ಕೋಲಾರ ( ವಿಶ್ವ ಕನ್ನಡಿಗ ನ್ಯೂಸ್ ) :- ಪಾಶ್ಚಾತ್ಯ ಸಂಸ್ಕೃತಿ ಪಾರ್ಟಿ , ಹುಟ್ಟು ಹಬ್ಬ , ಬಡ್ತಿ ಇಂತಹ ಸಂತೋಷದ ಸಮಯದಲ್ಲಿ ಜನರು ಹೆಚ್ಚಾಗಿ ಪಾಶ್ಚಾತ್ಯ ಸಂಸ್ಕೃತಿಯ ಅಳವಡಿಕೆಯಿಂದ ಮಾದಕ ವಸ್ತುಗಳ ಸೇವನೆ ಮಾಡುತ್ತಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ | ಜಗದೀಶ್ ಅವರು ತಿಳಿಸಿದರು.
ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ , ಜಿಲ್ಲಾ ಆಡಳಿತ , ಜಿಲ್ಲಾ ಪಂಚಾಯತ್ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ ಸಂಯುಕ್ತಾಶಯದಲ್ಲಿ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ಬಗ್ಗೆ ಸತ್ಯ ಸಂಗತಿ ಹಂಚಿಕೊಳ್ಳಿ , ಜೀವ ಉಳಿಸಿ ಎಂಬ ಜಾಗೃತಿ ಘೋಷಣೆಯ ರೀತಿಯಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು , ಇತ್ತೀಚಿನ ದಿನಗಳಲ್ಲಿ ಜನರು ದುಷ್ಟಟಗಳಿಗೆ ದಾಸಾರಾಗಿದ್ದಾರೆ. ಮಾದಕ ವಸ್ತುಗಳಿಗೆ ದಾಸರಾಗಿರುವುದು ಎಂದರೆ ಜೀವನವನ್ನು ನಾಶ ಮಾಡಿಕೊಳ್ಳುವುದು . ಯಾವುದೇ ಕಾರಣಕ್ಕೂ ಯುವಜನರು ಇಂಥ ದುಷ್ಟಟಗಳಿಗೆ ಇವರ ದಾಸರಾಗಬಾರದು.
ಒಳ್ಳೆಯ ಮಾರ್ಗದಲ್ಲಿ ಮುನ್ನಡೆದರೆ ಉತ್ತಮ ಭವಿಷ್ಯ ಕಟ್ಟಿಕೊಳ್ಳಬಹುದು ಎಂದು ತಿಳಿಸಿದರು . ಸಮಾಜದಲ್ಲಿ ಮಾದಕ ದ್ರವ್ಯಗಳಾದ ಹೊಗೆಸೊಪ್ಪು , ಸೀಗರೇಟ್ , ಗುಟ್ಕಾ , ಗಾಂಜಾ , ಡ್ರಗ್ಸ್ಗಳನ್ನು ಹೆಚ್ಚು ಯುವಕರ ಮೇಲೆ ಪರಿಣಾಮ ಬೀರುತ್ತವೆ . ಪಾರ್ಟಿಗಳು ಹೆಚ್ಚು ಮಾದಕ ದ್ರವ್ಯಗಳ ಸೇವನೆಗೆ ಹೆಚ್ಚು ಅವಕಾಶ ಕಲ್ಪಿಸುತ್ತದೆ. ಡ್ರಗ್ಸ್ಗಳನ್ನು ಸಮಾಜದ ಒಳಿತಿಗಾಗಿ ಅಂದರೆ ಶಸ್ತ್ರಚಿಕಿತ್ಸೆ ಮಾಡುವಾಗ ನೋವಾಗದಂತೆ ಚುಚ್ಚುಮದ್ದಿನ ರೂಪದಲ್ಲಿ ಮನುಷ್ಯನ ದೇಹಕ್ಕೆ ಕೊಡಲಾಗುತ್ತದೆ . ಇಂತಹ ಉಪಯೋಗಳಿಗೆ ಮಾತ್ರ ಮಾದಕಗಳನ್ನು ಬಳಸಬೇಕು ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಿ.ಹೆಚ್.ಗಂಗಾಧರ್ ಅವರು ಮಾತನಾಡಿ , ಧೂಮಪಾನ , ಗಾಂಜಾ ಸೇದುವುದು , ಜಗಿಯುವುದು , ಕುಡಿಯುವುದು , ಇಂಜೆಕ್ಷನ್ ಚುಚ್ಚಿಕೊಳ್ಳುವುದು ಮುಂತಾದ ಅನೇಕ ವಿಧಗಳಲ್ಲಿ ಮಾದಕ ದ್ರವ್ಯ ಬಳಕೆಯಾಗುತ್ತದೆ . ಇದು ಮೆದುಳಿನ ಜೀವಕೋಶಗಳ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಮನಸ್ಥಿತಿ ಏರುಪೇರು ಆಗುವುದರ ಜೊತೆಗೆ ಲೈಂಗಿಕ ದೌರ್ಬಲ್ಯಗಳು ಆಗುವಂತಹ ಸಾಧ್ಯತೆಗಳಿವೆ . ಇಂತಹ ವ್ಯಸನಗಳಿಗೆ ಕಾನೂನು ಸೇವೆಗಳ ಪ್ರಾಧಿಕಾರ ಅಡಿಯಲ್ಲಿ ಎಲ್ಲಾ ಬಡಕುಟುಂಬಗಳಿಗೂ ಉಚಿತ ನೇರವು ದೊರೆಯುತ್ತದೆ . ಇಂತಹ ವ್ಯಸನಗಳಿಗೆ ಒಳಗಾಗಿರುವ ವ್ಯಕ್ತಿಗಳಿಗೂ ಹಾಗೂ ಒಳಗಾಗಿರುವಂತೆ ಮಾಡಿದ ವ್ಯಕ್ತಿಗಳಿಗೂ ಶಿಕ್ಷೆಗೆ ಒಳಗಾಗುತ್ತಾರೆ ಎಂದು ತಿಳಿಸಿದರು .
ಪ್ರಧಾನ ಸಿವಿಲ್ ನ್ಯಾಯಧೀಶರಾದ ಅನಿತಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಾದಕ ವಸ್ತುಗಳನ್ನು ಮಾರಟ ಮಾಡುವವರಿಗೆ ಸಾಗಾಣಿಕೆ ಮಾಡುವರಿಗೆ ತಯಾರಿ ಮಾಡುವರರಿಗೆ ಮಾದಕ ವಸ್ತುಗಳ ಸೇವನೆ ಎನ್ಡಿಪಿಎಸ್ ಕಾಯ್ದೆ 1985 ಅಡಿಯಲ್ಲಿ ಶಿಕ್ಷಾರ್ಹರು ಆಗಿರುತ್ತಾರೆ , 1 ಕೆ.ಜಿ ಒಳಗೆ Narcotic Drug or Psychotropic Substance ಇದ್ದರೆ ಅವರಿಗೆ 3 ವರ್ಷ ಜೈಲು ಶಿಕ್ಷೆ ಇರುತ್ತದೆ . ಅದಕ್ಕಿಂತ ಹೆಚ್ಚಿಗೆ ಇದ್ದರೆ ಅವರಿಗೆ 10 ರಿಂದ 20 ವರ್ಷ ಜೈಲು ಶಿಕ್ಷೆ ಜೊತೆಗೆ ದಂಡ ಸಹ ಇರುತ್ತದೆ ಎಂದು ತಿಳಿಸಿದರು .
ಕುಷ್ಠ ರೋಗ ನಿಯಂತ್ರಣಾಧಿಕಾರಿಗಳಾದ ಡಾ | ನಾರಾಯಣಸ್ವಾಮಿ ಅವರು ಮಾತನಾಡಿ , ಮಾದಕ ವಸ್ತುಗಳನ್ನು ಕೆಮ್ಮು ಬಂದಾಗ ಸಿರಪ್ ತೆಗೆದುಕೊಳ್ಳಲು ವೈದ್ಯರು ಸೂಚನೆ ನೀಡುತ್ತಾರೆ ಹಾಗೂ ಕೆಲವರು ಖಿನ್ನತೆಗೆ ಒಳಗಾಗಿದ್ದರೆ ನಿದ್ದೆ ಮಾತ್ರೆಗಳನ್ನು ತೆಗೆದುಕೊಳ್ಳವಂತೆ ಸಲಹೆ ನೀಡುತ್ತಾರೆ ಅದರೆ ಆ ಖಾಯಿಲೆ ವಾಸಿಯಾದ ನಂತರವು ಸಹ ಮಾದಕ ವಸ್ತುಗಳ ಬಳಕೆ ಮುಂದುವರೆಸುತ್ತಾರೆ . ಅದು ಇಲ್ಲ ಎಂದರೆ ಕೆಲಸ ಮಾಡಲಾಗುವುದಿಲ್ಲ ಹಾಗೂ ಬದುಕಲಾಗುವುದಿಲ್ಲ ಎಂಬ ಮನೋಭಾವನೆಗೆ ಬಂದು ಬಿಡುತ್ತಾರೆ.
ಮಾದಕ ವಸ್ತಗಳ ಸೇವನೆಯಿಂದ ಕ್ರಮೇಣ ದೇಹದಲ್ಲಿ ರೋಗನಿರೋಧಕ ಶಕ್ತಿ ಕ್ಷೀಣಿಸತೊಡಗುತ್ತದೆ ಹಾಗೂ ನಮ್ಮ ಮೆದುಳಿನ ಕ್ರಿಯೆಗಳಾದ ಕಲಿಕೆ , ತೀರ್ಪು , ನಿರ್ಧಾರ , ವರ್ತನೆ ನಿಯಂತ್ರಣ ಮುಂತಾದವುಗಳ ನಿರ್ವಹಣೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು . ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಕೆ.ಪಿ.ಶಂಕರಪ್ಪ , ವಕೀಲರ ಸಂಘದ ಅಧ್ಯಕ್ಷರಾದ ಶ್ರೀಧರ್ , ಮಲೇರಿಯಾ ನಿಯಂತ್ರಣಾಧಿಕಾರಿಗಳಾದ ಡಾ || ಕಮಲ , ಆಶಾ ಕಾರ್ಯಕರ್ತೆಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.