ಕರ್ನೂರು: ಕೋವಿಡ್ ಮಹಾಮಾರಿ ಕಾರಣ ದೀರ್ಘಕಾಲ ರಜೆಯಾದ್ದರಿಂದ ಯಾವುದೇ ಚಟುವಟಿಕೆಗಳಿಲ್ಲದೆ ಶಾಲಾ ಮೈದಾನ ಹಾಗೂ ಶಾಲೆಯ ಸುತ್ತಮುತ್ತಲಿನ ಪರಿಸರ ಕಾಡು ಇನ್ನಿತರ ಕಸಕಡ್ಡಿಗಳಿಂದ ಕೂಡಿತ್ತು. ಇನ್ನು ಕೆಲವೇ ದಿವಸಗಳಲ್ಲಿ ಶಾಲೆ ತೆರೆಯುವ ಸಂಭವನೀಯತೆ ಇದ್ದುದರಿಂದ ಕರ್ನೂರಿನ KMJ SYS SSF ಜಂಟಿ ಆಶ್ರಯದಲ್ಲಿ ಶಾಲಾ ವಾತಾವರಣವನ್ನು ಶುಚಿಗೊಳಿಸುವ ಕಾರ್ಯವನ್ನು ಮಾಡಲಾಯಿತು. 20ಕ್ಕಿಂತಲೂ ಹೆಚ್ಚು ಕಾರ್ಯಕರ್ತರು ಒಟ್ಟು ಸೇರಿ ಮಧ್ಯಾಹ್ನದವರೆಗೆ ಶಾಲಾ ಚೌಕಟ್ಟನ್ನು ಶುಚಿಗೊಳಿಸಲಾಯಿತು.
ಈ ಸಂದರ್ಭದಲ್ಲಿ ಈಶ್ವರಮಂಗಲ ಎಸ್ವೈಎಸ್ ಸೆಂಟರ್ ಅಧ್ಯಕ್ಷರಾದ ಅಬ್ದುಲ್ ಜಲೀಲ್ ಉಸ್ತಾದ್, ಪಲ್ಲಂಗೋಡ್ ಸೆಕ್ಟರ್ ಕಾರ್ಯದರ್ಶಿ ಯುನೈಸ್ ಕರ್ನೂರು, KMJ ನೇತಾರರಾದ ಅಬೂಬಕ್ಕರ್ ಸಿಎಂ ಸ್ವಚ್ಛತಾ ಕಾರ್ಯಕ್ರಮಕ್ಕೆ ನೇತೃತ್ವವಹಿಸಿದರು. ಶಾಲಾ ಪ್ರಭಾರ ಮುಖ್ಯ ಗುರುಗಳಾದ ರಮೇಶ್ ಶಿರ್ಲಾಲು , ಸಹಶಿಕ್ಷಕಿ ವಿಜೇತ ಎಸ್ಡಿಎಂಸಿ ಅಧ್ಯಕ್ಷರಾದ ಸೂಫಿ ಬಿಹೆಚ್ ಸದಸ್ಯರಾದ ಇಬ್ರಾಹಿಂ, ಎಸ್ಡಿಎಂಸಿ ಮಾಜಿ ಅಧ್ಯಕ್ಷರಾದ ಮಹಮ್ಮದ್ ಬೆದ್ರಾಡಿ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಅಬ್ದುಲ್ ಖಾದರ್ ಸ್ವಚ್ಛತಾ ಕಾರ್ಯಕ್ಕೆ ಉಪದೇಶ ನಿರ್ದೇಶಗಳನ್ನು ನೀಡಿದರು. ಕೆಲಸಕಾರ್ಯಗಳಲ್ಲಿ ತೊಡಗಿದೆ ಊರಿನ ಸಂಘಟನಾ ಕಾರ್ಯಕರ್ತರಿಗೆ ಪ್ರಭಾರ ಮುಖ್ಯಗುರುಗಳಾದ ರಮೇಶ್ ಶಿರ್ಲಾಲು ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.