ಮನೆಯ ಬಳಿ ಬಂದ ಹಾವಿನ ಜೊತೆ ಕಾಳಗ ನೆಡಿಸಿ , ಬಾಯಿಯಿಂದ ತುಂಡು ತುಂಡಾಗಿ ಕತ್ತರಿಸಿ ಹಾಕಿದ ಬೆಕ್ಕು….
ಸಾಮಾಜಿಕ ಜಾಲ ತಾಣಗಳಲ್ಲಿ ವಿಡಿಯೋ ವೈರಲ್
(www.vknews.com) : ಹೌದು , ಸಾಕು ಪ್ರಾಣಿ ಬೆಕ್ಕು ತನ್ನ ಸಾಕುತ್ತಿರುವ ಒಡೆಯನ ಮನೆಯ ಬಳಿ ಬಂದ ವಿಷಕಾರಿ ಹಾವನ್ನು ಮನೆಯ ಒಳಗೆ ಹೋಗದಂತೆ ತಡೆದು ಹಾವಿನೊಂದಿಗೆ ಕೆಲ ಸಮಯ ರೋಚಕ ಕಾಳಗ ನಡೆಸಿರುವ ಘಟನೆ ಶಿಡ್ಲಘಟ್ಟ ತಾಲೂಕಿನ ಅರಿಕೆರೆ ಗ್ರಾಮದಲ್ಲಿ ನಡೆದಿದೆ.
ಶಿಡ್ಲಘಟ್ಟ ತಾಲ್ಲೂಕಿನ ಅರಿಕೆರೆ ಗ್ರಾಮದ ದೊಡ್ಡ ಮುನಿಯಪ್ಪ ರವರ ಮನೆಯ ಒಳಗೆ ಹೋಗಲು ಬಂದ ವಿಷಕಾರಿ ಹಾವನ್ನು ಮನೆಯೊಳಗೆ ಹೋಗದಂತೆ ತಡೆದ ಬೆಕ್ಕು, ತಪ್ಪಿಸಿಕೊಳ್ಳಲು ಹೋದ ಹಾವಿನೊಂದಿಗೆ ಕೆಲಕಾಲ ತನ್ನ ರೋಷದಿಂದ ಹಾವಿನ ಜೊತೆ ರೋಚಕ ಕಾಳಗ ನಡೆಸಿರುವ ದೃಶ್ಯವನ್ನು ದೊಡ್ಡ ಮುನಿಯಪ್ಪ ರವರ ಮಗ ಮುನಿರಾಜು ಸೆರೆ ಹಿಡಿದಿದ್ದಾರೆ.
ಹಾವಿನ ಜೊತೆ ಕಾಳಗ ನೆಡೆಸಿದ ಬೆಕ್ಕು ತನ್ನ ಬಾಯಿಯಿಂದ ತುಂಡು ತುಂಡಾಗಿ ಕತ್ತರಿಸಿ ಹಾಕಿ ತಿಂದಿರುವ ಅಪರೂಪದ ಕ್ಷಣಗಳ ವಿಡಿಯೋ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ.
ಸಾಮಾನ್ಯವಾಗಿ ಬೆಕ್ಕು ಮಾಂಸಾಹಾರಿ ಪ್ರಾಣಿ , ಇಲಿ, ಅಳಿಲು, ಕೀಟ, ಮೀನು, ಪಕ್ಷಿ ಮುಂತಾದವು ಬೆಕ್ಕಿನ ಸಾಮಾನ್ಯ ಆಹಾರ ಎಂದು ಹೇಳುತ್ತಾರೆ ಅಲ್ಲದೆ
ಇಲಿ ಹಿಡಿಯುವುದು ಬೆಕ್ಕಿಗೆ ಆನುವಂಶಿಕವಾಗಿ ಬಂದ ಗುಣ. ಬೆಕ್ಕು ಬೇರೆ ಬೇರೆ ಪ್ರಾಣಿಗಳನ್ನು ತಿನ್ನುವುದಾದರೂ ಇಲಿ ಅಳಿಲು ಅಥವಾ ಮೊಲಗಳನ್ನು ತಿನ್ನುವುದೇ ಹೆಚ್ಚು, ಅದರಲ್ಲಿ ಹಾವಿನ ರೋಚಕ ಕಾಳಗ ನಡೆಸಿ ಹಾವನ್ನು ತನ್ನ ಒಡೆಯನ ಮನೆ ಒಳಗೆ ಬಿಡದೆ ತನ್ನ ನಿಯತ್ತಿಗೆ ಸಾಕ್ಷಿಯೂಯಾಗಿದೆ.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.