ಮಸ್ಕತ್(www.vknews.in): ಈ ವರ್ಷದ ಜೂನ್ ತಿಂಗಳು ಕರೋನಾವೈರಸ್ ಪ್ರಾರಂಭದಿಂದ ಓಮಾನ್ ಗೆ ಅತ್ಯಂತ ಕಠೋರವಾದ ತಿಂಗಳಾಗಿದೆ ಎಂದು ಓಮಾನ್ ಆರೋಗ್ಯ ಇಲಾಖೆ ಹೇಳಿದೆ. ಓಮಾನ್ ನಲ್ಲಿ ಕೇವಲ ಜೂನ್ ತಿಂಗಳಲ್ಲಿ ಮಾತ್ರ ಸುಮಾರು 700 ಕೊವಿಡ್ ಮರಣ ದಾಖಲಾಗಿದೆ. ದೇಶದಲ್ಲಿ ಪ್ರತೀ ಗಂಟೆಗೆ ಸುಮಾರು 92 ಜನರು ಕೊವಿಡ್ ಸೋಂಕಿಗೊಳಗಾದರೆ, ಇವರಲ್ಲಿ ಇಬ್ಬರು ತಮ್ಮ ಜೀವ ಕಳೆದುಕೊಳ್ಳುತ್ತಿದ್ದಾರೆ. ದೇಶದ ಅರ್ಥ ವ್ಯವಸ್ಥೆಯನ್ನೇ ಬುಡಮೇಲುಗೊಳಿಸುವ ಈ ವೈರಸ್ ನಿಂದ ರಕ್ಷಿಸಿಕೊಳ್ಳಲು ಎಲ್ಲಾ ವಯೋಮಾನದವರಿಗೆ ಲಸಿಕೆಯನ್ನು ನೀಡುವ ಕಾರ್ಯವನ್ನು ತ್ವರಿತಗೊಳಿಸಬೇಕೆಂದು ಮಜ್ಲಿಸ್ ಅಲ್ ಶುರಾ ಸದಸ್ಯರು ಸರಕಾರಕ್ಕೆ ಮನವಿ ಮಾಡಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.