ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು ಪಟ್ಟಣ್ಣದ ತಾಲ್ಲೂಕು ಕಚೇರಿಯ ಮುಂಭಾಗ ಅಖಿಲ ಭಾರತ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡೆರೇಷನ್ ಕರೆಯ ಮೇರೆಗೆ ಜುಲೈ 12 ರ ದಿನವನ್ನು ಬೇಡಿಕಾ ದಿನವನ್ನಾಗಿ ದೇಶಾದ್ಯಂತ ಆಚರಿಸಿ ಮನವಿ ಸಲ್ಲಿಸುವ ಕಾರ್ಯವನ್ನು ತಾಲ್ಲೂಕು ದಂಡಾಧಿಕಾರಿಗಳ ಮೂಲಕ, ಜಿಲ್ಲಾಧಿಕಾರಿಗಳು ಇವರ ಮೂಲಕ ಮಾನ್ಯ ಪ್ರಧಾನಮಂತ್ರಿಗಳಿಗೆ ಸಲ್ಲಿಸುವ ಕಾರ್ಯ ಮಾಡಲಾಯಿತು.
ಮನವಿ ಸಲ್ಲಿಸುವ ಕಾರ್ಯದಲ್ಲಿ ಮುಖಂಡರಾದ ಶ್ರೀಮತಿ ನಾಗರತ್ನಮ್ಮ ಪಾಲ್ಗೋಂಡು ಮಾತನಾಡುತ್ತಾ “ಕರೋನಾ ಸಂಕಷ್ಟದ ಸಂದರ್ಭದಲ್ಲಿ ತನ್ನ ಜೀವದ ಹಂಗನ್ನು ತೊರೆದು ಸದಾ ಜನರ ನಡುವೆಯೇ ತಮ್ಮ ಸೇವೆಯನ್ನು ಮಾಡುವ, ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಮಸೈಗಳು ಇರುವುದು ಎಲ್ಲಾರಿಗೂ ತಿಳಿದಿದೆ ಆ ನಿಟ್ಟಿನಲ್ಲಿ ಅವರ ಪರ ಸರ್ಕಾರ ಸದಾ ಬೆನ್ನಿಗೆ ನಿಲ್ಲಬೇಕಾಗಿರುವುದು ಅನಿವಾರ್ಯ. ಸಾಂಕ್ರಮಿಕ ರೋಗದ ವಿರುದ್ದ ಹೋರಾಡುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಸುರಕ್ಷತೆ, ಅಪಾಯ ಭತೈ, ಮತ್ತು ವಿಮಾ ರಕ್ಷಣೆ ಯನ್ನು ನೀಡುವ ಮೂಲಕ ನಿಮ್ಮೊಂದಿಗೆ ನಾವು ಇದ್ದೀವಿ ಎಂಬ ಸ್ಥೈರ್ಯ ನೀಡಬೇಕು. ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರನ್ನು ಹಾಗೂ ಸಹಾಯಕಿಯರನ್ನು ಖಾಯಂ ಗೋಳಿಸಬೇಕು, ಕನಿಷ್ಟ ವೇತನ ಹಾಗೂ ಸಾಮಾಜಿಕ ಭದ್ರತೆಗಳನ್ನು ನೀಡುವ ಕಾರ್ಯ ಮಾಡಬೇಕು ಎಂಬ ಮಹತ್ತರ ಬೇಡಿಕೆಗಳೊಂದಿಗೆ ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಕಾರ್ಯದಲ್ಲಿ ಮಾಲೂರು ತಾಲ್ಲೂಕು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಬೇಡಿಕಾ ದಿನವನ್ನು ಯಶಸ್ವಿಗೋಳಿಸಲಾಯಿತು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.