬೈಯುತ್ತಾನೆ ಎಂದು ಮಗ ದುಃಖವನ್ನು ತೋರ್ಪಡಿಸುತ್ತಾನೆ. ಎಂದು ಇನ್ನೊಂದು ಗುರುವನ್ನು ಆಶ್ರಯಿಸುತ್ತಾರೆ. ಆಗಲಿ ವಿದ್ಯಾದಾನ ಮಹತ್ವವಾದದ್ದು ನಿನ್ನ ಶಿಷ್ಯನೆಂದು ಒಪ್ಪಿಕೊಳ್ಳುತ್ತೇನೆ. ಆದರೆ ಈ ಗುರುಕುಲದಲ್ಲಿ ಕೆಲವು ನಿಬಂಧನೆಗಳು ಇವೆ. ಅದು ಮಗಳಾದ ದೇವಾಯನೆ ಹೇಳುತ್ತಾಳೆ. ಆವಳನ್ನು ಪರಿಚಯಿಸುತ್ತೇನೆ.
ಮಗಳೇ ದೇವಯಾನೆ ಎಂದು ಕರೆದಾಗ ದೇವಯಾನಿ ಬಂದು ಅಪ್ಪನಲ್ಲಿ ಕರೆದ ಕಾರಣ ಕೇಳಿದಾಗ ಕಚನ ಪರಿಚಯವನ್ನು ಮಾಡಿ, ಇನ್ನುಮುಂದೆ ಇವನು ಇಲ್ಲೇ ಇರುತ್ತಾನೆ, ಅವನಿಗೆ ಬೇಕಾದ ವಿದ್ಯೆಯನ್ನು ನೀನು ನಾನು ಸೇರಿ ಹೇಳಿಕೊಡೋಣ. ಮತ್ತೆ ನಾನು ಅಗ್ನೀಹೊತ್ರ ಕಾರ್ಯಕ್ಕೆ ಬೇಕಾದ ಕುಶ-ಸಮೀದೆಯನ್ನು ಕಚನೇ ಹೋಗಿ ತರಬೇಕು ಎಂದು ಗುರು ಶುಕ್ರಾಚಾರ್ಯರು ಬೇರೆ ಕಾರ್ಯದ ನಿಮಿತ್ತ ಹೊರಡುತ್ತಾರೆ. ಆಗ ದೇವಾಯನೆ ಕಚನಲ್ಲಿ “ನಸುನಗೆ ನಗುತತಿ ಸ್ನೇಹದಿ ಕಚನೊಳು| ಬಿಸಜಾಕ್ಷಿ ಪೇಳ್ದಳು ಸಖನ|| ಹಸನಾವಾಯ್ತು ಓರ್ವಳಾಗಿರ್ದೇನು ಜೊತೆಯೊಳು| ಕುಶಲದೊಳಾಡಿಕೊಂಡಿಹುದು||” ಆಯ್ಯ ಕಚನೇ ಇದುವರೆಗೆ ನಾನು ಓರ್ವಳೇ ಇದ್ದು ಬೇಸರವಾಗಿದೆ. ಇನ್ನುಮುಂದೆ ನನ್ನ ಸಖನಾಗಿ ಇದ್ದು ಕುಶಲದಲಿ ಆಡಿಕೊಂಡು ಇರೋಣ ಬಾ ಹೀಗೆ ಆಶ್ರಮವನ್ನು ತೋರಿಸುತ್ತೇನೆ. ಎಂದಾಗ ಸರಿ ಆಶ್ರಮವನ್ನು ನೋಡಿ ನಂತರ ಹೋಗಿ ಆಚಾರ್ಯರಿಗೆ ಬೇಕಾದ ಕುಶ-ಸಮೀಧೆಯನ್ನು ತರುತ್ತೇನೆ ಎಂದು ಕಚ ಹೇಳುತ್ತಾನೆ. ಆಗ ರಾಕ್ಷಸರ ಒಡೆಯನಾದ ವೃಷಪರ್ವನ ಆಜ್ಞೆಯ ಹೊತ್ತು ಧೂಮಕೇತನು “ಶಿರದೊಳಾಜ್ಞೆಯನಾಂತು ವೇಗದಿ| ಪೊರಟುಬಂದ ಧೂಮಕೇತನು| ಖರದಿ ಖಡುಗವ ತಿರುಹುತುಪವನದೆಡೆಗೆ ನಡೆತಂದಾ||” ಬಳಿರೇ ರಾಕ್ಷಸ ಕುಲ ಸಾರ್ವಭೌಮ, ಆತನ ಯೋಚನೆ, ಯಾ ಯೋಜನೆ ಮೆಚ್ಚಲೇಬೇಕು, ಮೊನ್ನೆ ಮೊನ್ನೆ ಚಾರನು ಬಂದು ದೇವಲೋಕದಿಂದ ಕಚ ಬಂದು ಗುರು ಶುಕ್ರಾಚಾರ್ಯರ ಶಿಷ್ಯನಾಗಿ ಸೇರಿಕೊಂಡಿದ್ದಾನೆ ಎಂದಾಗ ಮಂತ್ರಿಯಾದ ಈ ಧೂಮಕೇತನಲ್ಲಿ ಬಂದು ಹೇಳಿದನಲ್ಲಾ ಗುಟ್ಟಾಗಿ ಯಾರಿಗೂ ತಿಳಿಯದೇ ಆ ಕಚನನ್ನು ಕೊಂದು ಸಮದ್ರಕ್ಕೆ ಎಸೆದು ಬಾ ಎಂದು ಅದಕ್ಕೆ ಒಡೆಯ ವೃಷಪರ್ವನ ಆಜ್ಞೆ ಯನ್ನು ಶಿರದಲ್ಲಿ ಹೊತ್ತು ಈ ಉಪವನದಲ್ಲಿ ಕಚನಿಗಾಗಿ ಕಾದು ಆತನ ಕೊಲ್ಲುದಕ್ಕೆ ಸಂಚನ್ನ ಹೂಡುತ್ತೇನೆ. ಆ ಅದಾರು ಅದಾರು ಯಾರು ನೀನು” ಯಾರು ನಿನ್ನಯ ಪೇಸರೇನು ನಿನ್ನಿಲ್ಲಿಗೆ| ಸಾರಿ ಬಂದಿಹುದೇಕೆ|| ಪೋರ ಕೇಳು ಎಮ್ಮಯ ವನ ಪೊಕ್ಕುದರಿಂದ|ಭೋರನೆ ಶಿರವರಿವೆ||” ಯಾರು ನೀನು ನಿನ್ನ ಹೆಸರೇನು? ನಮ್ಮ ಈ ವನ ಪ್ರದೇಶಕ್ಕೆ ಬಂದ ಕಾರಣವೇನು? ಇದು ನಮ್ಮ ರಾಕ್ಷಸ ಒಡೆಯ ವೃಷಪರ್ವನ ಆಳ್ವಿಕೆಯ ಶುಕವನ ಇಲ್ಲಿ ಏನು ಮಾಡುತ್ತಿರುವೇ? ಎಂದಾಗ ಕಚನು “ಗುರುಸುತನಹೆ ಶುಕ್ರಾಚಾರ್ಯಶಿಷ್ಯನು ಎನ್ನ|ಕರೆವರು ಕಚನೆನ್ನುತ|| ವರ ಸಮಿತ್ಕುಶಕಾಗಿ ಬಂದಿಹೆ ನೀನೇಕೆ| ಕೆರಳಿ ಗರ್ಜಿಸುತಿರ್ಪೇಯ||” ಅಯ್ಯ ನಾನು ದೇವಲೋಕದ ಬ್ರಹಸ್ಪತಿಯಾಚಾರ್ಯರ ಮಗ ರಾಕ್ಷಸ ಗುರು ಶುಕ್ರಾಚಾರ್ಯರ ಶಿಷ್ಯ ಕಚನೆಂದು ಎಲ್ಲರೂ ಕರಿತ್ತಾರೆ. ಗುರು ಶುಕ್ರಾಚಾರ್ಯರ ಅಗ್ನಹೋತ್ರಕ್ಕೆ ಬೇಕಾದ ಶುಕ ಸಮೀದೆಯನ್ನು ತರಲು ಬಂದಿದ್ದೇನೆ. ಓಹೋ ನೀನಾ ಕಚ “ಬಲ್ಲೇ ನೀನಹತನು ಶುಕ್ರಾಚಾರ್ಯನ ಸೇವೆ|ಯಲ್ಲಿ ರ್ದುಪಾಯದಲಿ|| ಖುಲ್ಲ ನೀ ವಿದ್ಯೆ ಸಂಗ್ರಹಿಪೆಯ ಬಿಡುವನೆ| ಕೊಲ್ಲುವೆನೀಕ್ಷಣದೀ||” ಆಹಾ ಆಹಾ ನೀನಃ ಸುರರ್ಕಳ ಪಕ್ಷದಿಂದ ಗುರು ಮಗನಾಗಿ ಇಲ್ಲಿ ಬಂದು ಗುರು ಶುಕ್ರಾಚಾರ್ಯರ ಸೇವೆ ಮಾಡಿ ಉಪಾಯದಿಂದ ಸಂಜೀವಿನಿ ವಿದ್ಯೆಯನ್ನು ಅಪಹರಿಸಲು ಬಂದಿದ್ದೀಯಾ? ಪಾಪಿ ನಿನ್ನ ಹೀಗೆ ಬಿಡುದಿಲ್ಲ ಖಡ್ಗದಿಂದ ಕೊಚ್ಚಿ ಕೊಲ್ಲುತ್ತೇನೆ. ಎಂದು ಧೂಮಕೇತು ಗರ್ಜಿಸಿ ಕಚನ ತಲೆಯನ್ನ ಕಡಿದು ಚೆಲ್ಲುತ್ತಾನೆ. ನಂತರ ಧೂಮಕೇತನು “ಭರಿತ ರೋಷಾವೇಶದಿಂದ ಕಚನಂಗಮಂ| ಕೊರೆದು ಚೂರ್ಣವ ಗೆಯ್ವುತಬ್ದಿಯೊಳ್ ಬೀಸಾಡಿ| ಭರದಿ ಬಂದಿ ವಾರ್ತೆ ವೃಷಪರ್ವಗುಸಿರುತಂ ದುರುಳನಿರುತಿರಲತ್ತಲು||” ಆ ಕಚನ ರುಂಡ-ಮುಂಡ ಬೇರಾಗಿದೆ ಕೈ ಕಾಲುಗಳನ್ನು ಕಚ ಕಚನೆ ತುಂಡರಿಸಿ ಎಲುಬಿನ ದೇಹವನ್ನು ಒಂದು ಮಾಡಿ ಆ ಸಮುದ್ರಕ್ಕೆ ಬೀಸಾಡಿದೆ. ಇ ವಾರ್ತೆಯನ್ನು ಒಡೆಯ ವೃಷಪರ್ವನಲ್ಲಿ ಹೇಳಬೇಕಲ್ಲವೇ ಹೋಗುತ್ತೇನೆ ಆಸ್ಥೋನಕ್ಕೆ ಎಂದು ಗತ್ತು ಗಾಂಭೀರ್ಯ ದಿಂದ ಧೂಮಕೇತನ ಆರ್ಭಟ ಅಟ್ಟಹಾಸ ಎಲ್ಲವನ್ನ ಒಳಗೊಂಡು ಪಾತ್ರವನ್ನು ಸೌಮ್ಯ ಸ್ವಭಾವದ ಪ್ರಸಂಗಕರ್ತರು ಚಾರ ಪ್ರದೀಪ ಹೆಬ್ಬಾರ್ ಸೊಗಸಾಗಿ ಮಾಡಿದರು.
“ವಿರಚಿಸಿಯೆ ಮಧ್ಯಾಹ್ನಿಕಾದಿ ಸತ್ಕರ್ಮ ಗಳ| ಹರುಷದಿಂ ಭೋಜನಕೆ ಶುಕ್ರನಯ್ತಂದು ನಿಜ| ತರಳೆಯಾಗಿಹ ದೇವಾಯನಿಯಂ ಕರೆಯಲ್ಕೆ ಪರಿತಪಿಸುತಲೆಡಬಲವನು||” ಮಧ್ಯಾಹ್ನದ ಸತ್ಕರ್ಮ ವನ್ನು ಎಲ್ಲಾ ಪೂರೈಸಿ ಶುಕ್ರಾಚಾರ್ಯರು ಊಟದ ಸಮಯವಾದರಿಂದ ನಿಜ ಮಗಳಾದ ದೇವಯಾನಿಯಲ್ಲಿ ಬಡಿಸು ಎಂದು ಕರೆದಾಗ ಅಪ್ಪ ಕಚನೆಲ್ಲಿದ್ದಾನೆ. ಎಂದು ಕೇಳಿದಾಗ ಶುಕ್ರಾಚಾರ್ಯರು ತನ್ನ ಎಡಬಲವನ್ನು ಪರೀಕ್ಷಿಸಿ ಕಚ ಶುಕ ಸಮೀದೆ ತರಲು ಹೋದವ ಬರಲಿಲ್ವ ಎಂದಾಗ ದೇವಯಾನಿ “ಎಲ್ಲಿ ಕಳಿಸಿರ್ಪೆ ಕಚನ| ಜನಕನೇ ಕೇ|ಳಲ್ಲಿ ಕಾಣೆನು ಪ್ರೇಮನ|| ಇಲ್ಲದವನೆಮ್ಮ ಗೃಹದಿ| ಎನ್ನ ಮನ|ಪಲ್ಲಟಿಸುತಿದೆ ಸ್ನೇಹದಿ||” ಅಪ್ಪ ನನ್ನ ಸಖನಾದ ನಿಮ್ಮ ಶಿಷ್ಯನಾದ ಕಚ ಎಲ್ಲಿಗೆ ಕಳಿಸಿದ್ದೇ? ಅವನು ಇನ್ನು ಬರಲಿಲ್ಲ. ನನಗೆ ಅವನ ಕಾಣದೆ ಹಸಿವೆ ಇಲ್ಲ. ಹೇಳು ಪಿತನೇ ಹೇಳು ಎಂದಾಗ “ಕುಶ ಸಮಿಧೆಗೆಂದೆನುತಲಿ|ತೆರಳಿಹನು| ಪಸುಳೆ ಕೇಳ್ ಬಹ ಕಡೆಯಲಿ|| ಹಸಿದು ಕುಳಿತಿಹೆ ವೇಗದಿ| ಭೋಜನವ|ನೆಸಗು ಬಾ ಸಂತೋಸದಿ||” ಮಗಳೇ ಕಚನು ಕುಶ ಸಮಿಧೆ ತರಲು ಕಾನನಕ್ಕೆ ಹೋಗಿದ್ದಾನೆ. ಇನ್ನು ಬರುತ್ತಾನೆ. ಅವನು ಬಂದ ಮೇಲೆ ಅವನು ಊಟ ಮಾಡುತ್ತಾನೆ. ಅದಕ್ಕೆ ನನಗೆ ಹಸಿವೆಯಾಗಿದೆ. ಊಟಕ್ಕೆ ಬಡಿಸು ನಾನು ಊಟ ಮಾಡುತ್ತೇನೆ. ತಂದೆ ನಿಮಗೆ ಊಟದ ಚಿಂತೆ ನಾನು ಕಚನನ್ನು ಕಾಣದೇ “ಇನನುದಯದಾರಭ್ಯದಿ| ಕಚನ ಮುಖ| ವನಜ ಕಾಣೆನು ವಿಪಿನದಿ|| ಘನ ವ್ಯಥೆಯೊಳಿಹನೆನ್ನುತ| ಕಳುವಳಿಸಿ| ಮನ ಮರುಗುತಿದೆ ನೆನೆಯುತ||” ಅಪ್ಪ ಸೂರ್ಯೋದಯದಿಂದ ಇದುವರೆಗೆ ನನ್ನ ಪ್ರೇಮದ ಸಖ ಕಚನ ಮುಖ ಕಾಣಲಿಲ್ಲ. ಈ ಚಿಂತೆಯೊಳು ನಾನಿದ್ದರೆ ನಿಮಗೆ ಊಟದ ಚಿಂತೆ ಅಲ್ವ. ನನಗೆ ಈ ತಕ್ಷಣ ಕಚ ಕರೆಸು ಆಮೇಲೆ ಊಟ ಬಡಿಸುತ್ತೇನೆ. ಆಗ ಶುಕ್ರಾಚಾರ್ಯರು ಮಗಳೆ “ತರಳೆಯೆಂದುದ ಕೇಳುತಾಗ|ಮನ| ಮರುಗಿ ಭಾರ್ಗವನತಿ ಬೇಗ |ಗುರು ಜನೆಲ್ಲಿಹನೆಂದು ಜ್ಞಾನದೃಷ್ಠಿಗಳಿಂದ| ಪರಿಕಿಸೆ ಖಳನಿಂದಳಿದನೆಂದರಿಯುತ್ತ||” ದೇವಯಾನಿ ಹೆದರಬೇಡ ಕಚ ಇದ್ದಾನೆ ಬರುತ್ತಾನೆ ಎಂದು ಗುರು ಶುಕ್ರಾಚಾರ್ಯರು ತನ್ನ ಜ್ಞಾನ ದೃಷ್ಟಿಯಿಂದ ನೋಡಿದಾಗ ಖಳರು ಆತನನ್ನು ಕೊಂದು ಕಳೆದರು ಎಂದು ಅರಿತು ತನ್ನ ಕ್ರೋಧವನ್ನು ಬದಿಗಿಟ್ಟು “ಭ್ರಷ್ಟರು ಕರ್ಬುರರಿವರು| ದೊಟ್ಟಿಹುದೇಕೆ ಪಾಮರರು|| ತಟ್ಟನೆ ಬದುಕಿಪೆನೆಂದು ಸಂಜೀವನ| ಶ್ರೇಷ್ಠ ಮಂತ್ರವ ಪಠಿಸುತ್ತಾ ಶುಕ್ರಾಚಾರ್ಯ||” ಆ ಭ್ರಷ್ಟ ರಾಕ್ಷಸರು ಕರ್ಬುಹದಿಂದ ಕಚನ ಕೊಂದರು ಪಾಪಿಗಳು ಹೋಗಲಿ ತನ್ನಲ್ಲಿರುವ ಮೃತ ಸಂಜೀವಿನಿ ಮಂತ್ರವನ್ನು ಪಠಿಸಿ ಕಚನ ಬದುಕಿಸುತ್ತೇನೆ. ಬಾ ಕಚ ಬಾ ಎಂದು ಕರೆದಾಗ ಕಚ ಬಂದು ವಂದಿಸುತ್ತಾನೆ. ಆಗ ದೇವಾಯನಿ ಸಖನೇ “ಎತ್ತಲಯ್ದಿದೆ ಸಖನೆ ಬರುವರೆ| ಹೊತ್ತು ಬಹಳಾಗಿಹುದು ಭೋಜನ|ಕರ್ತಿಯೊಳು ಕುಳಿರೆನಲು ಕಚನೆಂದನಾ ಕ್ಷಣದಿ||” ಎಲ್ಲಿಗೆ ಹೋದೆ ಸಖನೇ ಬೆಳಗಿನಿಂದ ಇಲ್ಲಿಯವರೆಗೆ ಹೊತ್ತು ಬಹಳವಾಗಿದೆ. ಈ ಸಖಿ ದೇವಯಾನಿ ನೆನಪು ಬರಲಿಲ್ಲವೇ ಎಂದಾಗ ಕಚನು ದುಷ್ಟ ಧೂಮಕೇತನಿಂದ ಹತನಾದ ವಿಷಯ ಹೇಳಿದನು. ಆಗ ದೇವಯಾನಿ ಪಿತನೇ ಕೇಳಿದೆಯಾ “ಪಿತನೆ ಪೇಳಿದೇನು ದುರುಳರು| ನಿನ್ನಯ ಶಿಷ್ಯ| ರತಿಮದಾಂಧಿತನದೊಳಿರ್ಪರು|| ಹಿತವೇ ನಿನಗೀ ಪರಿಯ ಗೆಯ್ದುದು| ಪೇಳೆಂಬ ತನ್ನ| ಸುತೆಯೊಳೆಂದನುಶನ ಬಿಸುಸುಯ್ದು||” ಕಚನ ಮಾತನ್ನು ಕೇಳಿದೇಯಾ ತಂದೆ ನಿನ್ನ ಶಿಷ್ಯರು 67 ಕೋಟಿ ರಾಕ್ಷಸರು ದುಷ್ಟರು ಆತಿ ಮದಾಂಧರು ಅವರಿಗೆ ಏಕೆ ವಿದ್ಯೆ ಹೇಳುತ್ತೀಯಾ ಎಂದು ಆವಾಗಲೇ ಹೇಳಿದೆ ನಾವು ಈ ಪುರ ಬಿಟ್ಟು ಹೋಗೋಣ ಎಂದು ಹೇಳಿದ ಮಾತಿಗೆ ಸಮಾಧಾನದಿಂದ ಮಗಳೆ ಇನ್ನೊಂದು ಸರಿ ತಪ್ಪನ್ನು ಅವರು ಮಾಡಿದರೆ ಶಿಕ್ಷೆ ಕೊಡುತ್ತೇನೆ. ಈಗ ಕಚ ಬಂದನಲ್ಲಾ ಸರಿ ಊಟ ಹಾಕು ಆಮೇಲೆ ನೋಡೋಣ.
“ಒಳೀತು ಮುಖಗಯ್ವೇನೆನುತ| ಖಳರಾಯ| ಸಲಕರಣೆ ಸಂಗ್ರಹಿಸುತ|| ಒಲವಿಂದಲಿರಲಾಗಳು| ವೃಷಪರ್ವ| ನಿಳಯಕೊಂದಿನ ಮುದದೊಳು||” ಆಹಾ ಗುರುಗಳು ಹೇಳಿದ ಬರುವ ಸಪ್ತಮಿಯಂದು ಮಖ ಯಾಗಕ್ಕಾಗಿ ಸಿದ್ದ ಪಡಿಸು ಎಂದು ಅಂದು ದೇವಲೋಕದಲ್ಲಿ ಬಿತ್ತರಿಸಿದರಲ್ಲ. ಅದಕ್ಕಾಗಿ ಕುಶ ಸಮೀಧೆ ಮುಂತಾದ ಸಲಕರಣೆಯನ್ನು ಸಿದ್ದಪಡಿಸು ವೃಷಪರ್ವ ಎಂದು ಸೂಚಿಸಿದಲ್ಲ. ಆದಕ್ಕಾಗಿ ಕೆಲವಷ್ಟು ಸಂಗ್ರಹಿಸಿದೆ ಇನ್ನು ಸಂಗ್ರಹಿಸಬೇಕು ಹೋಗುತ್ತೇನೆ ಆ ಕಡೆಗೆ ಅರೆ ಅರೆ ಯಾರು ಯಾರದು ಈ ಕಡೆಗೆ ಬರುತ್ತಿರುವುದು ಇವನೇ ಕಚನಲ್ಲವೇ “ಕೆರಳಿ ಗರ್ಜಿಪುದೇಕೆನ್ನೊಳು| ಗುರುಸುತನು ನಾನಹುದು ವಿದ್ಯೆಯ| ನರಿತುಕೊಂಬರೆ ಶುಕ್ರನೊಳು ಪರಿ| ಚರಿಯ ಗೆಯ್ವೆ||” ಅಯ್ಯ ರಾಕ್ಷಸನೇ ಏಕೆ ಕ್ರೋಧ ದಿಂದ ಕೆರಳಿ ಘರ್ಜಿಸುತ್ತಿದ್ಯಾ, ಕೂಗುತ್ತಿದ್ಯಾ ನಾನು ದೇವ ಗುರು ಬ್ರಹಸ್ಪತಿಯಾಚಾರ್ಯರ ಮಗ ಕಚ, ಅಸುರ ಗುರು ಶುಕ್ರಾಚಾರ್ಯರಲ್ಲಿ ವಿದ್ಯೆಯನ್ನು ಕಲಿಯಲು ಬಂದಿದ್ದೇನೆ. ಈಗ ಕುಶ ಸಮಿಧೆ ತೆಗೆದುಕೊಂಡು ಪರಿಚಾರಕ್ಕೆ ಬಂದಿದ್ದೇನೆ ದಾರಿ ಬಿಡಯ್ಯ ಮುಂದೆ ಹೋಗುತ್ತೇನೆ. ಆಹಾ ದುರುಳ “ದುರುಳ ಕೇಳ್ ವರ ಮಂತ್ರಸಾರವ| ನರಿತು ಸುರರೊಡಗೂಡಿ ದನುಜರ| ಕೊರಳರಿವೆ ನೀ ಭಲರೆ ಶಿರ ಕ|ತ್ತರಿಪೇನಿಗ||” ಆಹಾ ದುರುಳ ಕಚನೇ ನಿನ್ನ ಕುತಂತ್ರ ಆ ದೇವತೆಗಳ ತಂತ್ರ ನಮಗರಿವಿಲ್ಲವೇ ಶುಕ್ರಾಚಾರ್ಯರಲ್ಲಿ ಮೃತ ಸಂಜೀವಿನಿ ಮಂತ್ರ ಇದೆ ಎಂದು ತಿಳಿದು ಕುತಂತ್ರದಿಂದ ದೇವಲೋಕಕ್ಕೆ ಅಪಹರಿಸಲು ಬಂದೆಯಾ ನಿನ್ನ ಕತ್ತರಿಸಿ ಬಿಡುತ್ತೇನೆ ಜತನ ಹೋಗು ಹಿಂದಕ್ಕೆ ನಿನ್ನ ಲೋಕದೆಡಗೆ ಹೋಗು ಎಂದಾಗ, ಕಚನು ಏನು ಬೇಕಾದರೆ ಮಾಡು ಗುರು ಸೇವೆಗೆ ದಾರಿ ಬಿಡು ಎಂದಾಗ ಹರಿತವಾದ ಕತ್ತಿಯಿಂದ ಕಚನ ತಲೆಯನ್ನು ಕಡಿದು ಕೊರೆದು ಆತನ ದೇಹ ಸುಟ್ಟು ಬೂದಿ ಮಾಡಿ ಚೂರ್ಣವನ್ನು ಮದಿರೆಗೆ ಬೆರೆಸಿ ಆ ಸುರೆಯನು ಗುರು ಶುಕ್ರಾಚಾರ್ಯರಿಗೆ ಕೊಟ್ಟು ವೃಷಪರ್ವ ವಿನಯದಿಂದ ಗುರುಗಳಿಗೆ ಮಧುಪಾನವನ್ನು ಕುಡಿಸುತ್ತಾನೆ.
“ಪರಮ ಸಂತೋಷದಿ ಖಳ ಪೋಗೆ| ಪ್ರಭಾ|ಕರನು ವೇಗದೊಳಸ್ತಮಯನಾಗೆ|| ವಿರಚಿಸಿಯಾಹ್ನಿಕ ನಿಯಮದಲಿ|ಗುರು| ತೆರಳೆ ಭೋಜನಕೆಂದು ವಿಭವದಲಿ||” ಅಂತು ಗುರುಗಳಿಗೆ ಮಧುಪಾನ ಕುಡಿಸಿಯಾಯಿತು. ಕಚನ ಅಂತ್ಯವೂ ಆಯಿತು. ಆಹಾ ಆಹಾ ಎಂದು ಸಂತೋಷದಿಂದ ವೃಷಪರ್ವ ನಿಗ್ರಮಿಸುತ್ತಾನೆ. ವೃಷವರ್ಪನ ಪಾತ್ರದಲ್ಲಿ ಪಕಳಕುಂಜ ಶ್ಯಾಮ ಭಟ್ ಅರ್ಥಪೂರ್ಣ ಸಂಭಾಷಣೆಯ ಮೂಲಕ ರಂಜಿಸಿದರು. ಆ ಸಮಯದಲ್ಲಿ ಸೂರ್ಯಾಸ್ತದ ಸಮಯ ನಿತ್ಯ ಜಪತಪಗಳನ್ನು ಮಾಡಿ ಶುಕ್ರಾಚಾರ್ಯರು ಭೋಜನಕ್ಕೆ ಮಗಳಾದ ದೇವಯಾನಿಯನ್ನು ಕರೆದಾಗ ಪುನಃ ಕಚನ್ನೆಲ್ಲಿ ತಂದೆ ಎಂದಾ ತನ್ನ ಜ್ಞಾನ ದೃಷ್ಟಿಯಿಂದ ತೆರೆದು ನೋಡಿದಾಗ ದುರುಳರು ಎಸೆದ ಕೃತ್ಯವನ್ನು ನೋಡಿ ಹೇಸಿ ಶುಕ್ರಾಚಾರ್ಯರು “ಪರಮಸಂಜೀವಿನಮಂತ್ರವನು|ಬೇಗ| ಸ್ಮರಿಸಿ ಕರೆಯೆ ಜೀವದೊಳವನು|| ಬರುವ ದಾರಿಯ ತೋರು ತೋರೆನುತ|ಕೂಗು| ತಿರಲು ತನ್ನುದರದಿ ಕಂಗೆಡುತ||” ತರಳೇ ಕಚನು ತನ್ನ ಉದರದೊಳಗೆ ಇದ್ದಾನೆ. ಪಾಪಿ ರಾಕ್ಷಸರು ಅತನ ಕೊಂದು ಭಸ್ಮ ಮಾಡಿ ನಾನು ಕುಡಿದ ಮಧುಪಾನದೊಳು ಬೆರೆಸಿದರಿಂದ ಆ ಕಚನ ದೇಹದ ಭಸ್ಮ ನನ್ನ ಉದರದೊಳು ಸೇರಿಕೊಂಡಿದೆ. ಅದಕ್ಕೆ ಶುಕ್ರಾಚಾರ್ಯರು ಕೋಪದಿಂದ ಎಲಾ ವೃಷಪರ್ವ ನೀನು ಮಾಡಿದ ತಪ್ಪಿಗಾಗಿ ನಿನಗೆ ಮುಂದೆ ಎಲ್ಲೆಲ್ಲೂ ಅಪಜಯವೇ ಬರಲಿ. ಹಾಗೆ ನಾನು ಮೋಸದಿಂದ ಈ ಸುರೆಯನ್ನು ಕುಡಿದೆ. ಇಂತಹ ಬ್ರಾಹ್ಮಣರು ಯಾರಾದರೂ ಮಧ್ಯಪಾನ ಮಾಡಿದರೆ ಈ ಶುಕ್ರಾಚಾರ್ಯನ ಶಾಪ ಕೇಳಿ ಮಧ್ಯಪಾನ ಮಾಡಿದ ಬ್ರಾಹ್ಮಣರು ದಟ್ಟ ದರಿದ್ರ ಹೊಂದಲಿ ಎಂದು ಗುರು ಶುಕ್ರಾಚಾರ್ಯ ಶಾಪವನ್ನು ಕೊಡುತ್ತಾನೆ. ಏನು ಮಾಡುದು ಕಚನು ಹೊರಗೆ ಬರಬೇಕಾದರೆ ನಾನು ಉದರ ಸೀಳಬೇಕು. ಸರಿ ಮಗು ಕಚನೇ ನೀನಗೆ ಒಂದು ದಿವ್ಯವಾದ ಮೃತ ಸಂಜೀವಿನ ಮಂತ್ರವನ್ನು ಬೋಧಿಸುತ್ತೇನೆ. ಇದೇ ನಿನ್ನ ಕೊನೆಯ ಅಭ್ಯಾಸ ಆಮೇಲೆ ನನ್ನ ಉದರವನ್ನು ಬಗೆದು ಬಿಡುತ್ತೇನೆ. ಒಳ್ಳೆಯದಾಗಲಿ. ಚಿರಂಜೀವಿಯಾಗು ಕಚ ಎಂದು ಗುರು ಶುಕ್ರಾಚಾರ್ಯರು ತನ್ನ ಉದರ ಬಗೆದು ಕಚನನ್ನು ಬದುಕಿಸುತ್ತಾರೆ. ಅನಂತರ ಮೃತ ಸಂಜೀವನ ಮಂತ್ರದಿಂದ ಕಚನು ಗುರು ಶುಕ್ರಾಚಾರ್ಯರ ಬದುಕಿಸುತ್ತಾನೆ. ಗುರುಗಳ ಅಪ್ಪಣೆ ಪಡೆದು ದೇವಲೋಕಕ್ಕೆ ಹೊರಟು ನಿಂತ ಕಚನು ಸಖಿಯಾದ ಗುರುಪುತ್ರಿಯಾದ ದೇವಯಾನಿಗೆ “ಪೋಗಿ ಬಹೆ ನಾ ನಾಗವೇಣಿಯೇ| ಆಗಮಿಪೆ ಸದ್ಯದಲಿ ದಯದೊಳ| ಗೀಗಲಪ್ಪಣೆ ಪಾಲಿಸೆನೆ ಶಿರ|ವಾಗುತವಳು||” ದೇವಾಯಾನಿ ನಾನು ಗುರುಗಳ ಆಪ್ಪಣೆ ಪಡೆದು ಹೋಗುತ್ತಿದ್ದೇನೆ. ನಿನ್ನ ಅಪ್ಪಣೆ ಇರುದಲ್ಲವೇ ಎಂದಾಗ ದೇವಯಾನಿ “ಕಾಮಸನ್ನಿಭಾಂಗ ವಿದ್ಯಾ|ಕಾಮಿತದಿ ಬಂದಾರಭ್ಯ| ಪ್ರೇಮಪಾತ್ರರ್ಧಾಂಗನೆಂದೇ| ನಾ ಮನದಿ ನಂಬಿರ್ಪೇನು||” ಅಯ್ಯ ಕಚನೇ ನೀನು ಬಂದಾಗನಿಂದ ಇಂದಿನವರೆಗೂ ನಿನ್ನ ಕಾಮಾಸನ್ನಿಭ ರೂಪಕ್ಕೆ ನಾನು ಅನುರಕ್ತಳಾಗಿದ್ದೇನೆ. ಅದರಿಂದಲೇ ನಿನ್ನ ವರಿಸಿ ನಿನ್ನ ಸೇವೆಯನ್ನು ಮಾಡುತ್ತೇನೆ. ನನ್ನ ಕಲ್ಯಾಣವಾಗಿ ನನ್ನ ಬಾಳು ಬೆಳಗಿಸು ಸಖನೇ ಎಂದು ದೇವಯಾನಿ ಪೇಳಿದಾಗ ಕಚನು “ಹರ ಹರ ನೀನೇತಕಿಂಥಾ ದುರ್ಭಾಷೆಯ| ನೊರೆಯುವೆ ಪ್ರಿಯೆ ಸಖಿಯೆ|| ಗುರುಸುತೆಯೆನ್ನ ಸಹೋದರಿ ನಮಿಸುವೆ| ಪರಮ ಸುಜ್ಞಾನಿ ನೀನು||” ದೇವಯಾನಿ ಏನು ಮಾತಾಡುತ್ತಿದ್ದೀಯಾ ಇಷ್ಟು ದುರ್ಭಾಷೆಯ ಆಸೆಯೋ ನಿನಗೆ, ಅಂದು ನಾನು ಆಶ್ರಮಕ್ಕೆ ಬಂದಾಗ ಬ್ರಹ್ಮಚರ್ಯ ವೃತವನ್ನು ಪಾಲಿಸಿತ್ತಿದ್ದೇನೆ ಎಂದು ನುಡಿದೆ. ಇಂದು ಅದೇ ವೃತ್ತದಲ್ಲಿ ಇದ್ದೇನೆ. ಅದರಿಂದ ನಾನು ನಿನಗೆ ಸಹೋದರ ನೀನು ನನಗೆ ಸಹೋದರಿ ಹಾಗು ಗುರುಸುತೆ ಹರ ಹರ ಇದಕ್ಕೆ ನಾನು ಮನವೊಪ್ಪುದಿಲ್ಲ. ನೀನು ಬೇರೆಯವರನ್ನು ಮದುವೆಯಾಗಿ ಸುಖದಿಂದ ಚೆನ್ನಾಗಿ ಇರು. ನಾನು ಬರುತ್ತೇನೆ ದಾರಿಬಿಡು ಎಂದಾಗ ದೇವಯಾನಿ ಸಿಟ್ಟಿನಿಂದ ಶಾಪ ಕೊಡುತ್ತಾಳೆ. ಕಚ ನಿನಗೆ ವಿನಯದಿಂದ ಕೆಳದರೆ ಒಪ್ಪುದಿಲ್ಲ ನೀನು ಸಂಪಾದಿಸಿದ ಈ ಮೃತ ಸಂಜೀವಿನ ವಿದ್ಯೆ ನಿನಗೆ ಸಮಯಕ್ಕೆ ಸರಿಯಾಗಿ ಫಲಿಸದೇ ಹೋಗಲಿ ಎಂದು ಶಾಪ ಕೊಡುತ್ತಾಳೆ. ಆಗ ಕಚನು ನೀನು ಸಹ ನನ್ನ ಕಾಮಿಸಿದರ ಫಲದಿಂದ ನೀನು ನಿನ್ನಿಂದ ಕೆಳಜಾತಿಯವರನ್ನು ಮದುವೆಯಾಗಿ ಜಾತಿ ಹೀನಳಾಗಿ ಬದುಕು ಎಂದು ಕಚನು ಶಪಿಸಿ ದೇವಲೋಕದತ್ತ ನಡೆಯುತ್ತಾನೆ.
ಹೀಗೆ ಕಚನಾಗಿ ಸಂಘದ ಅಧ್ಯಕ್ಷರಾದ ಭಾಸ್ಕರ ಬಾರ್ಯರು, ಶುಕ್ರಾಚಾರ್ಯನ ಪಾತ್ರದಲ್ಲಿ ಡಾ. ವಿ. ವಿನಾಯಕ ಭಟ್ ಗಾಳಿಮನೆಯವರು ಹಾಗು ದೇವಯಾನಿ ಪಾತ್ರವನ್ನು ಡಾ. ಶ್ರೀಪತಿ ಕಲ್ಲೂರಾಯ, ಕುಂಜೂರುಪಂಜರವರು ಸೊಗಸಾಗಿ ನಿರ್ವಹಿಸಿ ಕಥೆಗೆ ಔಚಿತ್ಯ ಬಾರದ ರೀತಿಯಲ್ಲಿ ಸುಮಾರು ೩ ಗಂಟೆಗಳ ಕಚದೇವಯಾನಿ ಎಂಬ ತಾಳಮದ್ದಲೆ ನಡೆಯಿತು. ನಂತರ “ಮಂಗಲಂ ಭಗವಾನ್ ವಿಷ್ಣು ಮಂಗಲಂ ಮಧುಸೂದನ ಮಂಗಲಂ ದೇವಕಿ ಪುತ್ರೋ ಮಂಗಲಂ ಗರುಡಧ್ವಜ” ಎಂದು ಭಾಗವತರಾದ ಎರ್ಮಾಳ ವಾಸುದೇವ ಭಟ್ ಹಾಗು ಇವರಿಗೆ ಚಂಡೆ ಮದ್ದಳೆಯ ಸಾಥ್ ನೀಡಿದವರು ಕಾರ್ತಿಕ ಇನ್ನಂಜೆ ಮತ್ತು ಆದಿತ್ಯ ರಾವ್ ಸೊಗಸಾದ ಹಿಮ್ಮೇಳ ಮೂಡಿಬಂದಿತು. ಗೂಗಲ್ ಮೀಟ್ ಮುಕಾಂತರ ಸುಮಾರು ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಪ್ರೇಕ್ಷಕರು ವೀಕ್ಷಿಸಿದರು. ಡೆಲ್ಲಿ, ಮುಂಬಯಿ, ಮಸ್ಕತ್, ದುಬೈ, ಚೈನಾ, ಬೆಂಗಳೂರು,ಉತ್ತರಕನ್ನಡ, ಶಿವಮೊಗ್ಗ, ಉಡುಪಿ ಹಾಗು ಸುತ್ತಮುತ್ತಲಿನಿಂದ ತಾಳಮದ್ದಳೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ವಾರ ದಿನಾಂಕ 26-06-2021ರಂದು ಶ್ರೀ ಆಂಜನೇಯ ಯಕ್ಷಗಾನ ಕಲಾ ಮಂಡಳಿಯ ಮಹಿಳಾ ಕಲಾವಿದರರಿಂದ ಇಂದ್ರಜಿತು ಕಾಳಗ ಎಂಬ ತಾಳಮದ್ದಳೆ ಹೀಗೆ ಗೂಗಲ್ ಮೀಟ್ ಅಂತರ್ಜಾಲ ಯಕ್ಷಗಾನ ತಾಳಮದ್ದಳೆಯನ್ನು https://meet.google.com/ggj-qatd-ccx ಲಿಂಕ್ ನಲ್ಲಿಪ್ರೇಕ್ಷಕರು ವೀಕ್ಷಿಸಬಹುದೆಂದು ಸಂಘದ ಅಧ್ಯಕ್ಷರು ಭಾಸ್ಕರ ಬಾರ್ಯರು ಪ್ರತಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
✍️ ಪ್ರಸಂಗಕರ್ತರು ಚಾರ ಪ್ರದೀಪ ಹೆಬ್ಬಾರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.