ಡೆಕ್ಕನ್ ಕಾಲೇಜ್ ಆಫ್ ಮೆಡಿಕಲ್ ಸೈನ್ಸ್ (ಡಿಸಿಎಂಎಸ್) ಭಾರತದ ಹೈದರಾಬಾದ್/ತೆಲಂಗಾಣದಲ್ಲಿರುವ ಒಂದು ವೈದ್ಯಕೀಯ ಕಾಲೇಜುಯಾಗಿದ್ದು, ಎಂಬಿಬಿಎಸ್, ಸ್ನಾತಕೋತ್ತರ ಪದವಿ / ಡಿಪ್ಲೊಮಾ ಮತ್ತು ಸೂಪರ್ಸ್ಪೆಷಾಲಿಟಿ ಕೋರ್ಸ್ಗಳನ್ನು ನೀಡುತ್ತದೆ. ಇದು ವಾರ್ಷಿಕವಾಗಿ 150 ಎಂಬಿಬಿಎಸ್ ಸೀಟುಗಳನ್ನು ಅನುಮೋದಿಸುತ್ತದೆ.
ಈ ಕಾಲೇಜು 2016-17ನೇ ಶೈಕ್ಷಣಿಕ ವರ್ಷದಿಂದ ವಾರಂಗಲ್ನ ಕೆಎನ್ಆರ್ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿದೆ. ಇದನ್ನು ಈ ಹಿಂದೆ ವಿಜಯವಾಡದ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಡಾ. ಎನ್. ಟಿ. ಆರ್. ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿತ್ತು. ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಆದೇಶದಂತೆ ಎಂಬಿಬಿಎಸ್ ಕೋರ್ಸ್ಗಾಗಿ ವಿಶ್ವವಿದ್ಯಾಲಯವು ನಿಗದಿಪಡಿಸಿದ ಪಠ್ಯಕ್ರಮವನ್ನು ಅನುಸರಿಸುತ್ತದೆ. ಭಾರತದ ಸಂವಿಧಾನದ ವಿಧಿ 30 (1) ರ ಅಡಿಯಲ್ಲಿ ನೀಡಲಾಗಿರುವ ಹಕ್ಕುಗಳನ್ನು ಉಲ್ಲಂಘಿಸದೆ ಅಲ್ಪಸಂಖ್ಯಾತ ಸಂಸ್ಥೆಗೆ ಅನ್ವಯವಾಗುವಂತಹ ನಿಯಮಗಳು, ನಿಯಂತ್ರಣ ಅಥವಾ ಆದೇಶಗಳನ್ನು ನಿರ್ವಹಣೆ ಗಮನಿಸುತ್ತದೆ.
ಭಾರತದ ಸಂವಿಧಾನದ 30 (1) ನೇ ವಿಧಿಯಡಿಯಲ್ಲಿ “ಡೆಕ್ಕನ್ ಕಾಲೇಜ್ ಆಫ್ ಮೆಡಿಕಲ್ ಸೈನ್ಸಸ್” ಅನ್ನು ದಾರ್-ಉಸ್-ಸಲಾಮ್ ಎಜುಕೇಷನಲ್ ಟ್ರಸ್ಟ್ ಎಂಬ ಮುಸ್ಲಿಂ ಅಲ್ಪಸಂಖ್ಯಾತ ಟ್ರಸ್ಟ್ ಸ್ಥಾಪಿಸಿದೆ ಮತ್ತು ನಿರ್ವಹಿಸುತ್ತದೆ, ದಾರ್-ಉಸ್-ಸಲಾಮ್ ಎಜುಕೇಷನಲ್ ಟ್ರಸ್ಟ್ ಸ್ವಾಯತ್ತ ಸಂಸ್ಥೆ. ಕಾಲೇಜನ್ನು ಮುಖ್ಯ ಆಡಳಿತಾಧಿಕಾರಿ ಡಾ. (ಕರ್ನಲ್) ಜಿ.ಕೆ.ಎನ್.ಪ್ರಸಾದ್ ನಿರ್ವಹಿಸುತ್ತಿದ್ದಾರೆ. ಡಾ. ಅಶ್ಫಾಕ್ ಹಸನ್ ಪ್ರಾಂಶುಪಾಲರು. ದಾರ್ -ಉಸ್-ಸಲಾಮ್ ಎಜುಕೇಷನಲ್ ಟ್ರಸ್ಟ್ (ಡಿಇಟಿ) ಅನ್ನು 1974 ರಲ್ಲಿ ದಿವಂಗತ ಸುಲ್ತಾನ್ ಸಲಾಹುದ್ದೀನ್ ಒವೈಸಿ (ಭಾರತದ ಮಾಜಿ ಸಂಸತ್ ಸದಸ್ಯ) ಅಧ್ಯಕ್ಷತೆಯಲ್ಲಿ ಸ್ವ-ಹಣಕಾಸು ಅಲ್ಪಸಂಖ್ಯಾತ ಸಂಸ್ಥೆಯಾಗಿ ಸ್ಥಾಪಿಸಲಾಯಿತು. ದಿವಂಗತ ಸುಲ್ತಾನ್ ಸಲಾಹುದ್ದೀನ್ ಒವೈಸಿ ಅವರ ಮರಣದ ನಂತರ ಈ ಟ್ರಸ್ಟ್ ಈಗ ಅಸದುದ್ದೀನ್ ಒವೈಸಿ ನೇತೃತ್ವದಲ್ಲಿದೆ.
ಅಂದಿನ ಹೈದರಾಬಾದಿನ ಪ್ರಸಿದ್ಧ ವ್ಯಕ್ತಿಗಳಲ್ಲಿ ಪರಿಗಣಿಸಲಾಗುತ್ತಿದ್ದವರಲ್ಲಿ ಖಾನ್ ಅಬ್ದುಲ್ ಲತೀಫ್ ಖಾನ್ ಸಹ ಒಬ್ಬರು. ತಮ್ಮ ಮನೆಯಲ್ಲಿ ತನ್ನ ಸ್ನೇಹಿತರೊಂದಿಗೆ ಒಂದು ಸಂಗತಿಯನ್ನು ಹಂಚಿಕೊಂಡರು. “ನಿಮಗೆಲ್ಲಾ ಗೊತ್ತಾ? ಡೆಕ್ಕನ್ ಕಾಲೇಜ್ ದಿಲೀಪ್ ಸಾಬ್ ಗೆ ಚಿರಋಣಿ. ಎನ್ ಟಿ ಆರ್ ಮುಖ್ಯಮಂತ್ರಿಯಾದ ಕೆಲವೇ ದಿನಗಳಲ್ಲಿ ಕಾಲೇಜಿನ ಅಸ್ತಿತ್ವವನ್ನು ರದ್ದುಗೊಳಿಸಿದರು. ಕೇಂದ್ರ ಸರ್ಕಾರ ಮತ್ತು ಮೆಡಿಕಲ್ ಕೌನ್ಸಿಲ್ ನಿಂದಲೂ ಸಹ ಇನ್ನೂ ಮೆಡಿಕಲ್ ಕಾಲೇಜಿಗೆ ಸಂಪೂರ್ಣ ಅನುಮತಿ ಸಿಕ್ಕಿರಲಿಲ್ಲ. ಮೆಡಿಕಲ್ ಕಾಲೇಜಿನ ಕನಸು ನುಚ್ಚುನೂರಾಗಿ ಹೋಯಿತು. ಈ ವಿಷಯ ಯೂಸುಫ್ ಭಾಯಿಗೆ ತಿಳಿಯಿತು. ಅವರು ಮುಂಬೈಯಿಂದ ತಕ್ಷಣ ಹೈದರಾಬಾದಿಗೆ ಬಂದರು. ಬೆಳಿಗ್ಗೆ ಎನ್ಟಿಆರ್ ರವರನ್ನು ಭೇಟಿ ಮಾಡಲು ಹೋದರು. ದಿಲೀಪ್ ಸಾಹೇಬರನ್ನು ಕಂಡು ಎನ್ಟಿಆರ್ ದಿಗ್ಬ್ರಮೆ ಗೊಂಡರು. ಮಾತುಕತೆ ನಡೆಯಿತು. ಮುಂಬೈಯಿಂದ ಇಷ್ಟು ದೂರ ಬರಲು ಕಾರಣ ಕೇಳಿದಾಗ, ದಿಲೀಪ್ ಸಾಬ್ ಹೇಳಿದರು – ದಯವಿಟ್ಟು ಡೆಕ್ಕನ್ ಕಾಲೇಜ್ ರದ್ಧತಿಯನ್ನು ಮರುಪರಿಶೀಲಿಸಬೇಕು. ಆಗ ಎನ್ಟಿಆರ್ ತನ್ನ ಪಿಎ ಅವರನ್ನು ಕರೆದು ತಕ್ಷಣವೇ ಕಾಲೇಜು ಜಾರಿಗೊಳ್ಳುವಂತೆ ಅನುಮತಿ ನೀಡಿದರು.
ಅಲ್ಲಿ ಓದಿ ವೈದ್ಯರಾಗಿರುವ, ವೈದ್ಯರಾಗುತ್ತಿರುವ ಭಾರತದ ಪ್ರಜೆಗಳು ಎಂದಿಗೂ ದಿಲೀಪ್ ಸಾಹೇಬರ ಈ ಋಣವನ್ನು ಮರೆಯುವಂತಿಲ್ಲ. ಸಾವು ನಿಶ್ಚಿತ. ಅವರು ನಮ್ಮನ್ನು ಅಗಲಿದ್ದಾರೆ. ಆದರೆ ಅವರು ಮಾಡಿರುವ ಪುಣ್ಯದ ಕೆಲಸಗಳು ಸದಾ ಅಮರವಾಗಿರುತ್ತವೆ. ನಾನು ಕೇಳಿಸಿಕೊಂಡ ಕೆಲವು ಮಾತುಗಳನ್ನು ನಿಮ್ಮ ಮುಂದಿಟ್ಟಿದ್ದೇನೆ. ಧನ್ಯವಾದಗಳು.
Zabiulla Khan
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.