ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು ತಾಲ್ಲೂಕಿನ ಯಶವಂತಪುರ ಗ್ರಾಮದಲ್ಲಿ ಆರೋಗ್ಯ ಇಲಾಖೆಯ ಉಪಕೇಂದ್ರದಲ್ಲಿ “ಶೂನ್ಯ ಮಲೇರಿಯಾ ಗುರಿಯನ್ನು ತಲುಪೋಣಾ” ಎಂಬ ಕಾರ್ಯಕ್ರಮದ ಶೀರ್ಷಿಕೆಯಲ್ಲಿ “ಮಲೇರಿಯಾ ನಿರ್ಮೂಲನೆ ದಿನವನ್ನು” ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ತೋರ್ನಹಳ್ಳಿ ಆಡಳಿತ ವೈದ್ಯಾಧಿಕಾರಿಗಳಾದ ಶ್ರೀಮತಿ ಡಾ.ವಿನೂತ ರವರು ಮಾತನಾಡುತ್ತಾ “ಮಲೇರಿಯಾ ಕಾಯಿಲೆಯೂ ಪರಿಸರ, ಮನೆ, ಶಾಲೆ ಇತರೆ ಕಡೆ ಹಳ್ಳಗಳಲ್ಲಿ ಅಕ್ಕ-ಪಕ್ಕ ನಿಂತ ಕೊಳಚೆ ನೀರಿನ ಮೇಲೆ ಕುಳಿತ ಸೊಳ್ಳೆಗಳು ಅಂದರೆ ಅದರಲ್ಲೂ ಅನಾಪೀಲಸ್ ಸೊಳ್ಳೆಯಿಂದ ಈ ಮಲೇರಿಯಾ ಹರಡುತ್ತದೆ. ಆ ನಿಟ್ಟಿನಲ್ಲಿ ನಾವೆಲ್ಲಾ ಸುರಕ್ಷಿತ ಕ್ರಮಗಳನ್ನು ಅನುಸರಿಸುವ ಮೂಲಕ ನಾವೆಲ್ಲಾ ಶೂನ್ಯ ಮಲೇರಿಯಾವನ್ನು ಮಾಡೋಣಾ” ಎಂದರು.
ಕಾರ್ಯಕ್ರಮದಲ್ಲಿ ಮಡಿವಾಳ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರು ಹಾಗೂ ಮುಖಂಡರಾದ ಮುನಿರಾಜ್ ಟಿ.ಗೌಡ ರವರು ಮಾತನಾಡಿ “ನಮ್ಮ ಗ್ರಾಮೀಣ ಪ್ರದೇಶದಲ್ಲಿ ಶೂನ್ಯ ಮಲೇರಿಯಾ ಎಂಬ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಢಿಸುವಂತಹ ಬಹು ಉತ್ತಮ ಕಾರ್ಯಕ್ರಮ ಮಾಡಿರುವ ಆರೋಗ್ಯ ಇಲಾಖೆ ನಮ್ಮ ಪರವಾಗಿ ಹೃದಯಪೂರ್ವಕ ಧನ್ಯವಾದಗಳು, ಹಾಗೇ ಪ್ರತಿಯೋಬ್ಬರು ನಿಮ್ಮ ಮನೆಯ ಅಕ್ಕ-ಪಕ್ಕ ಸ್ವಚ್ಚತೆಯಿಂದ ಸುರಕ್ಷಿತವಾಗಿ ಇರುವ ಮೂಲಕ ಇತರರಿಗೆ ಮಾದರಿಯಾಗುವ ಮೂಲಕ ಮಲೇರಿಯಾ ಮಹಾಮಾರಿಯನ್ನು ಶೂನ್ಯ ಮಾಡುವ ಹಾದಿಯ ಕಡೆ ಎಲ್ಲಾರೂ ಸಾಗೋಣಾ” ಎಂದರು.
ಕಾರ್ಯಕ್ರಮದಲ್ಲಿ ತೋರ್ನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಡಾ.ವಿನೂತ, ಮುನಿರಾಜ್ ಟಿ.ಗೌಡ, ಯಶವಂತಪುರ ಗ್ರಾಮದ ಸಿ.ಹೆಚ್.ಓ ನಯನ.ಕೆ.ಆರ್, ಗ್ರಾಮ ಪಂಚಾಯಿತಿ ಸದಸ್ಯರಾದ ಲಾವಣ್ಯ ರಾಘವೇಂದ್ರ, ದಯಾನಂದ, ಡೈರಿ ಮುನಿರಾಜ್, ಪ್ರಾಥಮಿಕ ಶಾಲಾ ಶಿಕ್ಷಕಿ ರಾಧಾಬಾಯಿ, ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀಮತಿ ಲಕ್ಷ್ಮೀದೇವಿ, ವೀಣಾ, ಸಹಾಯಕರು, ಆಶಾ ಕಾರ್ಯಕರ್ತೆಯರು, ಗ್ರಾಮದ ನೀತಿಶ್ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೋಳಿಸಿದರು.
ವರದಿ: ಲಕ್ಕೂರು ಎಂ ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.